ಸಂಗೀತ ಕಾರ್ಯಕ್ರಮ

0
18
loading...

ಬೆಳಗಾವಿ 15- ಡಾ. ಪ್ರಭಾಕರ ಕೋರೆ ಆಸ್ಪತ್ರೆಯ 16ನೇ ವರ್ಷದ ವಾರ್ಷಿಕೋತ್ಸವದ ದಿನಾ ಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ನಾಗನೂರು ಸ್ವಾಮಿಗಳು ಹಾಗೂ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿಯವರು ವಹಿಸಿದ್ದರು.

ಕಾರ್ಯಕ್ರಮದ ನಿಮಿತ್ಯ ಕೆಎಲ್ಇ ವಿಶ್ವವಿದ್ಯಾಲಯ ಸಂಗೀತ ವಿಭಾಗದಿಂದ ಸ್ವರಸಂಧ್ಯಾ ಸಂಗೀತ ಕಾರ್ಯಕ್ರಮ ಜರುಗಿತು. ಸಂಗೀತ ವಿಭಾಗದ ಪ್ರಾಧ್ಯಾಪಕಿ ರ್ಶರೀಮತಿ ಸುನೀತಾ ಕೆ. ಪಾಟೀಲ ಹಾಗೂ ಶ್ರೀಮತಿ ದುರ್ಗಾ ಕಾಮತ ನಾಡಕರಣಿ ಇವರು ಪ್ರಸ್ತುತಪಡಿಸಿದರು. ಮೊದಲಿಗೆ ಯಮನ ರಾಗದಲ್ಲಿ ಶಿವಸ್ತುತಿ, ನಂತರ ಮೀರಾ ಭಜನೆ ಗಳನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕೊನೆಗೆ ಪ್ರಸಿದ್ಧ ಜಗಜೀತಸಿಂಗ್ ಇವರ ಬೋಷಿ ರಾಮ ಜಯ ಜಯ ರಾಮರಿಂದ ಸಂಗೀತ ಕಾರ್ಯಕ್ರಮ ಮುಕ್ತಾಯವಾಯಿತು. ಈ ಕಾರ್ಯಕ್ರಮಕ್ಕೆ ತಬಲಾ ಸಾಥ ಜಿತೇಂದ್ರ ಸಾಬಣ್ಣವರ ಮತ್ತು ಹಾರ್ಮೌನಿಯಂ ಯಾದವೇಂದ್ರ ನೀಡಿದರು.

ಈ ವಾರ್ಷಿಕೋತ್ಸವ ಸಮಾರಂಭಕ್ಕೆ ಕೆ.ಎಲ್.ಇ. ಆಸ್ಪತ್ರೆಯ ನಿರ್ದೇಶಕರಾದ ಡಾ. ಜಾಲಿ, ವಿಶ್ವ ವಿದ್ಯಾಲಯದ ಕುಲಪತಿ ಡಾ. ಸಿ.ಕೆ. ಕೋಕಾಟೆ ಹಾಗೂ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರು ಉಪಸ್ಥಿತ ರಿದ್ದರು.

 

loading...

LEAVE A REPLY

Please enter your comment!
Please enter your name here