ಆನೆಯಮೇಲೆ ಸತ್ಯಾತ್ಮತೀರ್ಥರಿಗೆ ಅದ್ದೂರಿ ಸ್ವಾಗತ

0
21
loading...

ಬಾಗಲಕೋಟೆ,14- ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ನವನಗರದ ಸಂಜೆ ಭವ್ಯ ಮೆರವಣಿಗೆಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ವಿಜಾಪುರದಿಂದ ಆಗಮಿಸಿದ ಪೂಜ್ಯರನ್ನು ಬೈಕ್ ರ್ಯಾಲಿ ಮೂಲಕ ಸೀಮಿಕೇರಿ ಬಾಯ್ ಪಾಸ್ದಿಂದ ಇಂಜೀನೀಯರಿಂಗ್ ಕಾಲೇಜ್ ವರ್ತುಲದವರೆಗೆ ಬರಮಾಡಿಕೊಂಡು ನಂತರ ಅಲ್ಲಿಂದ ಸುಮಾರು ಎರಡು ಗಂಟೆಗಳ ಕಾಲ ನಡೆದ ಶೋಭಾಯಾತ್ರೆಯಲ್ಲಿ ನವನಗರ 18ನೇ ಸೆಕ್ಟರ್ನಲ್ಲಿರುವ ಶ್ರೀ ನಾರಾಯಣ ದೇವರ ಗುಡಿವರೆಗೆ ಬರಮಾಡಿಕೊಳ್ಳಲಾಯಿತು.

ಆನೆಯ ಮೇಲೆ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರನ್ನು ಕೂರಿಸಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಕರಾವಳಿಯ ಚಂಡಿವಾದ್ಯ, ನೂರಾರು ಮಹಿಳೆಯರಿಂದ ವಿವಿಧ ಭಜನಾ ಮಂಡಳಿಗಳ ದಾಸ ಗೀತೆಗಳ ಪಠಣ, ಪಂಡಿತರ ಮಂತ್ರ ಘೋಷ, ಮುಗಿಲು ಮುಟ್ಟುತ್ತಿದ್ದ ಘೋಷಣೆಗಳು, ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತಿದ್ ಪಟಾಕಿಗಳ  ಮೂಲಕ ಜನತೆ ಮೆರವಣಿಗೆಯಲ್ಲಿ ಸಂಭ್ರಮಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು, ಮೆರವಣಿಗೆಯ ನಂತರ ಶ್ರೀಗಳ ಆಶೀರ್ವಚನ ಜರುಗಿತು. ಶ್ರೀ ನಾರಯಣದೇವರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಎನ್.ಎಚ್. ದೇಶಪಾಂಡೆ, ಗುಡಿ ಸಹೋದರರು, ಲಕ್ಷ್ಮೀ ನಾರಾಯಣ ಗುಡಿ, ಕಿರಣ ಕುಲಕರ್ಣಿ, ಮುಕುಂದ ಕುಲಕರ್ಣಿ, ಪ್ರದೀಪ ಪರ್ವತೀಕರ, ಡಾ. ಜಯತೀರ್ಥ ದೇಶಪಾಂಡೆ, ಭಾಸ್ಕರ ಮನಗೂಳಿ, ತಾಳಿಕೋಟಿ, ಕಾವೇರಿ ಮತ್ತಿತರರು ಮೆರವಣಿಗೆಯ ನೇತೃತ್ವವಹಿಸಿದ್ದರು.

loading...

LEAVE A REPLY

Please enter your comment!
Please enter your name here