ಅವಿಭಜಿತ ಬಿಜಾಪುರ ಜಿಲ್ಲೆಯ ನೀರಾವರಿ ಹೋರಾಟ: ವಿಚಾರ ಸಂಕಿರಣ

0
15
loading...

ವಿಜಾಪೂರ, ನ.14: ಇಂದು ಇಲ್ಲಿಯ ಸಮಾಜ ವಿಜ್ಞಾನ ವೇದಿಕೆ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿವಗಂತ ಎನ್.ಕೆ.ಉಪಾಧ್ಯಯರ 10ನೇ ಪುಣ್ಯ ಸ್ಮರಣೆ ಸ್ಮರಣಾರ್ಥ ಅವಿಭಜಿತ ಬಿಜಾಪುರ ಜಿಲ್ಲೆಯ ನೀರಾವರಿ ಹೋರಾಟದ ಇತಿಹಾಸ ಕುರಿತು ನ. 15ರಂದು ಬೆಳಗ್ಗೆ 11 ಗಂಟೆಗೆ ಬಸವ ವನದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಯರನಾಳ ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣವನ್ನು ಪ್ರಾಂತ ರೈತ  ಸಂಘದ ರಾಜ್ಯ ಕಾರ್ಯದರ್ಶಿ ಜಿ.ಸಿ.ಭಯ್ಯಾರೆಡ್ಡಿ ಅವರು ಉದ್ಘಾಟಿಸಲಿದ್ದಾರೆ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ,  ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ಅಧ್ಯಕ್ಷ ಶಿವಾನಂದ ಪಾಟೀಲ,ನೀರು ಬೇಕು ಸಮಿತಿಅಧ್ಯಕ್ಷ ವಿಶ್ವನಾಥ ಭಾವಿ, ನೀರಾವರಿ ರೈತ ಹೋರಾಟ ಸಮಿತಿಯ ಮುಖಂಡ ಪಂಚಪ್ಪ ಕಲ್ಬುರ್ಗಿ ಮತ್ತಿತರರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ನ್ಯಾಯವಾದಿಗಳಾದ ವಿ.ಎಂ.ಕಟ್ಟಿ, ಎಂ.ಎಂ. ಸುತಾರ, ಕೆ. ಎಸ್. ಗುಂಡಣ್ಣನವರ ಮುಂತಾದವರು ಅಥಿತಿಗಳಾಗಿ ಪಾಲ್ಗೊಳ್ಳಲಿದ್ದಾರೆ…

loading...

LEAVE A REPLY

Please enter your comment!
Please enter your name here