ಅಪೌಷ್ಠಿಕತೆಯಿಂದ ಅಧಿಕ ಮಕ್ಕಳ ಸಾವು – ಡಾ.ಬಿ.ಎಸ್.ಪಾಟೀಲ

0
25
loading...

ವಿಜಾಪೂರ, ನ.14: ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಕ್ಕಳ ಸಾವು ಹೆಚ್ಚಾಗಿದೆ ಎಂದು ಅಲ್ ಅಮಿನ್ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. .ಬಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಆಹಾರ ಸಂಸ್ಕರಣ ಮತ್ತು ಪೌಷ್ಠಿಕತೆ ವಿಭಾಗ ಮತ್ತು ಕರ್ನಾಟಕ ವಿಜ್ಞಾನ ಹಾಗೂ  ತಂತ್ರಜ್ಞಾನ  ಆಕಾಡೆಮಿಯ ಸಹಯೊಗದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ ಆಹಾರ ಸಂಸ್ಥೆ ರಣ ವಿಜ್ಞಾನ ವಿಶೇಷ ಕಾರ್ಯಗಾರ ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲಿಯೂ ಆಹಾರ ಪೌಷ್ಠಿಕತೆಯ ಬಗೆಗೆ ಸ್ಪಷ್ಟ ತಿಳಿವಳಿಕೆ ಇಲ್ಲ. ಮಹೀಳೆಯರು ಗರ್ಭಿಣಿಯರಿದ್ದಾಗ ಸೇವಿಸುವ ಆಹಾರದಲ್ಲಿ

ಪೌಷ್ಠಿಕತೆ ಇರದಿದ್ದೆರೆ ಅದು ಭವಿಷ್ಯದಲಿ ಮಕ್ಕಳ ಆರೊಗ್ಯದ ಮೇಲೆ ದುಷ್ಪರಿನಾಮಗಳನ್ನು ಬೀರುತ್ತದೆ. ಈ ಸಂಗತಿ ಹಲವಾರು ಸಂಶೋದನೆಗಳಿಂದ ದೃಡಪಟ್ಟಿದೆ

ಎಂದು ಡಾ. ಪಾಟೀಲ ವಿವರಿಸಿದರು. ಆಹಾರ ಪೌಷ್ಟಿಕಾಂಶಗಳ ಬಗೆಗೆ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ಈ ಕಾರ್ಯಗಾರ ಹಮ್ಮಿಕೊಂಡಿರುವದು ಅಂತ್ಯಂತ ಶ್ಲಾಘನಿಯ ಎಂದರು.

ಸಮಾರಂಭದ ಅಧ್ಯಕ್ಷತೆಯ ವಹಿಸಿದ ಕುಲಪತಿ ಪ್ರೊ. ಗೀತಾ ಬಾಲಿ ಮಾತನಾಡಿ, ಆಹಾರ ಅಂದಾಕ್ಷಣ ಅದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು

ಎಂದು ಭಾವಿಸಲಾಗದು ಎಂದು ತಿಳಿಸಿದರು. ಪೌಷ್ಟಿಕಾಂಶಗಳುಳ್ಳ ಆಹಾರ ತಯಾರಿಸುವದು ಒಂದು ಕೌಶಲ್ಯ. ಇಂತ ವಿಶಿಷ್ಟ ಕೌಶಲ್ಯವನ್ನು ನಮ್ಮ ವಿದ್ಯಾರ್ಥಿ ನಿತರು ಗಳಿಸಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು. ಮಹಿಳಾ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರು. ಮಹಿಳಾ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರ

ಜತೆಗೆ ಹ್ರಾಮೀಣ ಮಹಿಳೆಯರಿಗೂ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡುವದಕ್ಕಾಗಿಯೇ ಮಹಿಳಾ ತಂತ್ರಜ್ಞಾನ ಪಾರ್ಕ ಆರಂಬಿಸಿದ್ದು ಬಹುಪಯೋಗಿ ತರಬೇತಿ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ಪ್ರೊ. ಗೀತಾ ಬಾಲಿ ತಿಳಿಸಿದರು. ವೇದಿಕೆಯ ಮೇಲೆ ಕುಲಸಚಿವೆ ( ಮೌಲ್ಯ ಮಾಪನ)ಪ್ರೊ.ಡಿ.ಎಚ್. ತೇಜಾವತಿ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕ ಡಾ. ಎಂ. ಬಿ. ದಿಲ್ಷಾದ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಟಿ. ಶಾಂತಾದೇವಿ ನಿರೂಪಿಸಿದರು. ಮಹಿಳಾ ತಂತ್ರಜ್ಞಾನ ಪಾರ್ಕ್ನ ನಿರ್ದೇಶಕ ಪ್ರೊ. ಎಸ್. ಎ. ಖಾಜಿ ವಂದಿಸಿದರು…

loading...

LEAVE A REPLY

Please enter your comment!
Please enter your name here