29103 ಅನಧಿಕೃತ ಅನಿಲ ಸಂಪರ್ಕ ರದ್ದು

0
23
loading...

ಹಾವೇರಿ.ಅಕ್ಟೌಬರ್.12ಃ ಜಿಲ್ಲೆಯಲ್ಲಿ ಅನಧೀಕೃತ ಹಾಗೂ ಕಾನೂನು ಬಾಹಿರವಾಗಿ ಬಳಕೆಯಲ್ಲಿದ್ದ 29103 ಗೃಹೋಪಯೋಗಿ ಅನಿಲ ಸಂಪರ್ಕಗಳನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಅನಧಿಕೃತ ಕಾನೂನು ಬಾಹಿರ ಅಥವಾ ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವವರು ಎಂದು ಪರಿಗಣಿಸಿ, ಲಿಎಲ್.ಪಿ.ಜಿ ಸರಬರಾಜು ಮತ್ತು ನಿಯಂತ್ರಣ ಆದೇಶ-2000ಳಿ ದಂತೆ ಈ ಅಡಿಗೆ ಅನಿಲ ಸಂಪರ್ಕಗಳನ್ನು ರದ್ದುಪಡಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 9 ಎಲ್.ಪಿ.ಜಿ. ವಿತರಕರಿದ್ದು, ಒಟ್ಟು 98636 ಅನಿಲ ಸಂಪರ್ಕಗಳು ಚಾಲ್ತಿಯಲ್ಲಿದ್ದವು. ಈ ಗ್ರಾಹಕ ಸಿಂಧುತ್ವ ಪರೀಶೀಲಿಸಲು ಅವರು ಹೊಂದಿರುವ ಮನೆಯ ವಿದ್ಯುತ್ ಬಿಲ್ನೊಂದಿಗೆ ಜೋಡಿಸಲಾಗಿತ್ತು. ಈ ವಿಷಯವಾಗಿ ಗ್ರಾಹಕರಿಗೆ ಸಾಕಷ್ಟು ಮಾಹಿತಿ ಮತ್ತು ಕಾಲಾವಕಾಶ ನೀಡಲಾಗಿತ್ತು. ಈ ಎಲ್ಲ ಪ್ರಕ್ರೀಯೆ ಮುಗಿದ ನಂತರ ಪರೀಶೀಲನೆ ನಡೆಸಿ ಒಟ್ಟು 29103 ಸಂಪರ್ಕಗಳನ್ನು ರದ್ದುಪಡಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಗೃಹೋಪಯೋಗಿ ಅನಿಲ ಸಂಪರ್ಕ ರದ್ದುಗೊಂಡ ಏಜೆನ್ಸಿವಾರು ವಿವರ ಇಂತಿದೆ.- ಅರವಿಂದ ಏಜೆನ್ಸಿ ಬ್ಯಾಡಗಿ-5762, ಮೂಕಾಂಬಿಕಾ ಏಜೆನ್ಸಿ ಹಾನಗಲ್ಲ-1946, ಬೆಲ್ಲದ ಏಜೆನ್ಸಿ ಹಾವೇರಿ-1390, ಮಾಗಾವಿ ಏಜೆನ್ಸಿ ಹಾವೇರಿ- 3185, ಬಸವೇಶ್ವರ ಏಜೆನ್ಸಿ ಹಿರೇಕೆರೂರು-3327, ಬಾದಾಮಿ ಏಜೆನ್ಸಿ ರಾಣೇಬೆನ್ನೂರು-3367, ದೀಕ್ಷಿತ ಏಜೆನ್ಸಿ ರಾಣೇಬೆನ್ನೂರು-3020, ಸಿದ್ದೇಶ್ವರ ಏಜೆನ್ಸಿ ಸವಣೂರು- 3700, ವಿನಾಯಕ ಏಜೆನ್ಸಿ ಶಿಗ್ಗಾಂವ- 3406.

ಈಗ ರದ್ದುಪಡಿಸಲಾದ ಅಡಿಗೆ ಸಂಪರ್ಕದಾರರ ವಿವರಗಳನ್ನು ಜಿಲ್ಲೆಯ ಸಂಬಂಧಪಟ್ಟ ಏಜೆನ್ಸಿಗಳಲ್ಲಿ ಪ್ರಕಟಿಸಲಾಗಿದೆ. ಒಂದೊಮ್ಮೆ ಯಾವುದೇ ಗ್ರಾಹಕರು ಈ ಆದೇಶದಿಂದ ಬಾಧಿತರಾದಲ್ಲಿ ತಮ್ಮ ಸಂಪರ್ಕದ ಪುನರ್ ಸ್ಥಾಪನೆಗಾಗಿ ತಮ್ಮ ಅನಿಲ ಸಂಪರ್ಕದ ದಾಖಲೆ, ವಾಸದ ಮನೆಯ ವಿದ್ಯುತ್ ಬಿಲ್ ಹಾಗೂ ಪಡಿತರ ಚೀಟಿಗಳ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಶಾಖೆ ಇಲ್ಲವೇ ಆಯಾ ತಹಸೀಲದಾರ ಕಚೇರಿಗಳಿಗೆ ಸಲ್ಲಿಸಬಹುದು. ಇಂತಹ ಮನವಿಗಳ ಸ್ಥಳ ಪರೀಶೀಲನೆ ಮಾಡಿ ಅರ್ಹರೆಂದು ಕಂಡು ಬಂದಲ್ಲಿ ಅಂಥವರ ಎಲ್.ಪಿ.ಜಿ. ಸಂಪರ್ಕ ಮುಂದುವರೆಸಲು ಮರು ಆದೇಶ ಹೊರಡಿಸಲಾಗುವುದೆಂದು ಜಿಲ್ಲಾಧಿಕಾರಿ ಹೆಚ್.ಜಿ. ಶ್ರೀವರ ಅವರು ಸ್ಪಷ್ಟಪಡಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here