ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0
27
loading...

ವಿಜಾಪೂರ, ನ.14: ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ಇತ್ತಿಚಿಗೆ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯ್ತುಕಾ ಶ್ರಮದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲ ಕ್ರೀಡಾಕೂಟದಲಿ ತಾಲ್ಲೂಕಿನ ಇಂಡೊಜಪಾನ್ ಪ್ರೆಂಡ್ಶಿಪ್ ಆಕಾಡೆಮಿ ಕಾಸ್ಮೊನಿಕೇತನ ಪ್ರೌಡ  ಮತ್ತು ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಮೋಗಿ  ಬಂಡಿವಡ್ಡರ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ, ಸಾಗರ ರಾಠೋಡ ಅಡೆತಡೆ ಓಟದಲ್ಲಿ ದ್ವಿತಿಯಾ, ಭಾಗಿರಥಿ ಜಾಧವ ಬಲ್ಲೆ ಎಸೆತದಲ್ಲಿ ಪ್ರಥಮ, ಪ್ರಾಥಮಿಕ ವಿಭಾಗದ ಸಚಿನ ಕುಷಾಳಕರ 400ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವಿಧ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪ್ರಣವ್ ಎಚ್. ಕುಂಬಾರ, ಮುಖ್ಯಾಧ್ಯಾಪಕ ಬಿ. ಎಸ್. ವಂಟಮುರಿ, ದೈಹಿಕ ಶಿಕ್ಷಕ ಎಸ್. ಡಿ. ಕುಂಬಾರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ…

loading...

LEAVE A REPLY

Please enter your comment!
Please enter your name here