ಸಹಕಾರಿ ಸಪ್ತಾಹ ದಿನಾಚರಣೆ

0
22
loading...

ಬಾಗಲಕೋಟೆ, 16-ಸಹಕಾರ ಸಂಘಗಳು ಪರಸ್ಪರ ಲಾಭದಾಯಕ ಸಂಯುಕ್ತ ಬಂಡವಾಳ ಹಂಚಿಕೆಗೆ ಮುಂದಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಹಾದೇವಪ್ಪ ಹಟ್ಟಿ ಹೇಳಿದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಯುಕ್ತವಾಗಿ ಏರ್ಪಡಿಸಿದ್ದ 58ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಇತರೇ ಮೂಲಗಳಿಂದ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಬೇಕು ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಸಿ ಮಗದಮ್ ಕಾರ್ಯಕ್ರಮ ಉದ್ಘಾಟಿಸಿ ವೈದ್ಯನಾಥನ್ ವರದಿ ಜಾರಿಯಿಂದ ಸಹಕಾರಿ ಸಂಘಗಳ ಸ್ವಾವಲಂಬಿಯಾಗಲು ಸಾಧ್ಯವೆಂದರು.

ಸಹಕಾರಿ ಸಂಘಗಳ ಮಹಾನಬಂಧಕ ಎಚ್.ವೈ. ಗದ್ದನಕೇರಿ ಮಾತನಾಡಿ, ಸಹಕಾರ ಸಪ್ತಾಹ ಆಚರಣೆ ಮಹತ್ವ ವಿವರಿಸಿದರು. ಎಲ್.ಎಂ. ಪಾಟೀಲ, ಎಸ್.ಎಸ್. ಅಗಸಿ ಮುಂದಿನ, ಎಸ್.ಎ. ಅಣ್ಣಿಗೇರಿ, ಎಂ.ಬಿ. ಬಸವನಾಳ ಮತ್ತಿತರರು ಇದ್ದರು. ವಿ.ಎಸ್.ಬೀಳಗಿ ಸ್ವಾಗತಿಸಿದರು. ಎಂ.ಎಸ್. ನಾಗರಾಳ ನಿರೂಪಿಸಿದರು. ವಿ.ಜಿ.ಅಕ್ಕಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here