ಶಿಗ್ಗಾಂವ ಃ ಶಾಲಾ ಪ್ರಾರಂಭಕ್ಕಾಗಿ ಪ್ರಸ್ತಾವನೆ ಸಲ್ಲಿಕೆ

0
22
ಹಾವೇರಿ.ಅ.16ಃ 2012-12ನೇ ಸಾಲಿನಿಂದ ಶಿಗ್ಗಾಂವ ತಾಲೂಕಿನಲ್ಲಿ ಹೊಸದಾಗಿ ಶಾಶ್ವತ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಕಾಯ್ದೆ ಅಧಿನಿಯಮ 1983ರನ್ವಯ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭಕ್ಕಾಗಿ ನಿಗದಿಪಡಿಸಿದ ನಮೂನೆಯಲ್ಲಿ 5-11-2011 ರೊಳಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆಯೆಂದು ಶಿಗ್ಗಾಂವ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ಕೆ.ಎಸ್. ವರ್ಧನ್ ಅವರು ತಿಳಿಸಿದ್ದಾರೆ.
loading...

ಮಾತೃಭಾಷೆಯಲ್ಲಿ 1ರಿಂದ 5 ಹಾಗೂ 6 ಮತ್ತು 7ನೇ ತರಗತಿ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸುವವರು ರಾಷ್ಟ್ತ್ರೀಕೃತ ಬ್ಯಾಂಕಿನಲ್ಲಿ ಶಿಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿಷಿ ಅವರ ವಿಳಾಸಕ್ಕೆ ರೂ. 5000/- ಹುಂಡಿ ಪಡೆದು ಸಲ್ಲಿಸಬೇಕು. 6 ಮತ್ತು 7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಹಾಗೂ ಪ್ರೌಢಶಾಲೆಯನ್ನು ಪ್ರಾರಂಭಿಸಲು ಕುರಿತಂತೆ ರಾಷ್ಟ್ತ್ರೀಕೃತ ಬ್ಯಾಂಕಿನಲ್ಲಿ ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಅವರ ವಿಳಾಸಕ್ಕೆ ರೂ. 10,000/- ಗಳ ಹುಂಡಿ ಪಡೆಯುವುದು. ಮೇಲ್ಕಂಡಂತೆ ರಾಷ್ಟ್ತ್ರೀಕೃತ ಬ್ಯಾಂಕಿನಲ್ಲಿ ಹುಂಡಿಯನ್ನು ದಿನಾಂಕ 31-10- 2011ರೊಳಗಾಗಿ ಪಡೆಯುವುದು. ಪ್ರಸ್ತಾವನೆಗಳನ್ನು ತ್ರಿ ಪ್ರತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ5- 11-2011ರೊಳಗೆ ಸಲ್ಲಿಸುವಂತೆ ಈ ಮೂಲಕ ಪ್ರಕಟಿಸಲಾಗಿದೆ. ನಿಗದಿ ಪಡಿಸಿದ ಅವಧಿಯ ನಂತರ ಯಾವುದೇ ಪ್ರಸ್ತಾವನೆಗಳನ್ನು ಸ್ವೀಕರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಸಂಪರ್ಕಿಸಬಹುದೆಂದು ಡಾ. ಬಿ.ಕೆ.ಎಸ್. ವರ್ಧನ್ ಅವರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here