ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದ ಅಭಿವೃದ್ದಿ ಸಾಧ್ಯ: ರಮೇಶ ಜಾರಕಿಹೊಳಿ

0
23
loading...

ಗೋಕಾಕ ನ, 14 :- ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡು ಎಲ್ಲ ಸಮುದಾಯ ಸಂಘಟಿತರಾಗಿ ಶ್ರಮಿದರೆ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯವೆಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಅವರು ಸೋಮವಾರದಂದು ಜಿಲ್ಲಾ ಪಂಚಾಯತ ಬೆಳಗಾವಿ, ನಗರಸಭೆ ಮತ್ತು ತಾಲ್ಲೂಕಾ ಆಡಳಿತ ನಗರದ ಬೀರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಂತ ಕನಕದಾಸರ 524ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕನಕದಾಸ, ಬಸವಣ್ಣ, ಡಾ:ಅಂಬೇಡ್ಕರ, ವಾಲ್ಮೀಕಿ, ಶಿವಾಜಿ ಸೇರಿದಂತೆ ಹಲವಾರು ಮಹಾತ್ಮರ ಜಯಂತಿ ಕಾರ್ಯಕ್ರಮಗಳು ಕೇವಲ ಒಂದೇ ಜನಾಂಗಕ್ಕೆ ಸೀಮಿತವಾಗಿರುವುದು ವಿಷಾದನೀಯ. ಎಲ್ಲ ಸಮುದಾಯ ಹಿಂದಿನ ಆದರ್ಶ ಪುರುಷರ ತತ್ವಗಳನ್ನು ಆಚರಣೆ ಮಾಡಿಕೊಳ್ಳುವಂತಾಗಬೇಕು. ಕನಕದಾಸರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ. ದೇಶದಲ್ಲಿ ಶೇ 78 ರಷ್ಟು ಅಹಿಂದ ವರ್ಗಕ್ಕೆ ಸೇರಿದ್ದಾರೆ. ಈ ಅಹಿಂದ ಸಂಘಟನೆ ಮೂಲಕ ಗೋಕಾಕ ತಾಲ್ಲೂಕಿನಿಂದ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟ ಹೆಗ್ಗಳಿಕೆ ನಮ್ಮದಾಗಿದೆ. ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಸರ್ವ ಸಮಾಜದ ಹಿತವನ್ನು ಕಾಪಾಡಿದ್ದೇವೆ. ಅಹಿಂದ ಸಂಘಟನೆ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದೇವೆ. ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಸಂಘಟನೆ ಸಾಧ್ಯವೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, 1992 ರಲ್ಲಿ ಕನಕ ಪೀಠದ ತಾರಕ ಬೀರೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಿದ್ಧರಾಮಯ್ಯ, ಎಚ್.ವಿಶ್ವನಾಥ, ಎಚ್.ಎಂ. ರೇವಣ್ಣ ಅವರು ಕನಕ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಹಿಂದಿನ ಮಹಾನುಭಾವರು ಧಾರ್ಮಿಕತೆಯಲ್ಲಿ ಜಾತಿ ಮಾಡಬಾರದು ಎಂದು ಪ್ರಸ್ತಾಪಿಸಿದ್ದರು. ಆದರಿಂದು ಪರಿಸ್ಥಿತಿ ಬದಲಾಗಿದೆ. ಜಾತಿ ಸಂಘಟನೆಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು. ನಮ್ಮ ಹಿಂದುಳಿದ ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ ಸಮಾನವಾಗಿ ಕಾಣುವಂತೆ ಜಾರಕಿಹೊಳಿ ಸಹೋದರರನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಶಿಕ್ಷಣಕ್ಕೆ ಹೆಚ್ಚಿನ ಪ್ರಾತನಿಧ್ಯ ನೀಡಿ ಸಾಕ್ಷರರನ್ನಾಗಿ ಮಾಡುವ ಸಂಕಲ್ಪ ತೊಡಬೇಕೆಂದು ಡಾ: ಸಣ್ಣಕ್ಕಿ ಬಾಂಧವರಿಗೆ ಕರೆ ನೀಡಿದರು.

ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ ಮಸಗುಪ್ಪಿ ಹಾಗೂ ತಾಲ್ಲೂಕಾ ಕುರುಬರ ಸಂಘದ ಅಧ್ಯಕ್ಷ ಶಿದ್ಲಿಂಗ ದಳವಾಯಿ ಮಾತನಾಡಿ, ಮುಂದಿನ ದಿನಗಳಲ್ಲಿ ಮಹಾತ್ಮರ ಜಯಂತಿ ಉತ್ಸವ ಕಾರ್ಯಕ್ರಮಗಳು ಹಬ್ಬಗಳಂತೆ ಆಚರಣೆ ಮಾಡುವಂತಾಗಬೇಕು. ಜಾತಿ ಪದ್ದತಿಯನ್ನು ಹೋಗಲಾಡಿಸಲು ಯುವ ಜನಾಂಗ ಶ್ರಮಿಸಬೇಕು. ಸಂಘಟನೆಗೆ ಹೋರಾಟ ಮನೋಬಾವನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಸಮಾರಂಭದ ಸಾನಿಧ್ಯವನ್ನು ಬ್ರಹ್ಮಾನಂದ ಸ್ವಾಮಿಗಳು ವಹಿಸಿದ್ದರು.

ಗೋಕಾಕ ನಗರಾಧ್ಯಕ್ಷೆ ಸಾವಿತ್ರಿ ಕಂಬಳಿ, ಎಪಿಎಂಸಿ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಜಿ.ಪಂ ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ, ಪ್ರಭಾ ಶುಗರ್ಸ ಮಾಜಿ ನಿರ್ದೇಶಕ ಲಕ್ಷ್ಮಣ ತೋಳಿನವರ, ಮಾಜಿ ನಗರಾಧ್ಯಕ್ಷ ಎಸ್.ಎ. ಕೋತವಾಲ, ದುಂಡಪ್ಪ ಮುನ್ಯಾಳ,

ಮುರಸಿದ್ದಪ್ಪ ಹಾರೂಗೇರಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ನಗರಸಭೆ ಆಯುಕ್ತ ಚಿನ್ನಪ್ಪಗೌಡರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ, ಎಪಿಎಮ್ಸಿ ಸದಸ್ಯ ಮಡ್ಡೆಪ್ಪ ತೋಳಿನವರ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು. ತಹಶೀಲ್ದಾರ ಓದ್ರಾಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು…

loading...

LEAVE A REPLY

Please enter your comment!
Please enter your name here