ಸಂಪತ್ತಿನ ವ್ಯಾಮೋಹದಿಂದ ಮನಸ್ಸಿಗೆ ನೆಮ್ಮದಿ ಇಲ್ಲ

0
29
loading...

ಬಾಗಲಕೋಟೆ,18- ಕುಳಗೇರಿ ಕ್ರಾಸ್ ಮನುಷ್ಯ ಸಂಪತ್ತು, ಐಶ್ವರ್ಯದ ವ್ಯಾಮೋಹದಿಂದಾಗಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ ಎಂದು ಚಿರ್ಲಕೊಪ್ಪದ ಪೂರ್ಣಾನಂದ ಮಠದ ಮಾತೆ ಶಾಂತಮ್ಮ ತಾಯಿಯವರು ಹೇಳಿದರು. ಇಲ್ಲಿಯ ಚಿರ್ಲಕೊಪ್ಪ ಗ್ರಾಮದ ಶ್ರೀ ಪೂರ್ಣಾನಂದ ಮಠದಲ್ಲಿ ನಡೆದ ಶ್ರೀ ಶ್ರದ್ದಾನಂದ ಸ್ವಾಮಿಗಳ 74ನೇ ಹುಟ್ಟು ಹಬ್ಬ (ಜಬ್ಮೌತ್ಸವವನ್ನು) ಆಚರಿಸಿ ಮಾತನಾಡಿದ ಅವರು ಮನಸ್ಸು ಶಾಂತಿಯ ಅಕ್ಷಯ ಪಾತ್ರೆ, ಇಂದಿನ ದಿನಮಾನದಲ್ಲಿ ಶಾಂತಿ ನೆಮ್ಮದಿ ನಮ್ಮ ಬದುಕಿ ಶ್ರೇಷ್ಠ ಗಳಿಕೆಯಾಗಿಬೇಕೆ ಹೊರತು ಚಿನ್ನ, ದುಡ್ಡು, ಆಸ್ತಿಯಲ್ಲಎಂದ ಅವರು, ನಮ್ಮ ಬದುಕೆಂದರೆ ಸುಖ-ದುಃಖಗಳ ಸಮ್ಮಿಶ್ರಣದ ಸುಂದರ ನಡಿಗೆಯಾಗಬೇಕು, ಆದರೆ ಇತ್ತಿಚೆನೆ ದಿನಗಳಲ್ಲಿ ಮಾನ ಐಶ್ವರ್ಯಕ್ಕೆ ಮಾರುಹೋಗಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾನೆ, ಶಾಂತಿಯಿಂದ ಬದುಕುವುದೇ ಗೆಲುವಿನ ಜೀವನ, ಶಾಂತಿ ಸಮಾಧಾನವೇ ನಮ್ಮ ನಿಜಸಿರಿ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಪರಂಜ್ಯೌತಿ ಸ್ವಾಮಿಗಳು, ಮಾತೆ ಪಾರ್ವತೆಮ್ಮ ತಾಯಿಯವರು, ಮಾತೆ ಮುದ್ದಮ್ಮ ತಾಯಿಯವರು, ಮಾತೆ ಮುದ್ದಮ್ಮ ತಾಯಿಯವರು, ಮಾತೆ ಪಾರ್ತೆಮ್ಮ ತಾಯಿ ಹೊಸೊಕೋಟಿಮ ಹನಮಂತ ಸಣ್ಣಪ್ಪನವರ, ಬಸಪ್ಪ ಕಟ್ಟಿಕಾರ, ನಿಂಗಪ್ಪ  ಕುರಿ, ಬಸಪ್ಪ ಧರೆಗೌಡ್ರ, ಗನಪತಿ ಕುರಿ, ಸಣ್ಣಸಿದ್ದಪ್ಪ ತುರನೂರ, ಕರಿಗೌಡ ಪಾಟೀಲ, ನಿಂಗಪ್ಪ ಹೊಸಮನಿ, ಮಲ್ಲಪ್ಪ ಕಟ್ಟಿಕಾರ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

loading...

LEAVE A REPLY

Please enter your comment!
Please enter your name here