16ರಂದು ವೈವಾಹಿಕ ವಿವಾದ ಬಗೆಹರಿಸುವ ಕಾರ್ಯಾಗಾರ

0
9
loading...

 

ಬೆಳಗಾವಿ:ಅಕ್ಟೌಬರ್:13: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಧ್ಯಸ್ಥಿಕೆ ಕೇಂದ್ರ ಬೆಳಗಾವಿ ಹಾಗೂ ಕರ್ನಾಟಕ ವಕೀಲರ ಪರಿಷತ್ತು ಬೆಂಗಳೂರು, ವಕೀಲರ ಸಂಘ ಬೆಳಗಾವಿ ಹಾಗೂ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶಿವೈವಾಹಿಕ ವಿವಾದಗಳನ್ನು ಮಧ್ಯಸ್ಥಿಕೆ ಹಾಗೂ ಮಾನಸಿಕ ಆಪ್ತ ಸಮಾಲೋಚನೆ ಮೂಲಕ ಬಗೆಹರಿಸುವಷಿ ಬಗ್ಗೆ ಕಾರ್ಯಾಗಾರವು ಇದೇ ಅಕ್ಟೌಬರ್ 16 ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಎನ್. ಕುಮಾರ ಅವರು ಈ ಕಾರ್ಯಾಗಾರವನ್ನು ಉದ್ಘಾಟಿಸುವರು. ಬೆಂಗಳೂರ ವಕೀಲರ ಪರಿಷತ್ ಚೇರಮನ್ ಎ.ಎ. ಮಗದುಮ್ಮ ಅಧ್ಯಕ್ಷತೆವಹಿಸುವರು.

ಕರ್ನಾಟಕ ವಕೀಲರ ಪರಿಷತ್ತಿನ ವೈಸ್ ಚೇರಮನ್ ಎಲ್. ಶ್ರೀನಿವಾಸ ಬಾಬು ಮುಖ್ಯ ಅತಿಥಿಗಳಾಗಿ ಹಾಗೂ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಮ್.ಎಸ್. ಬಾಲಕೃಷ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಪ್ರಧಾನ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣೆಗೌಡಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಈರಣ್ಣಾ ಕಡಾಡಿ, ಭಾರತ ವಕೀಲ ಪರಿಷತ್ತು ಸದಸ್ಯ ಎಸ್.ಎಲ್. ಬೊಚೆಗೌಡಾ,

ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರುಗಳಾದ ಎ.ಆರ್. ಪಾಟೀಲ, ಕೆ.ಬಿ. ನಾಯ್ಕ ಹಾಗೂ ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಸ್. ಕಿವಡಸಣ್ಣವರ ಅತಿಥಿಗಳಾಗಿ ಉಪಸ್ಥಿತರಿರುವರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ಚರ್ಚಾಗೋಷ್ಠಿಗಳು ನಡೆಯಲಿವೆ.

loading...

LEAVE A REPLY

Please enter your comment!
Please enter your name here