ದೇಶ ಪ್ರೇಮ ಉತ್ತಮ ಸಮಾಜ ಸಂಸ್ಕ್ಕತಿಯನ್ನು ಮಕ್ಕಳಲ್ಲಿ ಬೆಳೆಸಿ: ಪಿ.ಸಿ. ಗದ್ದಿಗೌಡರ

0
28
loading...

 ಬಾಗಲಕೋಟೆ,14- ನವನಗರದ ರುಡ್ಸೆಟ್ನಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಬ.ವಿ.ವ. ಸಂಘದ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ, ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ 2011ರ ಜಿಲ್ಲಾ ಮಟ್ಟದ ಲಿಮಕ್ಕಳ ದಿನಾಚರಣೆಳಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯರಾದ ಪಿ.ಸಿ. ಗದ್ದಿಗೌಡರವರು ಉದ್ಘಾಟಿಸಿ, ಪಂಡಿತ ನೇಹರುವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವುದು ಮಕ್ಕಳ ಭವಿಷ್ಯದಲ್ಲಿಯೇ ನಮ್ಮ ಭವಿಷ್ಯ ಇದೆ ಎಂಬುದು ಸ್ಪಷ್ಟವಾಗುತ್ತದೆ. ಮಕ್ಕಳು ದೇಶದ ಸಂಪತ್ತು, ಅವರ ಸರ್ವತೋಮುಖ ಅಭಿವೃದ್ದಿ ದೇಶದ ಭವಿಷ್ಯವನ್ನು ರೂಪಿಸುವುದು. ಮಕ್ಕಳಲ್ಲಿ ದೇಶ ಪ್ರೇಮ, ಉತ್ತಮ ಸಮಾಜ, ಉನ್ನತ ಸಂಸ್ಕ್ಕತಿಯನ್ನು ಬೆಳೆಸುವುದು, ಎಲ್ಲಾ ಪಾಲಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಇದರಿಂದ ಮಕ್ಕಳಲ್ಲಿ ವಿಶಾಲ ಹೃದಯವಂತಿಕೆ ಬೆಳೆದು ಅವರು ಭಾರತರ ಭಾವಿ ಸತ್ತಪ್ರಜೇಗಳಾಗುತ್ತಾರೆಂಬುದಕ್ಕೆ ಎರಡು ಮಾತಿಲ್ಲ ಎಂದು ನುಡಿದು ಮಕ್ಕಳ ಬಗ್ಗೆ ಗಮನ ಹರಿಸಲು ಸರ್ವರಿಗೂ ಎಚ್ಚರಿಕೆ ನಡಿದರು. ಈ ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ಎಂ.ಎಲ್. ಸಿ.ನಾರಾಯಣಸಾ ಬಾಂಢಗೆ, ಜಿಲ್ಲೆ ಜಿಲ್ಲಾಧಿಕಾರಿಗಳು ಡಿ.ವಾಯ್. ಕುಂಜಪ್ಪ, ಜಿ.ಪಂ.ಕಾ.ನ.ಅ. ಎಸ್.ಜಿ. ಪಾಟೀಲ, ಜಿ.ಪಂ. ಅಧ್ಯಕ್ಷೆ ಕವಿತ ದಡ್ಡೇನವರ, ಜಿ.ಪಂ. ಉಪಾಧ್ಯಕ್ಷ ಹೂವಪ್ಪ ರಾಠೋಡ, ಜಿ.ಉ.ಕಾ. ಬಿ.ಎ.ಹರಿಶಗೌಡ, ಸಾ.ಶಿ.ಇ. ಉಪನರ್ದೇಶಕರಾದ ಮನಹಳ್ಳಿ, ಡಿ.ಎಚ್.ಓ. ಚೌದರಿಯವರು ಹಾಗೂ ಇನ್ನೂ ಅನೇಕ ಗಣ್ಯಮಾನ್ಯರು, ಮುದ್ದುಮಕ್ಕಳು, ಶಿಕ್ಷವೃಂದ ಹಾಗೂ ಪಾಲಕವೃಂದ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ನಂತರ ಮಕ್ಕಳ ವಿವಿಧ ಮಹಾಪುರುಷರ್ ವೇಶ-ಭೂಷಣಗಳನ್ನು ಧರಿಸಿ ನಮ್ಮ ಸಂಸ್ಕ್ಕತಿಯನ್ನು ನೆನಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ವೇದಿಕೆಯ ಗಣ್ಯರು ಪ್ರಶಸ್ತಿ ಪುರಸ್ಕಾರ ನಡಿದರು.

 

loading...

LEAVE A REPLY

Please enter your comment!
Please enter your name here