ಸಾತ್ವಿಕ ಪೂಜೆಗೈಯಿರಿ : ದಯಾನಂದ ಶ್ರೀಗಳು

0
27

ಖಾನಾಪೂರ 5- ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ದಿ. 5 ಹಾಗೂ 6ರಂದು ನಡೆಯಲಿರುವ ಬಿಷ್ಮಾದೇವಿ ಜಾತ್ರೆಯಲ್ಲಿ ಸಾವಿರಾರು ಮೂಕ ಪ್ರಾಣಿಗಳ ತೂರಾಟ, ಹಿಂಸೆ, ಪ್ರಾಣಿ ಬಲಿಯನ್ನು ತಡೆಗಟ್ಟಲು ಭಕ್ತರು ಪ್ರಾಣಿ ಬಲಿಗೆ ಬದಲಾಗಿ ಸಾತ್ವಿಕ ಪೂಜೆ ಸಲ್ಲಿಸಿ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಹರಕೆಯ ಹೆಸರಿನಲ್ಲಿ ಜಾತ್ರೆಯಲ್ಲಿ ಸಾವಿರಾರು ಕುರಿ, ಕೋಳಿ ಮುಂತಾದ ಪ್ರಾಣಿಗಳನ್ನು ಎಸೆಯುವದು, ಕ್ರೂರವಾಗಿ ಹಿಂಸಿಸಿ ಬಲಿ ಕೊಡುವುದು ಎಲ್ಲವೂ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಬಲ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾ ಆಡಳಿತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

ವಿಜಯ ದಶಮಿಯಂದು ಮಧ್ಯ ರಾತ್ರಿ 12 ಗಂಟೆಯಿಂದ ಮುಂಜಾನೆ 7 ಗಂಟೆಯವರೆಗೆ ಮೂಕ ಪ್ರಾಣಿಗಳ ಮಾರಣ ಹೋಮವೇ ಅಲ್ಲಿ ನಡೆಯಲಿದ್ದು, ಇದು ಖಂಡನೀಯ ಹಾಗೂ ಬೀಭತ್ಸ ಕೃತ್ಯ.  ಕರ್ನಾಟಕ ಮಹಾರಾಷ್ಟ್ತ್ರದಿಂದ 50 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಗೆ ಆಗಮಿಸಲಿದ್ದು, ಜಾತ್ರೆಯಲ್ಲಿ ಹೆಂಡ ಸಾರಾಯಿಗಳ ಹೊಳೆ ಹರಿಯುತ್ತದೆ. ಈ ಸಂದರ್ಭಗಳಲ್ಲಿ ಸರ್ಕಾರ ಅಲ್ಲಲ್ಲಿ ಚೆಕ್ ಪೋಸ್ಟಗಳನ್ನು ನಿರ್ಮಿಸಿ, ಜನರು ಜಾತ್ರೆಗೆ ಪ್ರಾಣಿ, ಆಯುಧಗಳನ್ನು ತೆಗೆದುಕೊಂಡು ಹೋಗದಂತೆ ತಡೆಯಬೇಕು ಎಂದು ದಯಾನಂದ ಸ್ವಾಮೀಜಿ ವಿನಂತಿಸಿದ್ದಾರೆ. ಸಾರ್ವಜನಿಕರೂ ಕೂಡ ಪ್ರಾಣಿ ಬಲಿ ನೀಡದೇ ಸಾತ್ವಿಕ ಪೂಜೆ ನಡೆಸಬೇಕು ಎಂದು ಕೋರಿದ್ದಾರೆ.

 

 

 

loading...

LEAVE A REPLY

Please enter your comment!
Please enter your name here