2.50 ಲಕ್ಷ ಅನುದಾನದ ಚೆಕ್ ವಿತರಣ

0
10
loading...

ಯಕ್ಸಂಬಾ (ತಾ. ಚಿಕ್ಕೌಡಿ) 23- ಇಲ್ಲಿಯ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಕಾಮಗಾರಿಯ ಚೆಕ್ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.

ಮಾಂಜರಿ ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ ಪ್ರಯತ್ನದಿಂದ ಮಂಜೂರುಗೊಂಡ 2.50 ಲಕ್ಷ ಅನುದಾನದ ಚೆಕ್ನ್ನು ಗಣೇಶ ಹುಕ್ಕೇರಿಯವರು ಸಂಸ್ಥೆ ಅಧ್ಯಕ್ಷ ಮಾರುತಿ ಮಾನೆಯವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ ಹುಕ್ಕೇರಿ ಸಂಸ್ಥೆಯ ಏಳ್ಗೆಗೆ ಎಲ್ಲ ಆಡಳಿತ ಮಂಡಳಿ ಮಾರ್ಗದರ್ಶನ, ಸಿಬ್ಬಂದಿಗಳ ಪರಿಶ್ರಮ ಹಾಗೂ ಸದಸ್ಯರ ಸಹಕಾರ, ಅವಶ್ಯಕವಾಗಿದೆ ಎಂದರು.

ಮಾರುತಿ ಮಾನೆ ಮಾತನಾಡಿ ಸಂಸ್ಥೆ ಅಭಿವೃದ್ದಿ ಹಾಗೂ ಕಟ್ಟಡ ಕಾಮಗಾಗಿ ಈಗಾಗಲೇ ಶಾಸಕ ಪ್ರಕಾಶ ಹುಕ್ಕೇರಿಯವರ ಮಾರ್ಗದರ್ಶನದಲ್ಲಿ ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ ಎನ್.ಸಿ.ಡಿ.ಸಿ ಅಡಿಯಲ್ಲಿ 5.47ಲಕ್ಷ ಸಬ್ಸಿಡಿ ಸಾಲವನ್ನು ಮಂಜೂರು ಮಾಡಿದ್ದು, ಇದಲ್ಲದೇ ಸದರಿ ಕಟ್ಟಡ ಕಾಮಗಾರಿಗೆ 2.50 ಲಕ್ಷ ಅನುದಾನ ಬಿಡುಗಡೆಗೊಳಿಸಿ ಸಂಘದ ಅಭಿವೃದ್ದಿಗೆ ಸಹಕರಿಸಿದ್ದು ಸಂಘದ ಸದಸ್ಯರ ಪರವಾಗಿ ಅಭಿನಂದಿಸುವದಾಗಿ ತಿಳಿಸಿದರು.  ಸಂಘದ ಮುಖ್ಯ ಕಾರ್ಯ ನಿರ್ವಾಹಕರಾದ ಶಂಕರ ಅವಟಿ ಮಾತನಾಡಿ ಸಹಕಾರಿ ಸಂಘದಲ್ಲಿ ಈಗಾಗಲೇ 837 ಸದಸ್ಯರಿದ್ದು, ಸಂಸ್ಥೆ ಪ್ರಸಕ್ತ ವರ್ಷದಲ್ಲಿ 13.41 ಲಕ್ಷ ಲಾಭ ಪಡೆದಿದೆ. ಸುಮಾರು 631 ಸದಸ್ಯರಿಗೆ ಬೆಳೆ ಸಾಲವನ್ನು ಹಾಗೂ ಟ್ರ್ಯಾಕ್ಟರ ಸಾಲವನ್ನು ಶೇ. 3 ಬಡ್ಡಿ ದರದಲ್ಲಿ ನೀಡಲಾಗಿದ್ದು ಈ ವರ್ಷದಲ್ಲಿ ಶೇ. 10 ರಂತೆ ಲಾಭಾಂಶ ಹಂಚಲಾಗಿದೆ ಎಂದರು. ಅಲ್ಲಮಶಾ ಮಕಾನದಾರ, ಶಿವಕುಮಾರ ಬಾವಚೆ, ಗಣಪತಿ ಮಾಳಿ, ಶಿವಾಜಿ ಮಾನೆ, ಸಿದ್ದಪ್ಪ ಗಿಡ್ಡ, ಶ್ರೀಪತಿ ಬಾಕಳೆ, ರಾವು ಪವಾರ ಮುಂತಾದವರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here