4.97 ಲಕ್ಷ ರೂ ಲಾಭದಲ್ಲಿ ಬಸವೇಶ್ವರ ಸಹಕಾರಿ: ಮಠಪತಿ

0
21
loading...

ಅಥಣಿ, 5- (ಕ.ವಾ.) ಅಥಣಿ ಸಮೀಪದ  ಅಡಹಳಟ್ಟಿ ಬಸವೇಶ್ವರ  ವಿವಿದೋದ್ದೇಶಗಳ  ಸಹಕಾರಿ ಸಂಘವು ಪ್ರಸಕ್ತ ವರ್ಷದಲ್ಲಿ 4 ಲಕ್ಷ 97 ಸಾವಿರ ಲಾಭ ಗಳಿಸಿದೆ. ಎಂದು ಸಂಘದ ಅಧ್ಯಕ್ಷ   ನಿಂಗಯ್ಯಾ  ಎಸ್. ಮಠಪತಿ  ಹೇಳಿ ದರು.

ಅವರು ಸಂಘದ ವಾರ್ಷಿಕ  ಸರ್ವಸಾಧಾರಣ ಸಭೆಯ ಅಧ್ಯಕ್ಷತೆ  ವಹಿಸಿ ಮಾತನಾಡಿಮ ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘವು ಕೇವಲ 8 ವರ್ಷಗಳಲ್ಲಿ  ಸುಸಜ್ಜಿತ ಕಟ್ಟಡ, ಗಣಕೀಕೃತ ವ್ಯವಸ್ಥೆಯೊಂದಿಗೆ  ದಿನದ   24 ಗಂಟೆ  ಕಾರ್ಯ ನಿರ್ವಹಿಸುತ್ತಿದೆ.  6 ಕೋಟಿ  ವಹಿವಾಟು  ನಡೆಸಿದೆ ಎಂದರು.  ಬ್ಯಾಂಕಿನ  ವ್ಯವಸ್ಥಾಪಕ ವ್ಹಿ. ಬಿ. ಚಿಂತಾಮಣಿ  ವರದಿ ವಾಚನ ಮಾಡಿ 1 ಕೋಟಿ 50 ಲಕ್ಷ 49  ಸಾವಿರ ಠೇವಣಿ  ಇದ್ದು, 10.52 ಲಕ್ಷ ಶೇರು  ಬಂಡವಾಳದೊಂದಿಗೆ  1.16 ಕೋಟಿ ಸಾಲ ಹಂಚಲಾಗಿದೆ. 841 ಸದಸ್ಯರಿಗೆ  ಇದರ ಲಾಭಾಂಶ ವಿತರಿಸುವುದಾಗಿ ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಬಸವಂತ ಕಳ್ಳಿ  ನಿರ್ದೇಶನ ಸಂಗಪ್ಪಾ ಗುಡ್ಡಾಪುರ, ಸಿದ್ಧರಾಯ ಸಾತಣ್ಣವರ ಮಾರುತಿ  ಸನದಿ  ದಾನಯ್ಯ  ಮಾರುತಿ ಸನದಿ ದಾನಯ್ಯ ಮಠಪತಿ  ವಿಜಯ  ಕಲಿಮಡಿ, ಸುರೇಖಾ  ಕಲಿಮಡಿ, ಆಶಾ ನಾಟಿಕಾರ,  ಡಾ. ಅಣ್ಣಪ್ಪಾ ಚಿಕ್ಕಟ್ಟಿ, ಡಾ. ವಿ.ಎಸ್. ಖೋತ, ಗಂಗಪ್ಪಾ  ಖೋತ   ಹಾಗೂ  ಸಂಘದ  ಸದಸ್ಯರು  ಅಭಿಮಾನಿಗಳು  ಗ್ರಾಮದ ಹಿರಿಯರು  ಉಪಸ್ಥಿತರಿದ್ದರು.  ವಿಠ್ಠಲ  ಚಿಂತಾಮಣಿ ಸ್ವಾಗತಿಸಿದರು. ರವಿ ಬೀಳೂರು ನಿರೂಪಿಸಿದರು.  ಮಲ್ಲಪ್ಪ  ಕಳ್ಳಿ ವಂದಿಸಿದರು.

loading...

LEAVE A REPLY

Please enter your comment!
Please enter your name here