ಬೆಳಗಾವಿಯಲ್ಲಿ 13 ರಂದು ವಧು-ವರರ ಸಮಾವೇಶ

0
56
loading...

ಗೋಕಾಕ ನ, 8 ;- ಕುಂದಾನಗರಿ ಬೆಳಗಾವಿಯಲ್ಲಿ ಉಪ್ಪಾರ ಬಾಂಧವರ ವಧು-ವರರ ಸಮಾವೇಶವನ್ನು ಸದಾಶಿವನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾರಂಗ ಮಂದಿರ (ಲಕ್ಷ್ಮೀ ಕಾಂಪ್ಲೆಕ್ಸ್ ಪಕ್ಕ) ದಲ್ಲಿ ಬರುವ ರವಿವಾರ ದಿ. 13 ರಂದು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ವಹಿಸಲಿದ್ದಾರೆ. ಆಸಕ್ತ ಕುಲಬಾಂಧವರು ಇದರ ಸದುಪಯೋಗ ಪಡೆಯಬೇಕು.

ವಧು-ವರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ತಮ್ಮ ಸ್ವ-ವಿವರದೊಂದಿಗೆ ಇತ್ತೀಚಿನ  ಪಾಸ್ ಪೋರ್ಟ ಸೈಜ್ನ 2 ಹಾಗೂ ಪೋಸ್ಟ್ ಕಾರ್ಡ ಸೈಜ್ನ 1 ಭಾವಚಿತ್ರಗಳನ್ನು ತೆಗೆದುಕೊಂಡು ಬರಬೇಕು. ಕಾರಣ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರಾದ ಬಸವರಾಜ ಆಯಟ್ಟಿ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬಸವರಾಜ ಆಯಟ್ಟಿ-9986557312, ಬಸವರಾಜ ತುಳಸಿಗೇರಿ- 9449033446, ಪ್ರೇಮಾ ಉಪ್ಪಾರ-9008841088, ಭೀಮಶಿ ಭರಮಣ್ಣವರ- 9483536759, ಶ್ರೀಮತಿ ದಂಡಿನ-9448164226 ಇವರನ್ನು ಸಂಪಕಿಸಬೇಕೆಂದು ವಿನಂತಿಸಲಾಗಿದೆ…

loading...

LEAVE A REPLY

Please enter your comment!
Please enter your name here