ಮೇಣಬತ್ತಿ ತಯಾರಿಕಾ ಕಾರ್ಯಾಗಾರ

0
21
loading...

ಬಾಗಲಕೋಟೆ,14- ಬ.ವಿ.ವ ಸಂಘದ ಪಾಲಿಟೆಕ್ನಿಕ್ ಬಾಗಲಕೋಟೆ, ಪಾಲಿಟೆಕ್ನಿಕ್ ಮುಖಾಂತರ ಸಮುದಾಯ ಅಭಿವೃದ್ದಿ ಯೋಜನೆಯಡಿ, ಮೇಣಬತ್ತಿ ತಯಾರಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ತಾಲ್ಲೂಕಿನ ಬೆಣ್ಣೂರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ತ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕ ರವಿಕುಮಾರ, ಇಂತಹ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಹೆಣ್ಣುಮಕ್ಕಳಿಗೆ ತರಬೇತಿ ನೀಡಿ ಅವರು ಸ್ವ-ಉದ್ಯೌಗಿಗಳಾಗಲು ಅನುಕೂಲಕರ ವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಬೆಣ್ಣೂರ ಪುನರ್ವಸತಿ ಕೇಂದ್ರದ ಆರೋಗ್ಯ ಶಿಕ್ಷಣ ಅಧಿಕಾರಿ ಪವಾರ್ ಸಮಾಜ ಅಭಿವೃದ್ದಿ ಹೊಂದಲು ಇಂತಹ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವದನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ಬ.ವಿ.ವ. ಸಂಘದ ಪಾಲಿಟೆಕ್ನಿಕ್ ಸಹ ಸಂಯೋಜಕ ಎಸ್.ಎಚ್. ಮದರಖಂಡಿ ವಹಿಸಿ ಸಮುದಾಯ ಅಭಿವೃದ್ದಿ ಯೋಜನೆ ಕಾರ್ಯಕ್ರಮದ ಬಗ್ಗೆ ವಿವರಿಸಿ ಗ್ರಾಮೀಣ ಭಾಗದ ಜನರನ್ನು ಸ್ವ-ಉದ್ಯೌಗಿಗಳಾಗಿ ಮಾಡಲು ಸ್ವ-ಸಹಾಯ ಸಂಘಗಳು ಹಾಗೂ ಹಣದ ಸಹಾಯಕ್ಕೆ ಬ್ಯಾಂಕುಗಳಿದ್ದರೆ ಸಾಲದು ಅವರಿಗೆ ತರಬೇತಿ ಕೂಡಾ ಒಂದು ಮುಖ್ಯವಾದ ಅಂಗವಾಗಿದೆ. ಇಂತಹ ತರಬೇತಿಗಳನ್ನು ನಮ್ಮ  ಪಾಲಿಟೆಕ್ನಿಕ ಮುಖಾಂತರ ಸಮುದಾಯ ಅಭಿವೃಧ್ದಿ ಯೋಜನೆ ನಡುತ್ತಾಯಿದೆ ಎಂದು ತಿಳಿಸಿದರು. ಸಂಜಯ ಬಿರಾದಾರ ಹಾಗೂ ಊರಿನ ಗಣ್ಯಮಾನ್ಯರು ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಎಸ್.ಬಿ. ಹೊನ್ನಳ್ಳಿ ಮತ್ತು ಎಂ.ಎಸ್. ಕಂದಗಲ್ಲ ಇವರು ಉಪಸ್ಥಿತರಿದ್ದರು. ಸಿಂಗದವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here