ಶಾರದೋತ್ಸವ ಸಂಭ್ರಮದಲ್ಲಿ ನಡೆಯಿತು

0
30
loading...

ಅಥಣಿ, 9-ಕಾಳಿಕಾದೇವಿ  ಉತ್ಸವ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ಅಭ್ಯುದಯ  ಯುವಕ ಸಂಘ  ಶ್ರೀ ಕಾಳಿಕಾ ದೇವಸ್ಥಾನ  ಕಮಿಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2011 ರ  ಶಾರದೀಯ  ನವರಾತ್ರಿ ಉತ್ಸವ  ಸಮಾರಂಭವು ಅತೀ ಉತ್ಸಾಹದಲ್ಲಿ ಸಂಭ್ರಮದೊಂದಿಗೆ ನಡೆದು ಬಂದಿತು.

ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಪ್ರಾತಃಕಾಲ 6 ಗಂಟೆಗೆ ಪೂಜೆ ಪಂಚಾಮೃತ  ಅಭಿಷೇಕ, ಅಲಂಕಾರ, ಮಂತ್ರ ಪುಷ್ಪ ಹಾಗೂ ಘಟಸ್ಥಾಪನೆ ಜರುಗಿತು.  ರಾತ್ರಿ  8 ಗಂಟೆಗೆ ವೇ. ವಾದಿರಾಜಾಚಾರ್ಯ ಶೇ. ಜಂಬಗಿಯವರಿಂದಾ ಶ್ರೀ ದೇವಿಪುರಾಣದ ಸುಶ್ರಾವ್ಯ ಕೀರ್ತನೆ  ಹಾಗೂ ಪ್ರವಚನ ರೂಪಕ ನಡೆದು ಬಂದವು.

ಯುವಕ ಸಂಘದಿಂದ  ದೇವಸ್ಥಾನದ ಹೋರಾಂಗಣದಲ್ಲಿ ದುರ್ಗಾಮಾತೆ (ನಾಡದೇವತೆ ಮೂರ್ತಿ)  ಪ್ರತಿಷ್ಠಾಪನೆ ಗೊಂಡಿತ್ತು. ದುರ್ಗಾಷ್ಟಮಿ  ಸಾಯಂಕಾಲ ಕಾಳಿಕಾಮಾತೆಗೆ  ಕುಂಕುಮಾರ್ಚನೆ ನಡೆಯಿತು. ಮಹಾನವಮಿಯ  ನವದುರ್ಗ ಸ್ವರೂಪಿಣಿಯಾದ  ಕುಮಾರಿಕಾ ಮಾತೆಯರ ಹಾಗೂ ಸುಮಂಗಲೆ ಯರ ಪೂಜೆ ನಡೆಯಿತು. ಹಾಗೂ ಪುರಾಣ ಮಂಗಲವಾಯಿತು.

ಕಾಳಿಕಾದೇಸ್ಥಾನದಲ್ಲಿ ಸಂಪ್ರಾದಾಯಿಕ ಪೂಜೆ ಮಹಾಭಿಷೇಕ ಅಲಂಕಾರ  ಶಮಿಪೂಜೆ ಮಂತ್ರ ತೀರ್ಥ  ಪ್ರಸಾದ  ವಿರತಣೆ ಯಾಯಿತು. ಶುಕ್ರವಾರ  ದಿ. 7 ರಂದು ವಿಶ್ವಕರ್ಮ ಸಮಾಜ ಅಭ್ಯುದಯ ಯುವಕ ಸಂಘದಿಂದ ಸ್ಥಾಪಿಸಲ್ಪಟ್ಟ ಶ್ರೀ ದುರ್ಗಾಮಾತೆ (ನಾಡದೇವತೆ) ಉತ್ಸವದ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆದು ಬಂದಿತು.

ಹತ್ತು  ದಿನಗಳವರೆಹೆ  ಶ್ರೀ ಸನ್ನಿಧಿಯಲ್ಲಿ ನಡೆದ ನವರಾತ್ರಿ  ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು  ಭಕ್ತರು  ಅಭಿಮಾನಿಗಳು  ಶ್ರೂ ಜಗನ್ಮಾತೆ ಪರಮೇಶ್ವರ  ಕಾಳಿಕಾದೇವಿಯ ಅನುಗ್ರಹಕ್ಕೆ ಪಾತ್ರರದರು.

loading...

LEAVE A REPLY

Please enter your comment!
Please enter your name here