10ರಿಂದ ದಸರಾ ರಜೆಯಲ್ಲಿ ಉಪನ್ಯಾಸಕರಿಗೆ ತರಬೇತಿ

0
14
loading...

ಬೆಳಗಾವಿ: ಅಕ್ಟೌಬರ್:3: ದಸರಾ ರಜೆಯಲ್ಲಿ ಉಪನ್ಯಾಸಕರುಗಳಿಗೆ 10 ಪ್ರಮುಖ ವಿಷಯಗಳ 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕೆಳಕಂಡಂತೆ ನಿಗದಿಪಡಿಸಿದ ದಿನಾಂಕ ಹಾಗೂ ಸ್ಥಳ ಮತ್ತು ವಿಷಯದ ಉಪನ್ಯಾಸಕರನ್ನು ಸಂಬಂಧಿಸಿದ ಪ್ರಾಚಾರ್ಯರು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಿ ಈ ತರಬೇತಿಗೆ ಹಾಜರಾಗುವಂತೆ ಉಪನ್ಯಾಸಕರುಗಳಿಗೆ ಸೂಚಿಸಬೇಕೆಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಹೆಚ್. ಕಟ್ಟಿಮನಿ ಅವರು ತಿಳಿಸಿದ್ದಾರೆ.  ರಸಾಯಶಾಸ್ತ್ತ್ರ, ಭೌತಶಾಸ್ತ್ತ್ರ ವಿಷಯ ಕುರಿತು ಪ್ರಥಮ ಹಂತದ ತರಬೇತಿಯು ಅಕ್ಟೌಬರ್ 10 ರಿಂದ 14 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5-30 ಗಂಟೆಯವರೆಗೆ ಬೆಳಗಾವಿ ಆರ್.ಎಲ್.ಎಸ್.ಪದವಿಪೂರ್ವ ಕಾಲೇಜಿನಲ್ಲಿ, ಜೀವಶಾಸ್ತ್ತ್ರ, ಗಣಿತ, ಇಂಗ್ಲೀಷ ವಿಷಯದ ತರಬೇತಿಯು ಅಕ್ಟೌಬರ್ 10 ರಿಂದ 14 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5-30 ಗಂಟೆಯವರೆಗೆ ಬೆಳಗಾವಿ ಜ್ಯೌತಿ ಪದವಿಪೂರ್ವ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.

ಅದರಂತೆ 2ನೇ ಹಂತದ ತರಬೇತಿ ಅಂಗವಾಗಿ ರಾಜ್ಯಶಾಸ್ತ್ತ್ರ ವಿಷಯ ಕುರಿತು ತರಬೇತಿಯು ಅಕ್ಟೌಬರ್ 18 ರಿಂದ 22 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5-30 ಗಂಟೆಯವರೆಗೆ ಬೆಳಗಾವಿಯ ಲಿಂಗರಾಜ ಪದವಿಪೂರ್ವ ಕಾಲೇಜಿನಲ್ಲಿ, ಸಮಾಜಶಾಸ್ತ್ತ್ರ, ಲೆಕ್ಕಶಾಸ್ತ್ತ್ರ ವಿಷಯ ಕುರಿತು ತರಬೇತಿಯು ಅಕ್ಟೌಬರ್ 18 ರಿಂದ 22 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5-30 ಗಂಟೆಯವರೆಗೆ ಬೆಳಗಾವಿ ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನಲ್ಲಿ ಹಾಗೂ ಅರ್ಥಶಾಸ್ತ್ತ್ರ, ಇತಿಹಾಸ ವಿಷಯ ಕುರಿತು ತರಬೇತಿಯು ಅಕ್ಟೌಬರ್ 18 ರಿಂದ 22 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5-30 ಗಂಟೆಯವರೆಗೆ ಬೆಳಗಾವಿ ಜ್ಯೌತಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here