17 ರಿಂದ ಹಾಸನದಲ್ಲಿ ಸೈನ್ಯ ಭರ್ತಿ ರ್ಯಾಲಿ

0
32
loading...

ಬೆಳಗಾವಿ:ಅಕ್ಟೌಬರ್:13: ಭೂಸೇನಾ ಪಡೆಯಲ್ಲಿ ನೇಮಕಾತಿಗೆ ಇದೇ ಅಕ್ಟೌಬರ್ 17 ರಿಂದ 21 ರವರೆಗೆ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸೈನ್ಯ ಭರ್ತಿ ರ್ಯಾಲಿ ನಡೆಯಲಿದೆ.

ಅಕ್ಟೌಬರ್ 17 ರಂದು ಕರ್ನಾಟಕದ ಎಲ್ಲ ಜಿಲ್ಲೆಗಳು ಮತ್ತು ಓಟ್ ಸೈಡರ್ ಅಭ್ಯರ್ಥಿಗಳಿಗೆ ಸಿಪಾಯಿ ಟೆಕ್ನಿಕಲ್, ಸಿಪಾಯಿ ಕ್ಲಾರ್ಕ್ ಎಸ್.ಕೆ.ಟಿ, ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸಿಪಾಯಿ ಟೆಕ್ನಿಕಲ್ ಹುದ್ದೆಗೆ ದ್ವಿತೀಯ ಪಿ.ಯು.ಸಿ. (ವಿಜ್ಞಾನ) ಪಾಸಾಗಿರಬೇಕು. ಸಿಪಾಯಿ ಕ್ಲಾರ್ಕ್ ಎಸ್.ಕೆ.ಟಿ ಹುದ್ದೆಗೆ ದ್ವಿತೀಯ ಪಿ.ಯು.ಸಿ. (ಕಲೆ, ವಾಣಿಜ್ಯ,ವಿಜ್ಞಾನ) ತೇರ್ಗಡೆಯಾಗಿರಬೇಕು. ಬಿ.ಎಸ್.ಸಿ. ಇಂಗ್ಲೀಷ ಗಣಿತದಲ್ಲಿ ಉತ್ತೀರ್ಣರಾಗಿದ್ದರೆ ಪಿ.ಯು.ಸಿ, ಎಸ್.ಎಸ್.ಎಲ್.ಸಿ. ಶೇ. 40 ಅಂಕ ಅಗತ್ಯವಿರುವುದಿಲ್ಲ. ಇಂಗ್ಲೀಷ, ಗಣಿತ ವಿಷಯದಲ್ಲಿ ಡಿಗ್ರಿ ಮಾಡದೇ ಇದ್ದಲ್ಲಿ ಪಿ.ಯು.ಸಿ. ಅಥವಾ ಎಸ್.ಎಸ್.ಎಲ್.ಸಿ.ಯಲ್ಲಿ ಇಂಗ್ಲೀಷ ಮತ್ತು ಗಣಿತದಲ್ಲಿ ಶೇ. 40 ರಷ್ಟು ಅಂಕ ಗಳಿಸಿರಬೇಕು. ನರ್ಸಿಂಗ್ ಸಹಾಯಕ ಹುದ್ದೆಗೆ ದ್ವಿತೀಯ ಪಿಯುಸಿ ವಿಜ್ಞಾನ ತೇರ್ಗಡೆಯಾಗಿರಬೇಕು. ಕನಿಷ್ಠ 40 ರಷ್ಟು ಅಂಕ ಪಡೆದಿರಬೇಕು. ಬಿ.ಎಸ್.ಸಿ.ಯಲ್ಲಿ ಶೇ. ಅಗತ್ಯವಿಲ್ಲ. ಆದರೆ ಪಿಯುಸಿಯಲ್ಲಿ ಜೀವಶಾಸ್ತ್ತ್ರ ಮತ್ತು ಇಂಗ್ಲೀಷ ವಿಷಯದಲ್ಲಿ ಪಾಸಾಗಿರಬೇಕು. ಎಲ್ಲ ಜಿಲ್ಲೆಗಳಿಂದ ಎನ್ಸಿಸಿ/ಎಬಿಸಿ/ಪ್ರಮಾಣ ಪತ್ರ ಹೊಂದಿದ ಕ್ರೀಡಾಪಟುಗಳು ಸೈನಿಕರ ವಿಧವೆಯರು, ವಿಧವೆಯರು, ಮಾಜಿ ಸೈನಿಕರ ಮಕ್ಕಳು, ಸೈನಿಕ ಟೆಕ್ನಿಕಲ್, ಸೈನಿಕ ಕ್ಲಾರ್ಕ್, ಸ್ಟೌರ್ ಕೀಪರ್ ಟೆಕ್ನಿಕಲ್ ಮತ್ತು ಸೈನಿಕ ನರ್ಸಿಂಗ್ ಸಹಾಯಕ ಹುದ್ದೆಗೆ ಕರೆಯಲಾಗಿದೆ. ವಯೋಮಿತಿ 17 ಳಿ ರಿಂದ 23 ವರ್ಷರೊಳಗಿರಬೇಕು.

ಅಕ್ಟೌಬರ್ 18 ರಿಂದ 21 ರವರೆಗೆ ಸಿಪಾಯಿ ಜಿ.ಡಿ, ಸಿಪಾಯಿ ಜಿ.ಡಿ. (ಎಸ್.ಎಂ.ಪಿ) (ವಯೋಮಿತಿ 17 ಳಿ ರಿಂದ 21 ವರ್ಷರೊಳಗಿರಬೇಕು), ಸಿಪಾಯಿ ಟ್ರೇಡ್ಸ್ಮನ್ (ವಯೋಮಿತಿ 17 ಳಿ ರಿಂದ 23 ವರ್ಷರೊಳಗಿರಬೇಕು) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಕ್ಟೌಬರ್ 18 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗಾ, ಉಡುಪಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬೇಕು. ಅಕ್ಟೌಬರ್ 19 ರಂದು ಹಾಸನ, ದಾವಣಗೆರೆ, ಚಿತ್ರದುರ್ಗ ಅಭ್ಯರ್ಥಿಗಳು ನೇಮಕಾತಿಯಲ್ಲಿ ಭಾಗವಹಿಸಬೇಕು. ಅದರಂತೆ ಅಕ್ಟೌಬರ್ 20 ರಂದು ಬಿಜಾಪೂರ ಮತ್ತು ಚಿಕ್ಕಮಗಳೂರ ಅಭ್ಯರ್ಥಿಗಳು, ಅಕ್ಟೌಬರ್ 21 ರಂದು ಧಾರವಾಡ, ಕೊಡಗು, ಓಟ್ ಸೈಡರ್ ಅಭ್ಯರ್ಥಿಗಳು ಭರ್ತಿ ರ್ಯಾಲಿಗೆ ಭಾಗವಹಿಸಬಹುದು. ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಪಾಸಾಗಿರಬೇಕು. ಸಿಪಾಯಿ ಟ್ರೇಡ್ಮನ್ ಹುದ್ದೆಗೆ 10 ಮತ್ತು 8ನೇ ತರಗತಿಯಲ್ಲಿ ಕನಿಷ್ಠ ಮಟ್ಟದಲ್ಲಿ

ತೇರ್ಗಡೆಯಾಗಿರಬೇಕು. ಆಯಾ ದಿನಾಂಕಗಳಂದು ಆಯಾ ಜಿಲ್ಲೆಯ ಎನ್ಸಿಸಿ/ಎಬಿಸಿ/ಪ್ರಮಾಣ ಪತ್ರ ಹೊಂದಿದ ಕ್ರೀಡಾಪಟುಗಳು, ಸೈನಿಕರ ವಿಧವೆಯರು, ವಿಧವೆಯರು, ಮಾಜಿ ಸೈನಿಕರ ಮಕ್ಕಳು ಸಿಪಾಯಿ ಜಿ.ಡಿ. ಮತ್ತು ಸಿಪಾಯಿ ಜಿ.ಡಿ. ಮೆಟ್ರಿಕ್ ಪಾಸ್, ಸಿಪಾಯಿ ಟ್ರೇಡ್ಸ್ಮನ್ ಹುದ್ದೆಗಳಿಗೆ ಕರೆಯಲಾಗಿದೆ.

ಅಕ್ಟೌಬರ್ 19 ರಂದು ಮಾಜಿ ಸೈನಿಕರಿಗೆ (ಡಿ.ಎಸ್.ಪಿ), ಭೂಸೇನೆ, ವಾಯುಸೇನೆ, ಜಲಸೇವೆ, ಸಿಪಾಯಿ ಜಿ.ಡಿ. ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಕರ್ನಾಟಕದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಆಯ್ಕೆ ದಿನಾಂಕಕ್ಕೆ 48 ವರ್ಷ ವಯೋಮಿತಿ ಹೊಂದಿರಬೇಕು. ಕನಿಷ್ಠ 5 ವರ್ಷದ ಕಲರ ಸರ್ವಿಸ್ ಸಲ್ಲಿಸಿರಬೇಕು. ನಡತೆ ತುಂಬಾ ಉತ್ತಮಕ್ಕಿಂತ ಕಡಿಮೆ ಇರಬಾರದು. ಮೆಟ್ರಿಕ್ಯುಲೇಶನ್ ಸರ್ಟಿಫಿಕೇಟ್ ಅಥವಾ ಸೇನೆ ವಿದ್ಯಾಭ್ಯಾಸದ ಪ್ರಮಾಣ ಪತ್ರ ಹೊಂದಿರಬೇಕು. ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಯಲಿದೆ. ಸಿಪಾಯಿ ಜಿ.ಡಿ. ಹುದ್ದೆಗೆ 166 ಸೆಂ.ಮೀ. ಎತ್ತರ, 50 ಕೆ.ಜಿ. ತೂಕ, 77/82 ಎದೆ ಸುತ್ತಳತೆ ಹೊಂದಿರಬೇಕು. ಸಿಪಾಯಿ ಟೆಕ್ನಿಕಲ್/ಎನ್ಎ ಹುದ್ದೆಗೆ 165 ಸೆಂ.ಮೀ. ಎತ್ತರ, 50 ಕೆ.ಜಿ. ತೂಕ, 77/82 ಎದೆ ಸುತ್ತಳತೆ ಹೊಂದಿರಬೇಕು. ಸಿಪಾಯಿ ಗುಮಾಸ್ತ/ಟೆಕ್ನಿಕಲ್ ಹುದ್ದೆಗೆ 162 ಸೆಂ.ಮೀ. ಎತ್ತರ, 50 ಕೆ.ಜಿ. ತೂಕ, 77/82 ಎದೆ ಸುತ್ತಳತೆ ಹೊಂದಿರಬೇಕು. ಹಾಗೂ ಸಿಪಾಯಿ ಟ್ರೇಡ್ಸ್ಮನ್ ಹುದ್ದೆಗೆ 166 ಸೆಂ.ಮೀ. ಎತ್ತರ, 48 ಕೆ.ಜಿ. ತೂಕ, 76/81 ಎದೆ ಸುತ್ತಳತೆ ಹೊಂದಿರಬೇಕು. ಅಭ್ಯರ್ಥಿಗಳು ಆಯಾ ದಿನಾಂಕಗಳಂದು ಬೆಳಿಗ್ಗೆ 5 ಗಂಟೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಪಾಸಾದ ಮೂಲ ಪ್ರತಿ, 12 ಪಾಸ್ಫೋರ್ಟ್ ಸೈಜ್ ಕಲರ್ ಫೋಟೋ, ವಾಸಸ್ಥಳದ ಇಂಗ್ಲೀಷ ಪ್ರಮಾಣ ಪತ್ರ, ನಡತೆ ಪ್ರಮಾಣಪತ್ರ, ಎನ್ಸಿಸಿ ಅಭ್ಯರ್ಥಿ ಪ್ರಮಾಣ ಪತ್ರ, ಆಟೋಟಗಳ ಪ್ರಮಾಣ ಪತ್ರ ಈ ಎಲ್ಲ ಪ್ರಮಾಣ ಪತ್ರಗಳ 2 ಝೆರಾಕ್ಸ ಪ್ರತಿಗಳು ತರಬೇಕು. ಡಿಎಸ್ಪಿ ಹುದ್ದೆಗೆ ವಿದ್ಯಾಭ್ಯಾಸ ಪ್ರಮಾಣ ಪತ್ರ, 12 ಪಾಸ್ಫೋರ್ಟ್ ಸೈಜ್ ಕಲರ ಫೋಟೋ, ಡಿಚಾರ್ಜ್ ಪುಸ್ತಕ ಮೂಲ ಪ್ರತಿ, ಸೇನೆ ವಿದ್ಯಾರ್ಹತೆ, ಮೇಪ್ ಓದುವ ಸರ್ಟಿಫಿಕೇಟ್, ನಡತೆ ಪ್ರಮಾಣಪತ್ರ, ಗ್ರೂಪ್ ಇನ್ಸುರನ್ಸ್ ಮೂಲ ಪ್ರತಿ, ಜನ್ಮ ದಿನಾಂಕ ಪ್ರಮಾಣ ಪತ್ರ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಎ.ಆರ್.ಓ. ಕುಲುರ ಪೋಸ್ಟ್ ಮಂಗಳೂರು-575013, ದೂರವಾಣಿ ಸಂಖ್ಯೆ: 0824-2458376 ಮತ್ತು ಕರ್ನಾಟಕದ ಐ.ವಿ.ಆರ್.ಎಸ್. ನಂಬರ್ 080-25599290 ಇಲ್ಲಿ ಸಂಪರ್ಕಿಸಲು ಬೆಳಗಾವಿ ಫೋರ್ಟ್ದಲ್ಲಿರುವ ಆರ್ಮಿ ರಿಕ್ರೂಟಿಂಗ್ ಆಫೀಸ್ನ ಸಹಾಯಕ ರಿಕ್ರೂಟಿಂಗ್ ಅಧಿಕಾರಿ ಸುಬೇದಾರ್ ಮೇಜರ್ ಬಲವಿಂದರ್ಸಿಂಗ್ (ದೂರವಾಣಿ ಸಂಖ್ಯೆ: 0831-2465550) ಅವರು ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here