ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರು

0
12
loading...

ಬಾಗಲಕೋಟ, 14-ಮುಧೋಳ ನಗರದ ಹೊರವಲಯದ ಶ್ರೀ ಸಿದ್ರಾಮೇಶ್ವರ ದೇವಸ್ಥಾನದ ಬಳಿ ನಿರ್ಮಿಸಲು ಉದ್ದೇಶಿಸಿರುವ ನಿಯೋಜಿತ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರು ಆಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ, ಈ ಭವನ ಒಂದು ಸುಸಜ್ಜಿತ ಕಟ್ಟಡವಾಗಿದೆ. ಇಲ್ಲಿ ಸಭೆ ಸಮಾರಂಭಗಳು, ಸಾಂಸ್ಕ್ಕತಿಕ ಚಟುವಟಿಕೆಗಳು ನಡೆಯುವಂತೆ ಬೃಹತ್ ವೇದಿಕೆ ಸೇರಿದಂತೆ ಎಲ್ಲ ಸಿದ್ಧತೆಗಳಿಗಾಗಿ ನೀಲನಕ್ಷೆ ತಯಾರಿಸಲಾಗುವುದೆಂದು ಕಾರಜೋಳ ವಿವರಿಸಿದರು.

ಇದೇ ರೀತಿ ತಾಲೂಕಿನ ಮದಬಾಂವಿಯಲ್ಲಿ ಹಾಗೂ ನಂದಗಾಂವ್ ಗ್ರಾಮದಲ್ಲಿ ಭವನ ನಿರ್ಮಾಣಕ್ಕಾಗಿ ತಲಾ 10 ರಂತೆ ಒಟ್ಟು 20 ಲಕ್ಷ ಮಂಜೂರು ಆಗಿದೆ, ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮಕ್ಕೆ 10 ಲಕ್ಷ ಮಂಜೂರು ಅಗಿದೆಂದು ಕಾರಜೋಳ ತಿಳಿಸಿದರು  ಈ ಸಂದರ್ಭದಲ್ಲಿ ಪ್ರಮುಖವಾದ ಗುರುರಾಜ ಕಟ್ಟಿ, ಬಿ.ಎ. ಪಾಟೀಲ ಕಿಶೋರ, ಎಲ್.ಕೆ. ಬಳಗಾನೂರ, ಅಶೋಕ ಕುಳಲಿ, ಸಿದ್ದು ಸೂರ್ಯವಂಶಿ, ಕಾಶಿನಾಥ ಹುಡೇದ, ಎಸ್.ಎಂ. ಮುಳ್ಳೂರ, ಉದಯ ಕುಲಕರ್ಣಿ ಮುಂತಾದವರು ಉಪಸ್ಥಿತ ರಿದ್ದರು.

loading...

LEAVE A REPLY

Please enter your comment!
Please enter your name here