ಸಿಂಡ್ ಗ್ರಾಮೀಣ ಸ್ವಉದ್ಯೌಗ ತರಬೇತಿಕೇಂದ್ರದ ಕಟ್ಟಡ ಶಂಕುಸ್ಥಾಪನೆ

0
24
loading...

 

ಬೆಳಗಾವಿ, ಅ.19: ಶ್ರೀಮತಿ ರೇಣುಕಾ ಕುಮಾರ, ಡೆಪ್ಯುಟಿ ಸೆಕ್ರೆಟರಿ, ಗ್ರಾಮೀಣ ಮಂತ್ರಾಲಯ ನವದೆಹಲಿ, ಇವರು ದಿನಾಂಕ 17.10.2011 ರಂದು ಸಿಂಡ್ ಗ್ರಾಮೀಣ ಸ್ವಉದ್ಯೌಗ ತರಬೇತಿ (ಸಿಂಡ್ಅರ್ಸೆಟಿ) ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು. ಹಾಗೂ ಸಿಂಡಿಕೇಟ್ಬ್ಯಾಂಕ್ ಬೆಳಗಾವಿ, ಉಪಮಹಾಪ್ರಭಂ ದಕರಾದ   ಸಿದ್ದಲಿಂಗಪ್ಪ ಅವರು ಭೂಮಿ ಪೂಜೆ ನೆರವೇರಿಸಿದರು.

ನ್ಯಾಶನಲ್ ಆಕಾಡೆಮಿಯ ಡೈರಕ್ಟರ್ ನಾಗೇಂದ್ರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. 29 ವರ್ಷಗಳ ಹಿಂದೆ ರುಡ್ಸೆಟಿ ಸಂಸ್ಥೆಯಯನ್ನು ನಿರುದ್ಯೌಗಿಗಳನ್ನು ಸ್ವಉದ್ಯೌಗಿಗ ಳನ್ನಾಗಿಸಲು ಸ್ಥಾಪಿಸಿಲಾಯಿತು. ಈಗ 28 ರುಡ್ಸೆಟಿಗಳು ಕೆಲಸ ಮಾಡುತ್ತಿವೆ. ಇಂದು ಭಾರತ ಸರ್ಕಾರದ ಗ್ರಾಮೀಣದ ಮಂತ್ರಾಲಯ ದೇಶದ್ಯಾಂತ ಆರ್ಸೆಟ ಸಂಸ್ಥೆಗಳನ್ನು ಸ್ಥಾಪಿಸಲು ಬ್ಯಾಂಕಿಗೆ ಸೂಚಿಸಿದ್ದಾರೆ. ಇದರಿಂದಾಗಿ ಇಂದು 472 ಆರ್ಸೆಟಿ ಸಂಸ್ಥೆಗಳನ್ನು ಸ್ಥಾಪಿಸಿಲಾಗಿದೆ. ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರೇಣುಕಾ ಕುಮಾರ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ಅಭಿವೃದ್ದಿ ಮಂತ್ರಾಲಯ ರುಡಸೆಟಿ ಮತ್ತು ಆರ್ಸೆಟಿ ಮುಖಂತಾರ ತರಬೇತಿ ನೀಡಿ ಸ್ವಉದ್ಯೌಗ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಸಾಕಷ್ಟು ತಾಳ್ಮೆ, ಜ್ಞಾನ, ಕೌಶಲ್ಯಗಳನ್ನು ನೀಡಲಾಗುತ್ತದೆ. ಜ್ಞಾನ ಕೌಶ್ಯಲಗಳನ್ನು ಸದುಪಯೋಗಪಡಿಸಿಕೊಂಡು ಶಿಬಿರಾರ್ಥಿಗಳು ಬೇಗ ಸ್ವಉದ್ಯೌಗ ಪ್ರಾರಂಭಿಸಬೇಕು. ಒಂದು ವೇಳೆ ಸ್ವಉದ್ಯೌಗ ಪ್ರಾರಂಭಿಸದಿದ್ದಲ್ಲಿ ತರಬೇತಿಯ ಪರಿಶ್ರಮ ವೆಚ್ಚ, ಸಮಯ, ಪೋಲಾಗುತ್ತದೆ. ಹಾಗಾಗಲು ಬಿಡದೇ ತರಬೇತಿ ಪಡೆದ ಎಲ್ಲರೂ ಸ್ವಉದ್ಯೌಗ ಕೈಗೊಳ್ಳುವಂತೆ ಕರೆ ನೀಡಿದರು. ಅಲ್ಲದೇ ಸಿಂಡ್ಆರ್ಸೆಟಿ ಕಟ್ಟಡ ಬೇಗ ಪೂರ್ಣಗೊಂಡು ಉತ್ತಮ ಸೌಕರ್ಯಗಳೊಂದಿಗೆ ನಿರುದ್ಯೌಗ ಯುವಕ ಯುವತಿಯರಿಗೆ ತರಬೇತಿ ನೀಡುವಂತಾಗಲೆಂದು ಹಾರೈಸಿದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕರಾದ ಶಿವಾನಂದ ಗುಮಗಂದಿ ಮಾತನಾಡಿದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಸಿಂಡ್ಆರ್ಸೆಟಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಆದ್ಯತೆಯ ಮೇಲೆ ಸಾಲ ಸೌಲಭ್ಯ ಕಲ್ಪಿಸಿ ಸ್ವಉದ್ಯೌಗ ಕೈಗೊಳ್ಳಲು ಸಹಾಯ ನೀಡುತ್ತದೆ. ಅಲ್ಲದೇ ಅರ್ಹ ನಿರುದ್ಯೌಗಿಗಳನ್ನು ಆಯ್ಕೆಮಾಡಿ ಅವರ ಅರ್ಜಿಗಳನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗಳು, ಸಿಂಡ್ಆರ್ಸೆಟ ಸಂಸ್ಥೆಗೆ ಕಳುಹಿಸುತ್ತವೆ. ಆದಷ್ಟು ಬೇಗ ಕಟ್ಟಡ ಪೂರ್ಣಗೊಂಡು ಶಿಬಿರಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಶುಭ ಹಾರೈಸಿದರು.

ರುರಲ್ ಆಯುರ್ವೇದಿಕ ಕಾಲೇಜಿನ ನಿರ್ದೇಶಕರಾದ ಕೆ. ಡಿ. ದೇಶಪಾಂಡೆಯುವರು ಸಿಂಡಿಕೇಟ್ಬ್ಯಾಂಕ್ ಗ್ರಾಮೀಣ ಅಭಿವೃದ್ದಿಯಲ್ಲಿ ಎತ್ತಿದ ಕೈ. ಸಿಂಡಿಕೇಟ್ಬ್ಯಾಂಕಿನ ಚಿಹ್ನೆ ನಾಯಿ, ಏಕೆಂದರೆ ಬ್ಯಾಂಕು ವಿಶ್ಯಾಸರ್ಹತೆ ಮತ್ತು ನಂಬಿಕೆಯ ದ್ಯೌತಕ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ ಶ್ರೀ ಸಿದ್ದಲಿಂಗಪ್ಪ ಉಪಮಹಾಪ್ರಬಂಧಕರು, ಸಿಂಡಿಕೇಟ್ಬ್ಯಾಂಕ್ ಬೆಳಗಾವಿ ಇವರು ಸಭಿಕರನ್ನುದ್ದೇಶಿಸಿ ಮಾತನಾಡಿದರು. ಸಿಂಡಿಕೇಟ್ಬ್ಯಾಂಕ್ ದೇಶದಲ್ಲಿಯೇ ಕೃಷಿಗೆ ಸಾಲ ಸೌಲಭ್ಯ ಕಲ್ಪಿಸಿದ ಮೊದಲ ಬ್ಯಾಂಕ್. ರಿಜರ್ವ ಬ್ಯಾಂಕಿನವರು ಈ ಕಾರ್ಯವನ್ನು ಪ್ರಶಂಸೆ ಮಾಡಿ ದೇಶದ ಎಲ್ಲ ಬ್ಯಾಂಕುಗಳಲ್ಲಿ ಕೃಷಿಗೆ ಸಾಲ ಸೌಲಭ್ಯ ಕಲ್ಪಿಸಿದರು. ಅಲ್ಲದೇ ಸಿಂಡಿಕೇಟ್ಬ್ಯಾಂಕ್ ನಿರುದ್ಯೌಗಿಗಳಿಗೆ ತರಬೇತಿ ನೀಡಲು (ಸರ್ಡ್) ಈಗಿನ ಸಿಂಡ್ಆರ್ಸೆಟಿ ಸಂಸ್ಥೆಗಳನ್ನು 11 ವರ್ಷಗಳ ಹಿಂದೆ ಸ್ಥಾಪಿಸಿ ಸಾಕಷ್ಟು ನಿರುದ್ಯೌಗಿಗಳಿಗೆ ಸ್ವಉದ್ಯೌಗ ಕೈಗೊಳ್ಳಲು ತರಬೇತಿ ನೀಡಿ ಸ್ವಉದ್ಯೌಗ ಕೈಗೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ಸಿಂಡ್ಆರ್ಸೆಟಿ ಬೆಳಗಾವಿ ಇಲ್ಲಿಯವರೆಗೆ 14000 ಕ್ಕಿಂತ ಹೆಚ್ಚು ನಿರುದ್ಯೌಗಳಿಗೆ ತರಬೇತಿ ನೀಡಿದೆ. ಶ್ರೀಮತಿ ರೇಣುಕಾ ಕುಮಾರ ಅವರು ಶಿಲಾನ್ಯಾಸ ಮಾಡಿದ್ದಾರೆ. ಈ ಕಟ್ಟಡದ ಎಲ್ಲ ಕೆಲಸ ಕಾರ್ಯಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು

ಪ್ರಾರಂಭದಲ್ಲಿ ಜಿಲ್ಲಾ ಅಗ್ರೇಣಿಯ ಬ್ಯಾಂಕ್ ಮ್ಯಾನೇಜರಾದ ಶ್ರೀ ಸೂರ್ಯಕಾಂತ ಗಂಗಾ ಎಲ್ಲರನ್ನೂ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಿಂಡ್ಆರ್ಸೆಟಿ ನಿರ್ದೇಶಕರಾದ ಆರ್. ಡಿ. ಸವನೂರ ವಂದನಾರ್ಪಣೆ ಮಾಡಿದರು. ಸಹನಿರ್ದೇಶಕರು ಬಿ. ಆರ್. ಹೂಲಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ನಾಗರಾಜ ಕೆದಿಲಾಯ, ಶ್ರೀಪತಿ ಹೆಗಡೆ ಮತ್ತು ಪ್ರದೀಪ ಯಾವಗಲ ಅವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here