ಸೇವಾ ಭದ್ರತೆಗೆ ಗ್ರಂಥಾಲಯ ನೌಕರರ ಮೊರೆ

0
15
loading...

ಬಾಗಲಕೋಟೆ,25-ರಾಜ್ಯದ ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರನ್ನು ಕುಶಲ ಕಾರ್ಮಿಕರೆಂದು ಪರಿಗಣಿಸಿರುವ ಸರ್ಕಾರ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಪಾವತಿ ಮಾಡಲು ಸಮ್ಮತಿಸಿದೆ. ಕಳೆದ 20ವರ್ಷಗಳಿಂದ ಗ್ರಂಥಾಲಯ ಮೇಲ್ವಿಚಾರಕರೆಂದು ನೇಮಕಗೊಂಡರೂ ಅತ್ತ ಸೇವಾ ಭದ್ರತೆ ಇಲ್ಲದೆ, ಇತ್ತ ಕನಿಷ್ಠ ವೇತನವೂ ದೊರಕದೇ ಕಂಗಾಲಾಗಿದ್ದ ರಾಜ್ಯದ ಎಲ್ಲ ಗ್ರಾಮ ಪಂಚಾಯತ ಗ್ರಂಥಾಲಯಗಳು ಹಾಗೂ ಸಂಚಾರಿ ಗ್ರಂಥಾಲಯಗಳಲ್ಲಿ ಸೇವೆಯಲ್ಲಿರುವ 6 ಸಾವಿರಕ್ಕೂ ಹೆಚ್ಚು ಮೇಲ್ವಿಚಾರಕರಿಗೆ ಅನುಕೂಲವಾದಂತಾಗಿದೆ.

ಅಭಿನಂದನೆ: ಎಂದು ವರ್ಷಗಳ ಹಿಂದೆಯೇ ಕಾರ್ಮಿಕರ ಪರ ಹೋರಾಟಗಾರ ಚಂದ್ರಶೇಖರ ಎಸ್. ಹಿರೇಮಠ ನೇತೃತ್ವದ ಸಂಗಟನೆ ನಡೆಸಿರುವ ಹೋರಾಟದ ಸಿಹಿ ಫಲವಾಗಿ ಅವರಿಗೆ ಹಾಗೂ ಮೇಲ್ವಿಚಾರಕರಿಗೆ ಜಯವೆಂದು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗ್ರಾಮೀಣ ಗ್ರಂಥಾಲಯಗಳ ಅಧ್ಯಕ್ಷ ಡಿ.ಕೆ. ಮುಜಾವರ ಹಾಗೂ ಮುಧೋಳ ತಾಲೂಕಾ ಅಧ್ಯಕ್ಷ ಕೆ.ಎಚ್. ಪಾಟೀಲ ಬಾದಾಮಿ ತಾಲೂಕಾ ಅಧ್ಯಕ್ಷ ಲಕ್ಕಣ್ಣವರ, ಬಾಗಲಕೋಟೆ ತಾಲೂಕಾ ಅಧ್ಯಕ್ಷ ಹೊಸಮನಿ, ಹುನಗುಂದ ತಾಲೂಕಿನ ಅಧ್ಯಕ್ಷ ಪಾಂಡುರಂಗ ಬಾಗಲಕೋಟೆ ಮತ್ತು ಜಮಖಂಡಿ ತಾಲೂಕಿನ ಅಧ್ಯಕ್ಷ ಎಂ.ಎಸ್. ಚಿಕ್ಕೌಣ ಅಭಿನಂದನೆ ಸಲ್ಲಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here