ಜೀವನ ಸಮೃದ್ಧಗೊಳ್ಳಲು ಭಗವಂತನ ನಾಮಸ್ಮರಣೆ ಒಂದೇ ಸಾಕು – ಶ್ರೀ ದಾನೇಶ್ವರ ಶ್ರೀಗಳು

0
32
loading...

ಜಮಖಂಡಿ ್ಷ ಬೆಳಗಾವ ಜಿಲ್ಲೆಯ ರಾಯಭಾಗ ತಾಲೂಕಿನ ಪರಮಾನಂದ ವಾಡಿಯಲ್ಲಿ ಕಳೆದ ಶನಿವಾರ ಜರುಗಿದ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಶಾಖಾಮಠದಲ್ಲಿ 17 ನೇ ಪಾರಮಾರ್ಥಿಕ ಸಪ್ತಾಹವು ಎರಡು ದಿನಗಳವರೆಗೆ ಅತೀ ಸಡಗರದಿಂದ ಜರುಗಿತು ಎಂದು ವರದಿಯಾಗಿದೆ.

ಶನಿವಾರ ದಿನಾಂಕ 12 ರಂದು ಪರಮಾನಂದ ವಾಡಿಯ ಶ್ರೀ ಮಹಾಲಕ್ಷ್ಮೀ ಹಾಗೂ ಶ್ರೀ ಪರಮಾನಂದರ ಮತ್ತು ಸವದಿ ಗ್ರಾಮದ ಬಸವಗೋಪಾಲ ಮಠದ ಪಾಲಕಿಯ ಮೇರವಣಿಗೆಯ ಉದ್ದಕ್ಕೂ ಸುಮಂಗಲಿಯರು ಪೂರ್ಣ ಕುಂಭದೊಂದಿಗೆ ಆರತಿ ಎತ್ತಿ ವೈಭವಯುತವಾಗಿ ಸ್ವಾಗತಿಸಿದರು.

ಸಂಜೆ ಜರುಗಿದ ಶಿಗೊಲ್ಲನ ಮನ ಒಲಸಿ ಧರೆಗೆ ತಂದ ವಲ್ಲಭಷಿ ಎಂಬ ಪೌರಾಣಿಕ ನಾಟಕ ನಭೂತು ನಭವಿಷ್ಯತಿ ಎನ್ನುವ ರೀತಿಯಲ್ಲಿ ಜರುಗಿತು. ಈ ನಾಟಕವನ್ನು ಕೇವಲ ಪ್ರಾಥಮಿಕ ಶಾಲೆಯ ಸುಮಾರು 182 ವಿದ್ಯಾರ್ಥಿಗಳು ಬೆಳಗಿನ ಜಾವದವರೆಗೆ ಅಭಿನುಸಿದ್ದು ಒಂದು ಪವಾಡವೇ ಸರಿ ಎಂದು ಹಿರಿಯರು ಬಾು ತುಂಬಾ ಹರಿಸಿದರು. ನಾಟಕಕ್ಕೆ ಅಥಿತಿಗಳಾಗಿ ಆಗಮಿಸಿದ ಬನಹಟ್ಟಿಯ ಎನ್.ಬಿ.ಕಾಡದೇವರ ಅವರು ಮಾತನಾಡಿ ಈ ನಾಟಕ ಪ್ರದರ್ಶನ ಅತಿ ಅದ್ಬುತವಾಗಿದೆ ಎಂದರು. ಶಿವನಾಂದ ಸ್ವಾಮಿಜಿ ನೇಪಾಳ ಅವರು ಮಾತನಾಡಿ ಮಕ್ಕಳ ಕಲೆಯನ್ನು ಮುಕ್ತಕಂಠದಿಂದ ಬಣ್ಣಿಸಿದರು. ನಾಟಕದಲ್ಲಿ ಮೂಡಿಬಂದ ವೈಕುಂಠ, ಭೂಲೋಕ ದೃಶ್ಯಗಳು ವರ್ಣಾತಿತವಾಗಿದೆ ಎಂದರು. ಪೂಜ್ಯ ದಾನೇಶ್ವರರು ತಮ್ಮ ಆಶೀರ್ವಚನದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಮುಡಿಬರಲು ಬಂಡಿಗಣಿಯ ಬಸವೇಶ್ವರನ ಕೃಪಾ ಹಾಗೂ ವೆಂಕಟೇಶ್ವರ ದಯದಿಂದ ನಡೆದಿದೆ ಎಂದರು. ಮಾನವರೆಲ್ಲರೂ ದುಡಿದು ತಿನ್ನಬೇಕು. ಪರರ ಸಂಪತ್ತು ನಮಗೆ ಆಪತ್ತು ಜೀವನ ಉದ್ದಾರವಾಗಬೇಕಾದರೆ ಆ ಭಗವಂತ ನಾಮಸ್ಮರಣೆ, ಕೀರ್ತನ, ಭಜನೆಗಳನ್ನು ಸದಾಕಾಲ ಮಾಡಬೇಕು ಅಂದಾಗ ಎಲ್ಲರಿಗೂ ಆ ನನ್ನ ತಂದೆ ಬಸವ ಸುಖಶಾಂತಿ, ನೆಮ್ಮದಿ ಹಾಗೂ ಆನಂದವನ್ನು ಉಂಟು ಮಾಡಲಿ ಎಂದು ಆಶೀರ್ವದಿಸಿದರು.

loading...

LEAVE A REPLY

Please enter your comment!
Please enter your name here