ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ

0
15
loading...

ಬಾಗಲಕೋಟೆ, 16-ಮೂಲಭೂತ ಸೌಕರ್ಯ ಒದಗಿಸುವ ದರೊಂದಿಗೆ ಉದ್ಯೌಗ ಖಾತ್ರಿ ಯೋಜನೆಯಡಿ ಉದ್ಯೌಗ ಕಲ್ಪಿಸುವದರೊಂದಿಗೆ ಗುಳೆ ಹೋಗುವದನ್ನು ತಡೆಗಟ್ಟುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಜಿ.ಪಾಟೀಲ ವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ. ಸಭೆಯನ್ನು ಉದ್ದೇಶಿಸಿ ವಿವಿಧ ಯೋಜನೆಗಳಡಿ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸುವಂತೆ ಹಾಗೂ ಕುಡಿಯುವ ನೀರಿನ ಕೊರತೆ, ಮೇವು ಮತ್ತು ಮೂಲ ಭೂತ ಸೌಕರ್ಯವನ್ನು ಕಲ್ಪಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಉದ್ಯೌಗ ಅರಸಿ ಬೇರೆ ಕಡೆ ಗುಳೆ ಹೋಗುತ್ತಿರುವ ಜನರನ್ನು ತಡೆಯುವಲ್ಲಿ ಅಧಿಕಾರಿಗಳು ಉದ್ಯೌಗ ಖಾತ್ರಿ ಯೋಜನೆಯಡಿ ಉದ್ಯೌಗವನ್ನು ನೀಡಿ, ಗುಳೆ ಹೋಗುವದನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಕಾರ್ಯನಿರತರಾಗಬೇಕೆಂದರು, ಕೃಷಿ, ತೋಟಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೇರಿದಂತೆ, ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಧ ಶ್ರೀಮತಿ ಕವಿತಾ ಪಿ. ದಡ್ಡೇನವರ, ಜಿ.ಪಂ. ಉಪಾಧ್ಯಕ್ಷ ಹೂವಪ್ಪ ಎಸ್. ರಾಠೋಡ ಸೇರಿದಂತೆ ಜಿ.ಪಂ. ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು

loading...

LEAVE A REPLY

Please enter your comment!
Please enter your name here