ಹಿರಿಯ ನಾಗರಿಕರ ರಕ್ಷಣಾ ಕಾನೂನಿನ ಅರಿವು ಅಗತ್ಯ: ಚಂದ್ರಶೇಖರ

0
26
loading...

ಬೆಳಗಾವಿ: ಅಕ್ಟೌಬರ್: 13: ಬೆಳಗಾವಿ ನಗರದ ಎಸ್.ಎಸ್.ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಇತ್ತೀಚಿಗೆ ಆಚರಿಸಲಾಯಿತು.

ಮೂರನೇಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ ಪಾಟೀಲ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತಿರುವುದರಿಂದ ಹಿರಿಯ ನಾಗರಿಕರ ಸ್ಥಿತಿಯು ಚಿಂತಾಜನಕವಾಗಿದೆ. ಕಾರಣ ಹಿರಿಯ ನಾಗರಿಕರು ತಮ್ಮ ರಕ್ಷಣೆಗಾಗಿ ಇರುವ ಕಾನೂನಿನ ಬಗ್ಗೆ ಅರಿವನ್ನು ಹೊಂದುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಅತಿಥಿಗಳಾಗಿ ಮಾತನಾಡಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ. ರವಿ.ಎಮ್. ನಾಯ್ಕ ಅವರು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ಸಂರಕ್ಷಣೆ ಕಾಯ್ದೆಗೆ 2007 ರಲ್ಲಿ ಸಂಸತ್ತು ಅಂಗೀಕರಿಸಿದ್ದು, ಈ ಕಾಯಿದೆ ಜಾರಿ ತರಲು ಇಂದಿನ ನೈತಿಕ ಮೌಲ್ಯಗಳು ನಶಿಸಿ ಹೋಗುತ್ತಿರುವುದೇ ಮುಖ್ಯ ಕಾರಣವಾಗಿವೆ. ಇನ್ನೌರ್ವ ಮುಖ್ಯ ಅತಿಥಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಜಗಜಂಪಿ ಅವರು ಜಾಗತೀಕರಣವೇ ನೈತಿಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿ ಹಿರಿಯರನ್ನು ಗೌರವದಿಂದ ಹಾಗೂ ಪ್ರೀತಿ ವಿಶ್ವಾಸದಿಂದ ನೋಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಈ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕ್ರೀಡೆ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭೆಯ ಅಧ್ಯಕ್ಷತೆವಹಿಸಿದ್ದ ಜಗದೀಶ ಸವದತ್ತಿ ಅವರು ಹಿರಿಯರು ಯುವಕರನ್ನು ದೂರುವ ಬದಲು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಶ್ರೀ. ಕೆ.ಹೆಚ್. ಓಬಳಪ್ಪ ಸ್ವಾಗತಿಸಿದರು. ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಎಫ್.ಬಿ. ನದಾಫ ಕೊನೆಯಲ್ಲಿ ವಂದಿಸಿದರು.

loading...

LEAVE A REPLY

Please enter your comment!
Please enter your name here