ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಮಾಜದ ಮುಖಂಡರು ಪ್ರಯತ್ನಿಸಬೇಕು : ಪಟ್ಟಣ

0
34
loading...

ರಾಮದುರ್ಗ, ಅ.13: ಸರ್ಕಾರದ ಯೋಜನೆಗಳನ್ನು ನಿಜವಾದ ಬಡ ಅರ್ಹ ಫಲಾನುಭವಿಗಳಿಗೆ ದೊರಕಿಸುವಲ್ಲಿ ಸಮಾಜದ ಮುಖಂಡರು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ಸಮಾಜದ ಜನರ ಅಭಿವೃದ್ದಿ ಸಾಧ್ಯ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಅವರು ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡದ ಸಮುದಾಯ ಸಂಯುಕ್ತವಾಗಿ ಸಂಘಟಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಲ್ಮೀಕಿ ಮಹರ್ಷಿಯವರ ಜೀವನ ಮತ್ತು ಆದರ್ಶಗಳನ್ನು ಯುವ ಪೀಳಿಗೆಗ ತಿಳಿಸುವ ಕಾರ್ಯವನ್ನು ಸರ್ಕಾರ ಮತ್ತು ಸಮಾಜ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರಲ್ಲದೆ ಪರಿಶಿಷ್ಟ ಪಂಗಡದ ಜನತೆ ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು ಎಲ್ಲರು ಶಿಕ್ಷಣ ಪಡೆದು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ತಿಳಿಸಿದರು.

ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಗ್ರಂಥ ರಚಿಸಿ ಬಹುದೊಡ್ಡ ಖ್ಯಾತಿಯನ್ನು ಗಳಿಸಿದವರು ಅವರ ನೀತಿಬೋಧನೆಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಅಶೋಕ ಎಮ್. ನರೋಡೆ ಇವರು ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ ನಡೆದು ಬಂದ ದಾರಿ ಸಾಧಿಸಿದ ಸಾಧನೆಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಗೋವಿಂದ ಫತ್ತೇಪೂರ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿಯವರು ಮನ:ಪರಿವರ್ತನೆಹೊಂದಿ ಸರ್ವಶ್ರೇಷ್ಟರೆನಿಸಿದಂತೆ ನಾವುಗಳು ನಿತ್ಯಜೀವನದಲ್ಲಿ ಮಾಡುತ್ತಿರುವ ತಪ್ಪಗಳನ್ನು ಅರಿತು ಪರಿವರ್ತನೆಹೊಂದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಹೇಳಿದರು,

ತಾಲೂಕಾ ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷೆ ರತ್ನಾ ಯಾದವಾಡ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಹಾದೇವಿ ರೊಟ್ಟಿ, ಜಯಶ್ರೀ ಪಾರಶಟ್ಟಿ, ನಿಂಗಪ್ಪ ಮೆಳ್ಳಿಕೇರಿ ಹಾಗೂ ತಾಲೂಕಾ ಪರಿಶಿಷ್ಟ ವರ್ಗಗಳ ಸಮಾಜದ ಅಧ್ಯಕ್ಷ ಮಾರುತಿ ಬಸಿಡೋಣಿ, ಉಪಾಧ್ಯಕ್ಷ ಫಕೀರಗೌಡ ಪಾಟೀಲ, ಕಾರ್ಯದರ್ಶಿ ವೆಂಕನಗೌಡ ಬಿ ಪಾಟೀಲ ಮತ್ತು ತಾಲೂಕಾ ಪರಿಶಿಷ್ಟ ವರ್ಗಗಳ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ಏಣಿ, ಮತ್ತು ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಹಶೀಲ್ದಾರ ಗೀತಾ ಕೌಲಗಿ ಸ್ವಾಗತಿಸಿದರು. ಪಿ.ಡಿ.ಕಾಲವಾಡ ಮತ್ತು ಆರ್.ಸಿ.ರಾಠೋಡ ಕಾರ್ಯಕ್ರಮ ನಿರೂಪಿಸಿದರು.

ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಮುರಳಿ ದುರ್ಗಪ್ಪ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೇರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ವಿವಿಧ ವಾದ್ಯಗಳೊಂದಿಗೆ ಆಕರ್ಷಕವಾಗಿ ನಡೆಯಿತು.

loading...

LEAVE A REPLY

Please enter your comment!
Please enter your name here