ತಪ್ಪಾಗಿದೆ, ತಿದ್ಕೌಳ್ತೇವೆ : ನಾಂುುಕ ವೀರೇಂದ್ರ ಸೆಹ್ವಾಗ್ ನುಡಿ

0
16
loading...

ಕಟಕ್,30-ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದ ನಂತರ ಮಾತನಾಡಿರುವ ಭಾರತದ ನಾಂುುಕ, ಕೆಲವೊಂದು ತಪ್ಪುಗಳಾಗಿದ್ದು ಮುಂದಿನ ಪಂದ್ಯಗಳಲ್ಲಿ ಸರಿಪಡಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಆಕರ್ಷಕ 72 ರನ್ ಗಳಿಸಿದ್ದರ ಹೊರತಾಗಿಂುೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರಿಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಹಾಗಿದ್ದರೂ ಅಂತಿಮ ಜೋಡಿಂುುಾದ ಉಮೇಶ್ ಂುುಾದವ್ ಮತ್ತು ವರುಣ ಆರೋನ್ ಗೆಲುವಿನ ಗೆರೆ ದಾಟಿಸಿದ್ದರು.

ನಾನು ನನ್ನ ಸ್ಥಾನದಿಂದ ಕದಲಲಿಲ್ಲ. ಇದು ಮತ್ತೊಂದು ನೆಕ್ ಟು ನೆಕ್ ಪಂದ್ಯವಾಗಿತ್ತು. ನಂಬರ್ ಹತ್ತು ಹಾಗೂ 11ನೇ ಕ್ರಮಾಂಕದವರಲ್ಲಿ ಏನೇ ಹೇಳಿದರೂ ಅವರಿಗೆ ಸಾಧ್ಯವಾದದನ್ನು ಅವರು ಮಾಡುತ್ತಾರೆ. ಏನೇ ಆದರೂ ಅಂತಿಮದ ವರೆಗೂ ಆಡಲು ಪ್ರಂುುತ್ನಿಸು ಎಂದಷ್ಟೇ ಹೇಳಿದ್ದೆ ಎಂದರು.

ರೋಹಿತ್ ಹಾಗೂ ರವೀಂದ್ರ ಜಡೇಜಾ ಉತ್ತಮ ಜತೆಂುುಾಟದಲ್ಲಿ ಬಾಗಿಂುುಾದರು. ನಾವು ಅಲ್ಲಿಂದಲೇ ಸುಲಭವಾಗಿ ಗೆಲ್ಲಬೇಕಿತ್ತು. ಆದರೂ ಕೊನೆಗೂ ಕಷ್ಟಪಟ್ಟಿದರೂ ಜಂುು ದಾಖಲಿಸಿದ್ದೇವೆ. ಮುಂದಿನ ಪಂದ್ಯದಲ್ಲಾದರೂ ಬ್ಯಾಟಿಂಗ್ ವಿಭಾಗದಲ್ಲಾದ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ ಎಂದರು.

ಅದೇ ಹೊತ್ತಿಗೆ ತಮ್ಮ ಆಕರ್ಷಕ 72 ರನ್ನುಗಳ ಆಟಕ್ಕೆ ತೃಪ್ತಿ ವ್ಯಕ್ತಪಡಿಸಿರುವ ಂುುುವ ಭರವಸೆಂುು ದಾಂಡಿಗ ರೋಹಿತ್ ಶರ್ಮಾ, ಪಂದ್ಯವನ್ನು ಬೇಗನೇ ಮುಗಿಸಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಕೊನೆಂುುವರೆಗೂ ಆಡುವುದು ನನ್ನ ಇರಾದೆಂುುಾಗಿತ್ತು. ಆದರೆ ಅಂತಿಮದಲ್ಲಿ ವಿಕೆಟ್ ಉಳಿಸಲು ಸಾದ್ಯವಾಗಿಲ್ಲ. ಹಾಗಿದ್ದರೂ ಪರವಾಗಿಲ್ಲ ನಾವು ಪಂದ್ಯ ಗೆದ್ದಿದ್ದೇವೆ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರೋಹಿತ್ ಸಂತಸ ವ್ಯಕ್ತಪಡಿಸಿದರು.

ಮತ್ತೊಂದೆಡೆ ನಿಕಟ ಪಂದ್ಯವನ್ನು ಕಳೆದುಕೊಂಡಿರುವುದಕ್ಕೆ ವಿಂಡೀಸ್ ನಾಂುುಕ ಡ್ಯಾರೆನ್ ಸಮ್ಮಿ ಸಹ ಬೇಸರ ವ್ಯಕ್ತಪಡಿಸಿದರು. ಂುುಾವುದೇ ಹಂತದಲ್ಲಾದರೂ ಪಂದ್ಯವನ್ನು ಕೈಬಿಡದಂತೆ ಆಟಗಾರರನ್ನು ಕೇಳಿಕೊಂಡೆ. ಆದರೆ ದುರದೃಷ್ಟವಶಾತ್ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.

 

loading...

LEAVE A REPLY

Please enter your comment!
Please enter your name here