ಸೋಮಣ್ಣನ ಮೇಲೆ ಪಾದರಕ್ಷೆ ಎಸೆತ

0
6
loading...

 

ಬೆಳಗಾವಿ, ಅ. 1: ಘಟಪ್ರಭಾ ಎಡದಂಡೆ

ಕಾಲುವೆ ಯೋಜನೆಯನ್ನು ಪುನಶ್ಚೇತನಕ್ಕೆ 542

ಕೋಟಿ. ರೂ.ಗಳ ಪ್ರಸ್ತಾವನೆಯನ್ನು

ಸಿದ್ಧಪಡಿಸಲಾಗಿದ್ದು, ಶೀಘ್ರವೇ ಇದನ್ನು ಕೇಂದ್ರ

ಸರಕಾರಕ್ಕೆ ಕಳುಹಿಸಿ ಅನುಮೋದನೆ

ಪಡೆದುಕೊಳ್ಳಲಾಗುವುದೆಂದು ರಾಜ್ಯದ

ಜಲಸಂಪನ್ಮೂಲ ಖಾತೆ ಸಚಿವರಾದ ಶ್ರೀ.

ಬಸವರಾಜ ಬೊಮ್ಮಾು ಇಂದಿಲ್ಲಿ ಹೇಳಿದರು.

ಜಿಲ್ಲೆಯ ವಿವಿಧ ನೀರಾವರಿ

ಯೋಜನೆಗಳ ಕುರಿತು ಶಾಸಕರು, ಲೋಕಸಭಾ

ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ

ನಡೆಸಿದ ನಂತರ ಸುದ್ದಿಗಾರರೊಂದಿಗೆ

ಮಾತನಾಡಿದ ಅವರು ಘಟಪ್ರಭಾ ಎಡದಂಡೆ

ಯೋಜನೆಯ ನೀರು ಕಾಲುವೆಗಳು ಸೋರುತ್ತಿವೆ.

ಇದರಿಂದ ಅನಾವಶ್ಯಕವಾಗಿ ನೀರು

ಪೋಲಾಗುತ್ತಿದ್ದು, ಇದನ್ನು ತಡೆಯಲು ಈ

ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ ಎಂದು

ಹೇಳಿದರು.

ಇದರ ಜೊತೆಗೆ ಘಟಪ್ರಭಾ ಬಲದಂಡೆಯ

ಕಾಲುವೆಗಳೂ ಸಹ ಸೋರುತ್ತಿದ್ದು, ಇದನ್ನು ಸಹ

ದುರಸ್ತಿಗೊಳಿಸಲು ಈ ತಿಂಗಳ ಅಂತ್ಯದೊಳಗೆ

ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ

ನೀಡಲಾಗಿದೆ. ಘಟಪ್ರಭಾ ಎಡದಂಡೆಯ

ಯೋಜನೆಯ 3ನೇ ಹಂತದ ಕಾಮಗಾರಿ ಈಗ

ಪ್ರಾರಂಭವಾಗಿದ್ದು, ಇದಕ್ಕಾಗಿ ಈ ವರ್ಷ 110 ಕೋಟಿ

ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು

ಹೇಳಿದರು.

ದೂದಗಂಗಾ ಯೋಜನೆಗೆ ಸಂಬಂಧಿಸಿದಂತೆ

ಶೀಘ್ರವೇ ತಾವು ಬೆಳಗಾವಿ ಜಿಲ್ಲಾ ಉಸ್ತುವಾರಿ

ಸಚಿವರು ಹಾಗೂ ಸಂಬಂಧಪಟ್ಟ ಶಾಸಕರ

ನಿಯೋಗವೊಂದು ಮಹಾರಾಷ್ಟ್ತ್ರ ಮುಖ್ಯಮಂತ್ರಿಗಳನ್ನು

ಭೇಟಿಯಾಗಿ ದತ್ತವಾಡ್ ನಾಲಾ ಕಾಮಗಾರಿಗಳನ್ನು

ಶೀಘ್ರವೇ ಪ್ರಾರಂಭಿಸುವಂತೆ ಒತ್ತಾುಸುವುದಾಗಿ

ಹೇಳಿದರು.

ದೂಧಗಂಗಾ ಯೋಜನೆ ಮಹಾರಾಷ್ಟ್ತ್ರ ಹಾಗೂ

ಕರ್ನಾಟಕ ಜಂಟಿ ಯೋಜನೆ ಆಗಿದ್ದು, ಈ

ಯೋಜನೆುಂದ ಕರ್ನಾಟಕಕ್ಕೆ 4 ಟಿ.ಎಂ.ಸಿ. ನೀರು

ಹರಿದು ಬರಲಿದೆ ಎಂದು ಅವರು ಹೇಳಿ ಪ್ರಾಶಸ್ತ್ಯ

ನೀಡಿ ಈ ಯೋಜನೆ ಅನುಷ್ಠಾನಕ್ಕೆ

ಕ್ರಮಕೈಗೊಳ್ಳಲಾಗುವುದೆಂದು ಹೇಳಿದರು.

ರಾಮೇಶ್ವರ ಏತ ನೀರಾವರಿ ಯೋಜನೆಗೆ

ಕೇಂದ್ರ ಸರಕಾರದಿಂದ ಅನುಮೋದನೆ ದೊರೆತ್ತಿದ್ದು,

250 ಕೋಟಿ ರೂ. ಗಳ ಈ ಯೋಜನೆಯನ್ನು

ಶೀಘ್ರವೇ ಪ್ರಾರಂಭಿಸಲಾಗುವುದು. ಹಲ್ಯಾಳ ಏತ

ನೀರಾವರಿ ಯೋಜನೆ ಹಾಗೂ ಸಾವಳಗಿ ಏತ

ನೀರಾವರಿ ಯೋಜನೆಗಳು ಮುಂದಿನ ತಿಂಗಳ

ಅಂತ್ಯಕ್ಕೆ ಉದ್ಘಾಟನೆ ಮಾಡಲಾಗುವುದೆಂದು ಸಚಿವರು

ಹೇಳಿದರು.

ಪತ್ರಿಕಾಗ್ಠೋಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ

ಶ್ರೀ. ಉಮೇಶ ಕತ್ತಿ, ಸಹಕಾರ ಸಚಿವ ಶ್ರೀ. ಲಕ್ಷ್ಮಣ

ಸವದಿ, ಶಾಸಕರಾದ ಶ್ರೀ. ಪ್ರಕಾಶ ಹುಕ್ಕೇರಿ, ಶ್ರೀ.

ಸಂಜಯ ಪಾಟೀಲ, ಶ್ರೀ. ಮಹಾಂತೇಶ ಕವಟಗಿಮಠ

ಹಾಗೂ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here