ಪಕ್ಷಿಗಳ ಕಲರವ, ಚಿರಗುಟ್ಟುವ ಚಿಲಿಪಿಲಿ ಹಕ್ಕಿಗಳ ಶಬ್ದವೇದಿ

0
55

ಪ್ರವಾಸಿಗರನ್ನು ಅಹ್ವಾನಿಸುತ್ತಿರುವ ಘಟಪ್ರಭಾ ಪಕ್ಷಿಧಾಮ!

ವಿಶೇಷ ವರದಿ: ಎಂ.ಬಿ.ಭಜಂತ್ರಿ

loading...

 

ಘಟಪ್ರಭಾ, 7;  ಘಟಪ್ರಭಾ ಪಕ್ಷಿಧಾಮಷಿ ಘಟಪ್ರಭಾ ರೈಲು ನಿಲ್ದಾಣದಿಂದ 3 ಕಿ.ಮಿ. ಹಾಗೂ ಗೋಕಾಕದಿಂದ 12 ಕಿ.ಮಿ. ದೂರದಲ್ಲಿರುವ ಒಂದು ಪ್ರೇಕ್ಷಣಿಯ ಸ್ಥಳ, ಪ್ರತಿಷ್ಠಿತ ದುಫದಾಳ ಪ್ರವಾಸಿ ಮಂದಿರದ ಪಕ್ಕದಲ್ಲಿ ದುಪದಾಳಕ್ಕೆ ಜಲಾಶಯಕ್ಕೆ ಹರಿದು ಬರುವ ಘಟಪ್ರಭಾ ಹಾಗೂ ಹೀರಣ್ಯಕೇಶಿ ನದಿಗಳ ಸಂಗಮ ದಿಂದ  ಹುಟ್ಟಿ ನೀರಿನ ನಡುಗಡ್ಡೆಯಲ್ಲಿ ನಿಸರ್ಗ ನಿರ್ಮಿತ ಪಕ್ಷಿದಾಮವು ಬಹಳಷ್ಟು ಪ್ರವಾಸಿಗರಿಗೆ ಪರಿಚಿತವಾಗಿಲ್ಲ. ಬೆಳಗಾವಿಯಿಂದಾ ಮಿರಜ ಇಲ್ಲವೇ ಮಿರಜ ಕಡೆಯಿಂದಾ ಬೆಳಗಾವಿ ಕಡೆಗೆ ರೈಲಿನಲ್ಲಿ ಪ್ರಯಾಣಿಸುವಾಗ ಗೋಕಾಕ ರೋಡ ದಾಟಿದ ಕೂಡಲೇ ಜಲಾಶಯದ ಸೇತುವೆಯ ಮೇಲೆ ರೈಲು ಹೋಗುವಾಗ ಜಲಾಶಯದ ನಡುವೆ ಹಸಿರು ವರ್ಣದ ಗುಂಪುಮರಗಳಿಂದ ಸುತ್ತುವರಿದು ಧ್ವೀಪದಂತೆ ಕಂಗೊಳಿಸುವದು ಕಣ್ಣಿಗೆ ಕಾಣುತ್ತದೆ.  ಆದರೆ ಅದು ಒಮ್ಮೆಲೆ  ಪಕ್ಷಿಧಾಮವೆಂದು ಗೊತ್ತಾಗುವದಿಲ್ಲಾ  ಪಕ್ಷಿಧಾಮದ ನಾಮ ಫಲಕಗಳನ್ನು ನೋಡಿಯೇ ಪಕ್ಷಿಧಾಮವೆಂದು ಪ್ರವಾಸಿಗರು ತಿಳಿದುಕೊಳ್ಳುತ್ತಾರೆ. ಸಂಜೆಯಾಗುತ್ತಿದ್ದಂತೆ ಹಕ್ಕಿಗಳ ಕಲರವ ಹೆಚ್ಚಾಗುತ್ತದೆ. ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಸಹಕಾರದಿಂದ ಗೋಕಾಕ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಅವರ ಪ್ರಯತ್ನದಿಂದ ಈ ಪಕ್ಷಿಧಾಮವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

 

ಇಲ್ಲಿ ಪ್ರತಿವರ್ಷ ಅಕ್ಟೌಬರ ತಿಂಗಳಿನಿಂದ ಫೆಬ್ರುವರಿ ತಿಂಗಳವರೆಗೆ ವಲಸೆ ಬರುವ  ನೂರಾರು ಪಕ್ಷಿಗಳು ತಮ್ಮ ಸಂತಾನೋತ್ಪತ್ತಿ ಪೂರೈಸಿ ಹಿಂತಿರುಗುತ್ತವೆ  ಈ ಪಕ್ಷಿಧಾಮದಲ್ಲಿ ವಿವಿಧ ಜಾತಿ ಪಕ್ಷಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.  ಗೋದ್ಬಾದ, ಬಿಳಿ ಕೆಂಬರಲು, ಬಾಯ್ಮುಳುಕ, ಚಮಚಮ ಕೊಕ್ಕು, ಮತ್ಕಭಕ್ಷಕ, ಗಿಡುಗ, ಜಾಗು ಸೆಳೆವ, ಹಸಿರು ಮರಳು ಪೀಪ, ಕೆಂಪು ಟಿಟ್ಟಿಭ, ಮರಗಾಲ ಹಕ್ಕಿ, ನೀರಕೋಳಿ, ಉದ್ದ ಬಾಲದ ಜಕಾದಾ, ಬೂದು ಉಲಿ ಹಕ್ಕಿ, ನೀಲಕಂಠ, ಕೆಂಪು ಬಾಲದ ಪಿಕಳಾರ, ಕರಿ ತಲೆ ಹಕ್ಕಿ, ನೀಲಿ ಬಾಲದ ಕಳ್ಳಿಪೀರ, ಮುಕುಟುದ ಬಾತು, ಸುವರ್ಣ ಪಕ್ಷಿ, ನೀಲಿ ಮಿಂಚುಳ್ಳಿ, ನವಿಲು ಸೇರಿದಂತೆ 250ಕ್ಕೂ ಅಧಿಕ ಜಾತಿ ಪಕ್ಷಿಗಳನ್ನು ಇಲ್ಲಿ ಕಾಣಬಹುದು. 2978ಹೆಕ್ಟೇರ್  ವಿಸ್ತೀರ್ಣ ಹೊಂದಿರುವ ಈ ಪಕ್ಷಿಧಾಮವು ಸಂಪೂರ್ಣ ಜಲಾಶಯದ ಮದ್ಯಭಾಗದಲ್ಲಿದೆ  ಸಾವಿರಾರು ಎಕರೆ ಕೃಷಿ ಭೂಮಿಗೆ  ನೀರುಣಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ದುಪದಾಳ ಜಲಾಶಯದ ನಡುವೆ ಇರುವುದರಿಂದ ಪಕ್ಷಿಧಾಮಕ್ಕೆ ಪ್ರವಾಸಿಗರು ಹೋಗಬೆಕಾದರೆ ದೋಣಿ ಮೂಲಕವೇ ಹೋಗಬೇಕಾಗುತ್ತದೆ ಹೀಗಾಗಿ  ಪ್ರವಾಸಿಗರಿಗೆ ಪಕ್ಷಿಧಾಮ ನೋಡುವುದು ಮರೀಚಿಕೆಯಾಗಿದೆ.

ಕಳೆದ ಅನೇಕ ವರ್ಷಗಳಿಂದ ತೀರಾ ನಿರ್ಲಕ್ಷಕ್ಕಿಡಾಗಿದ್ದ ಈ ಪಕ್ಷಿಧಾಮವನ್ನು ರಾಣೇಬೆನ್ನೂರ ಕಚೇರಿಯಿಂದಾ ಗೋಕಾಕ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಹಸ್ತಾಂತರಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಅವರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಮೇಲಾಧಿಕಾರಿಗಳ ಸಹಕಾರದಿಂದ ಸನ್ 2009-10 ರಲ್ಲಿ 12 ಲಕ್ಷ, ಸನ್ 2010-11 ರಲ್ಲಿ 14 ಲಕ್ಷ, ಹಾಗೂ 2011-12 ರಲ್ಲಿ 10 ಲಕ್ಷ ರೂ.ಗಳನ್ನು ಖರ್ಚು ಮಾಡಿ ಪ್ರವಾಸಿಗರ ಅನುಕೂಲಕ್ಕಾಗಿ ಬೋಟಿಂಗ ವ್ಯವಸ್ಥೆ, ವಿಕ್ಷಣಾ ಗೋಪೂರ, ಸುಮಾರ ಒಂದೂವರೆ ಕೀ.ಮಿ. ವಿಹಾರದ ಫಾರ್ಕ, ಪ್ರವಾಸಿಗರಿಗೆ ಅವಶ್ಯವಿರುವ ಕುಟೀರಗಳು. ಇಲ್ಲಿ ವಲಸೆ ಬರುವ ಪಕ್ಷಿಗಳು ತಂಗಲು ನಾನಾರೀತಿಯ ವ್ಯವಸ್ಥೆಗಳನ್ನು   ಮಾಡಿ ಅಭಿವೃದ್ದಿ ಪಡಿಸಿದ್ದಾರೆ. ಹಕ್ಕಿಗಳು ತಮ್ಮ ಚಿರಗುಟ್ಟುವ ಚಿಲಿಪಿಲಿ ಶಬ್ದಗಳಿಂದ ಪ್ರವಾಸಿಗರನ್ನು ಆಕರ್ಷಿಸುವಂತಾಗಿದೆ.  ಶನಿವಾರ-ಭಾನುವಾರ ರಜಾ ದಿನಗಳಲ್ಲಂತೂ ಪ್ರವಾಸಿಗರಿಗೆ, ಶಾಲಾ ಮಕ್ಕಳಿಗೆ ಹಾಗೂ ಪ್ರೇಮಿಗಳಿಗೂ ಪ್ರಿಯವಾದ ಸ್ಥಳವಾಗಿದೆ.

 

ಗೋಕಾಕ ತಾಲೂಕಿನಲ್ಲಿ ಸುಪ್ರಸಿದ್ದ ಗೋಕಾಕ ಜಲಪಾತ ಹಾಗೂ ಗೋಡಚಿನ ಮಲ್ಕಿ ಜಲಪಾತ ಅಷ್ಟೆ ಇದೆ ಅಂತಾ ಪ್ರವಾಸಿಗರು ಭಾವಿಸಿರಬಹುದು ಈ ಜಲಪಾತದಿಂದ ಕೇವಲ 5 ಕೀ.ಮಿ ಅಂತರದಲ್ಲೇ ಘಟಪ್ರಭಾ ಪಕ್ಷಿದಾಮ ಇದ್ದು ಈ ಪಕ್ಷಿಧಾಮದ ಬಗ್ಗೆ ಶಾಲಾ ಮಕ್ಕಳಿಗೆ ಹಾಗೂ ಪ್ರವಾಸಿಗರಿಗೆ ಮುದ ನೀಡುತ್ತದೆ. ಪ್ರವಾಸಿಗರು ಗೋಕಾಕ ಜಲಪಾತ ಮತ್ತು ಗೋಡಚಿನಮಲ್ಕಿ ಜಲಪಾತದ ಜೊತೆಗೆ ಈ ಘಟಪ್ರಭಾ ಪಕ್ಷಿಧಾಮವನ್ನು ನೋಡಿ ಪ್ರಚಲಿತಗೊಳಿಸುವದು ಅಗತ್ಯವಾಗಿದೆ…

loading...

LEAVE A REPLY

Please enter your comment!
Please enter your name here