ಸಿಂಡಿಕೇಟ ಬ್ಯಾಂಕ್ ಗ್ರಾಹಕರ ಸಮಾವೇಶ

0
16
loading...

ಚನ್ನಮ್ಮ ಕಿತ್ತೂರ,7-  ಸ್ಥಳೀಯ  ಸಿಂಡಿಕೇಟ ಬ್ಯಾಂಕ ಶಾಖೆಯ  2011 ನೇ ಸಾಲಿನ  ಗ್ರಾಹಕರ ಸಮಾವೇಶವನ್ನು ಇತ್ತೀಚೆಗೆ  ಜರುಗಿತು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ಪ್ರಗತಿಪರ ರೈತರು ಹಾಗೂ ವ್ಯಾಪಾರಸ್ಥರಾದ ಗುರುತಪ್ಪ ಲಂಗೋಟಿ ಸಿಂಡಿಕೇಟ ಬ್ಯಾಂಕ ವಿಭಾಗೀಯ  ಕಚೇರಿಯ  ಮುಖ್ಯ  ಪ್ರಬಂಧಕ ಪ್ರದೀಪ ಯಾವಗಲ್  ಮತ್ತು ಕಿತ್ತೂರಗೌಡ  ವಿದ್ಯಾವರ್ಧಕ  ಸಂಘದ ಉಪಾಧ್ಯಕ್ಷ ಸೋಮಶೇಖರ  ಬಿಕ್ಕಣ್ಣವರ  ಅವರು ಆಗಮಿಸಿ ಮಾತನಾಡಿದರು.

ಗ್ರಾಹಕರ ವತಿಯಿಂದ ನಜೀರಸಾಬ ಹವಾಲ್ದಾರ ಅರುಣಕುಮಾರ  ಬಿಕ್ಕಣ್ಣವರ ಹಾಗೂ ಬಸವಣ್ಣಯ್ಯಾ ಹಿರೇಮಠ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಶಾಖಾ ಪ್ರಬಂಧಕ ಶ್ರೀರಾಮ  ಸಿಂದಗಿ ಪ್ರಾಸ್ತಾವಿಕ ಮಾತನಾಡಿ ಈ ವರ್ಷ  ಭಾರತ ದಾದ್ಯಂತ ಎಲ್ಲ ಶಾಖೆಗಳಲ್ಲಿ  ಸಪ್ಟೆಂಬರ  23 ರಂದು  ಗ್ರಾಹಕರ ಸಮಾವೇಶ  ನಡೆಸುತ್ತಿರುವುದು  ವಿಶೇಷ  ಮತ್ತು ಕೃಷಿ ಸಾಲ ನೀಡಿಕೆಯಲ್ಲಿ ಇಡೀ  ರಾಷ್ಟ್ತ್ರದಲ್ಲಿ ಸಿಂಡಿಕೇಟ ಬ್ಯಾಂಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ನರಸಿಂಹ ನಾಯಕ ಅವರಿಂದ ಪ್ರಾರ್ಥನೆ ಕೊನೆಗೆ ಈ ಪ್ರೀಜೀತ ವಂದಿಸಿದರು.

loading...

LEAVE A REPLY

Please enter your comment!
Please enter your name here