ಹೇಳಿಕೆ ಹಿಂದಕ್ಕೆ ಪಡೆಯಲಿ ಶ್ರೀಗಳು

0
7
loading...

ಬೈಲಹೊಂಗಲದ ಜನರ ಆಗ್ರಹದ ಮೇರೆಗೆ ಚನ್ನಮ್ಮಳ ಮೂರ್ತಿ ಬೈಲಹೊಂಗಲದ ಮುಖ್ಯದ್ವಾರದಲ್ಲಿಯೇ ಪ್ರತಿಷ್ಠಾಪಿಸಬೇಕೆಂದು ಪ್ರತಿಭಟಿಸಲಾಗಿದೆ.ನಾನು ಯವುದೇ ರೀತಿಯ ರಾಜಕಾರಣ ಮಾಡಿಲ್ಲ.ಇದನ್ನು ಮಾಡುವ ಸಮಯವೂ ನನಗಿಲ್ಲ. ಶಾಸಕ ಮೆಟಗುಡ್ ತಮ್ಮ ಜವಾಬ್ದಾರಿ ಮರೆತು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಪಂಚಮಸಾಲಿ ಜಗದ್ಗುರುಗಳು ತಿಳಿಸಿದ್ದಾರೆ. ಇತಿಹಾಸ ಪುರುಷರ ಪುತ್ಥಳಿಗಳನ್ನು ಜನನೀಬಿಡ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಉದ್ದೇಶ ಅದನ್ನು ನೋಡಿದವರು ಇತಿಹಾಸ ಪುರುಷರನ್ನು ಸ್ಮರಿಸಬೇಕು. ಅವರ ಇತಿಹಾಸ ಮುಂದಿನ ಪೀಳಿಗೆಗೆ ಪರಿಚಯವಾಗಬೇಕು ಎನ್ನುವುದಾಗಿರುತ್ತದೆ. ಕಳೆದ ಹತ್ತು ವರ್ಷಗಳಿಂದ ಚನ್ನಮ್ಮನ ಮೂರ್ತಿಯನ್ನು ಗೋದಾಮಿನಲ್ಲಿಟ್ಟು ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಬೈಲಹೊಂಗಲದ ಜನತೆಗೆ ಗೊತ್ತಿದೆ ಎಂದು ಶ್ರೀಗಳು ಶಾಸಕರಿಗೆ ತಿರುಗೇಟು ನೀಡಿದ್ದಾರೆ.

 

 

loading...

LEAVE A REPLY

Please enter your comment!
Please enter your name here