ರೈತರ ಸಮಸ್ಯೆ ಇತ್ಯರ್ಥ ಕಾರ್ಖಾನೆಗಳು ಖಚಿತಪಡಿಸಿಲ್ಲ

0
12
loading...

ಬಾಗಲಕೋಟೆ,14- ಮುಖ್ಯಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ರೈತರ ಸಮಸ್ಯೆ ಇತ್ಯರ್ಥವಾಗಿದೆ ಎಂದು ರೈತರ ಸಮಸ್ಯೆ ಇತ್ಯರ್ಥ ವಾಗಿದೆ ಎಂದು ರೈತರು ಸಂತಸ ಪಟ್ಟಿದ್ದರೂ, ಅದರ ಬಗ್ಗೆ ಕಾರ್ಖಾ ನೆಗಳು ಇನ್ನೂ ಖಚಿತಪಡಿಸಿಲ್ಲ.                           ಶನಿವಾರ ಸಂಜೆ ಜಿ.ಪಂ. ಆವರಣದಲ್ಲಿ ನಡೆದ ಸಭೆ ಅಂತಿಮ ಹಂತದಲ್ಲಿ ಸಂಧಾನಕ್ಕೆ ವೇದಿಕೆಯಾಗಿದ್ದರೂ ಕಾರ್ಖಾನೆಗಳ ಜವಾಬ್ದಾರಿಯುತ ಅಧ್ಯಕ್ಷತೆ ಭಾಗವಹಿಸದಿರುವದರಿಂದ ಅದರ ಸಮ್ಮಿತಿ ಎಷ್ಟು ಖಚಿತ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ರೈತರು ಹೋರಾಟವನ್ನು ಬಿಗಿಗೊಳಿಸುವ ಹಂತದಲ್ಲಿ ಮುಖ್ಯಮಂತ್ರಿ ಸದಾನಂದಗೌಡರು ಸಭೆಯಲ್ಲಿ ಭಾಗವಹಿಸಿದದ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು ಖಚಿತವಾಗಿದೆ. ಆದರೆ, ಕಾರ್ಖಾನೆಗಳ ಅಧ್ಯಕ್ಷರೆ ಭಾಗವಹಿಸದಿರುವಾಗ ಅದಕ್ಕೆ ಸಮ್ಮತಿ ಹೇಗೆ ಸಾಧ್ಯ ಎಂಬುದು ಹೆಸರು ಹೇಳಿಲಿಚ್ಚಿಸದ ಪ್ರಮುಖರೊಬ್ಬರು ಪ್ರಶ್ನಿಸುತ್ತಿದ್ದಾರೆ.

ಆದರೆ, ಖಚಿತ ಮೂಲಗಳು ಕಾರ್ಖಾನೆಗಳು ಈ ನಿಲುವನ್ನು ಒಪ್ಪುತ್ತಿಲ್ಲ. ಏಕೆಂದರೆ ಸಂಧಾನ ಸಭೆ ಪುರ್ವಯೋಜಿತವಾಗಿ ನಡೆದಿದೆ. ಭಾಗವಹಿಸಬೇಕಾದ ಅಧ್ಯಕ್ಷರು ಭಾಗವಹಿಸದೇ ತಮ್ಮ ಪ್ರತಿನಿಧಿಗಳನ್ನು ಕಳಿಸಿರುವಾಗ ಸಭೆಯ ನಿರ್ಣಯಕ್ಕೆ ಅವರು ಬದ್ಧರಾಗಿರುತ್ತಾರೆ ಎಂಬ ವಾದ ಕೇಳಿ ಬಂದಿದೆ. ಸಭೆ ಆರಂಭದಲ್ಲಿಯೇ ಕಾರ್ಖಾನೆಯ ಅಧ್ಯಕ್ಷರು ಭಾಗವಹಿಸದಿರುವುದಕ್ಕಾಗಿ ಸಭೆಯನ್ನು ಮುಂದೂಡಲು ಕೋರಬಹುದಾಗಿತ್ತು. ಆದರೆ, ಸಭೇ ಮುಂದುವರೆದಿದೆ, ಹೀಗಾಗಿ ನಿರ್ಣಯಕ್ಕೆ ಎಲ್ಲರೂ ಬದ್ಧ ಎಂಬುದು ರೈತ ಪ್ರತಿನಿಧಿಗಳ ವಾದ. ಉದ್ದೇಶಪೂರ್ವಕವಾಗಿಯೇ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿಲ್ಲ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವರು ಉದ್ದೇಶಿಸಿದ್ದರು. ಆದರೆ ಮುಖ್ಯಮಂತ್ರಿಗಳು ಜಾಣತನದ ನರ್ಣಯ ಕೈಗೊಂಡು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ನಿರ್ಣಯ ಕೈಗೊಂಡು ಉಸ್ತು ವಾರಿ ಗೋವಿಂದ ಕಾರಜೋಳ ಅವರಿಗೆ ನಿರ್ಣಯ ಪ್ರಕಟಿಸಲು ಸೂಚಿಸಿದ್ದಾರೆ. ಈಗ ಅನುಷ್ಠಾನ ಗೊಳಿಸುವದು ಕಾರ್ಖಾನೆಗಳ ಹೊಣೆ ಎಂಬುದು ಅವರ ವಾದ.ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಈಗ ನರ್ಣಯ ಅನುಷ್ಠಾನ ಮುಖ್ಯಮಂತ್ರಿಗಳಿಗೆ ಇಲ್ಲದಿರುವಾಗ ನಿರ್ಣಯ ಅವರು ಹೇಗೆ ಪ್ರಕಟಿಸುತ್ತಾರೆ. ಎಂಬ ಪ್ರಶ್ನೆಯೂ ಕೇಳಿಬಂದಿದೆ. ಆದರೆ ಸಂದಾನ ಸಭೆಗೆ ಒಪ್ಪಿಕೊಂಡು ಬಂದಿರುವಾಗ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಗೆ ಉತ್ತರಿಸುವವರು ಯಾರು? ವಾದ ಏನೇ ಇರಲಿ ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳು ಈ ಆದೇಶವನ್ನು ಜಾರಿಗೊಳಿಸುವವೇ ಎಂಬುದನ್ನು ಕಾಯ್ದು ನೋಡಬೇಕು.

 

 

loading...

LEAVE A REPLY

Please enter your comment!
Please enter your name here