16 ರಂದು ಅಭಿನಂದನೆ

0
39
loading...

ಬೆಳಗಾವಿ,12: ಭಾರತೀಯ ಜೈನ ಮಿಲನ ಅಧ್ಯಕ್ಷ ಧರ್ಮಸ್ಥಳದ ಡಿ.ಸುರೇಂದ್ರು ಕುಮಾರ ಹೆಗ್ಗಡೆ ಅವರ ಷಷ್ಟ್ಯಬ್ದಿಯ ನಿಮಿತ್ಯ ಅಭಿನಂದನಾ ಸಮಾರಂಭ ಹಾಗೂ ಜೈನ ಮಿಲನ ವಲಯ-11 ರ ಉದ್ಘಾಟನಾ ಸಮಾರಂಭ ಇದೇ ಅಕ್ಟೌಬರ 16 ರಂದು ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ದೇಶದ ವಿವಿಧ ನಗರಗ ಳಲ್ಲಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜೈನ ಮಿಲನ ಸಂಸ್ಥೆ ಸಮಾಜ ಕಾರ್ಯವನ್ನು ಕೈಗೊಳ್ಳು ತ್ತಿದ್ದು, ಇದೀಗ ಬೆಳಗಾವಿಯಲ್ಲಿ ಜೈನ ಮಿಲನ ವಲಯ -11 ರ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ. 16 ರಂದು ಮಧ್ಯಾಹ್ನ 2 ಗಂಟೆಗೆ ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಸಮಾರಂಭ ನಡೆಯಲಿದೆ. ಜೈನ ಮಿಲನ ಅಧ್ಯಕ್ಷ ಹಾಗೂ ಜೈನ ಸಮಾಜದ ಹಿರಿಯರೂ ಆದ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ ಹೆಗ್ಗಡೆ ಅವರು ವಲಯ -11 ರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಂದು ಬೆಳಗಾವಿಯ ಜೈನ ಸಮಾಜದ ವತಿಯಿಂದ ಇತ್ತಿಚಿಗೆ ಷಷ್ಟ್ಯಬ್ದಿ ಪೂರೈಸಿದ ಡಿ.ಸುರೇಂದ್ರ ಕುಮಾರ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಸಹ ಹಮ್ಮಿ ಕೊಳ್ಳಲಾಗಿದೆ. ಸಮಾಜದ ವತಿಯಿಂದ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ಪುಷ್ಪದಂತ ದೊಡ್ಡಣ್ಣವರ ಅವರು ಡಿ.ಸುರೇಂದ್ರಕುಮಾರ ಅವರನ್ನು ಸಮ್ಮಾನಿಸಲಿದ್ದಾರೆ. ಈ ಸಮಾರಂಭಕ್ಕೆ ಪ್ರಮುಖ ಅತಿಥಿಗಳಾಗಿ ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ವೀರಕುಮಾರ ಪಾಟೀಲ, ದಕ್ಷಿಣ ಭಾರತ ಜೈನ ಸಭಾ ಹಾಗೂ ಅರಿಹಂತ ಕೋ-ಆಫ್ ಸೊಸೈಟಿ ಅಧ್ಯಕ್ಷ ರಾವಸಾಹೇಬ ಪಾಟೀಲ, ಕರ್ನಾಟಕ ಸ್ಟೇಟ ಬಾರ್ ಕೌನ್ಸಿಲ್ ಅಧ್ಯಕ್ಷ ಆನಂದಕುಮಾರ ಮಗದುಮ್ ಅವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷ ತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೋಪಾಲ ಜಿನಗೌಡ ಅವರು ವಹಿಸಲಿದ್ದು, ಈ ಸಮಾರಂಭಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಆಯೋಜಕರು ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here