ಸ್ಮರಣೆಗಾಗಿ ರಾಣಿ ಚನ್ನಮ್ಮ ವಿಜಯೋತ್ಸವ

0
22
loading...

ಜಮಖಂಡಿ 23 ಅಂದಿನ ಧಾರವಾಡ ಜಿಲ್ಲಾ ಕಲೆಕ್ಟರ್ ಆಗಿದ್ದ ತ್ಯಾಕರೆ ನೇತೃತ್ವದಲ್ಲಿ 1824 ರ ಅಕ್ಟೌಬರ್ 22 ಮ್ತು-್ತ 23 ರಂದು ಕಿತ್ತೂರ ಸಂಸ್ಥಾನದ ಮೇಲೆ ಬ್ರಿಟಿಷ್ ಸರಕಾರ ನಡೆಸಿದ್ದ ದಾಳಿಯ ವಿರುದ್ಧ ರಾಣಿ ಚೆನ್ನಮ್ಮ ವಿಜಯ ಸಾಧಿಸಿದ್ದರ ಸ್ಮರೆಣೆಗಾಗಿ ಪ್ರತಿವರ್ಷ ರಾಣಿ ಚನ್ನಮ್ಮ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ನವೃತ್ತ ಪ್ರಾಧ್ಯಾಪಕ ಎಸ್.ಬಿ. ಮಟೋಳಿ ಹೆಳಿದರು.

ಸ್ಥಳೀಯ ಬಿಎಲ್ಡಿಯ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೆಜಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಪರಪಂರೆ ಕೂಟದ ಆಶ್ರಯದಲ್ಲಿ ಕಾಲೇಜಿನ ಸಭಾ ಭವನದಲ್ಲಿ ಶನವಾರ ಏರ್ಪಡಿಸಿದ ಲಿರಾಣಿ ಚನ್ನಮ್ಮ ವಿಜಯೋತ್ಸವಳಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸಮರ್ಥ ಉತ್ತರಾಧಿಕಾರಿ ಇಲ್ಲದ ಸಂದಂರ್ಭದಲ್ಲಿ ಕಿತ್ತೂರ ಸಂಸ್ಥಾನದ ಆಡಳಿತ ಸೂತ್ರದ ಹೊಣೆ ರಾಣಿ ಚನ್ನಮ್ಮ ಮೇಲೆ ಬಿದ್ದಿತು. ಆದರ ದತ್ತಕ್ಕ ಪುತ್ರನನ್ನು ಪಡೆಯಲು ಈಸ್ಟ ಇಂಡಿಯಾ ಕಂಪನಿಯ ಅನುಮತಿ ಪಡೆಯಬೇಕು ಎಂಬ ಬ್ರಿಟಿಷ ಸರಕಾರದ ನತಿಯನ್ನು ಚೆನ್ನಮ್ಮನಳನ್ನು ಕೆರಳಿಸಿತ್ತು ಎಂದರು.

ಬ್ರಿಟಿಷ ಸರಕರ ದಾಳಿಯಲ್ಲಿ ಅನುಭವಿಸಿದ್ದ ಸೋಲಿನ ಅವಮಾನದಿಂದಾಗಿ ರಾಣಿ ಚನ್ನಮ್ಮ ಬ್ರಿಟಿಷ ಸರಕಾರದ ಕಾಕದೃಷ್ಠಿಗೆ ಒಳಗಾಗಬೇಕಾಯಿತು. ಹಾಗಾಗಿ ಬ್ರಿಟಿಷ ಸರಕಾರದ ಸಂಚು ರೂಪಿಸಿ ಮರುದಾಳಿ ಆಯೋಜಿಸಿ ಕಿತ್ತೂರು ಸಂಸ್ಥಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅದರ ಹಿನ್ನಲೆಯಲ್ಲಿ ರಾಣಿ ಚನ್ನಮ್ಮ ಹಚ್ಚಿದ ಕಿಚ್ಚಿನಿಂದಾಗಿ 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವಂತಾಯಿತು ಎಂದರು.

ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಅಬಲೆಯಲ್ಲ ಬದಲಾಗಿ ಸಬಲೆ ಎಂದು ಸಾಧಿಸಿದ ಕೀರ್ತಿ ರಾಣಿ ಚೆನ್ನಮ್ಮಳಿಗೆ ಸಲ್ಲುತ್ತದೆ. ದಿಟ್ಟ ಮತ್ತು ಧೀರ ಮಹಿಳೆಯಾಗಿದ್ದ ರಾಣಿ ಚನ್ನಮ್ಮ ಇಂದಿನ ಯುವತಿಯರಿಗೆ ಮಾದರಿಯಾಗಿದ್ದಾರೆ ಎಂದರು.       ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಎಸ್.ಬಿ.ಕಮತಿ ವೇದಿಕೆಯಲ್ಲಿದ್ದರು. ಮಹೇಶ ಅಪ್ಪನ್ನವರ ಪ್ರಾರ್ಥನೆ ಗೀತೆ ಹಾಡಿದರು. ಡಾ.ಎಸ್.ಜಿ.ಹಿರೇಮಠ ಸ್ವಾಗತಿಸಿ ಅತಿಥಿಗಳನ್ನು ಅರಿಚಯಿಸಿದರು. ಸಿದ್ದಲಿಂಗಯ್ಯ ಘಂಟಿಮಠ, ಪ್ರಕಾಶ ಹುಲಗನ್ನವರ ಕಾರ್ಯಕ್ರಮ ನೀರೂಪಿಸಿದರು. ಪರಂಪರೆ ಕೂಟದ ಸಂಚಾಲಕ ಪ್ರೊ.ಕೆ.ಚನ್ನಬಸಪ್ಪ ವಂದಿಸಿದರು.

loading...

LEAVE A REPLY

Please enter your comment!
Please enter your name here