ಸುದ್ದಿಗೊಂದು ಚುಚ್ಚು ಮಾತು

0
8
loading...

ಈ ಬಾರಿ ಮುಖ್ಯಮಂತ್ರಿ  ಸದಾನಂದ ಗೌಡರು  ತಾವು ನುಡಿದಂತೆ ಕೇವಲ 50 ಜನರಿಗೆ ನೀಡುವುದಾಗಿ ಹೇಳಿ ಅಷ್ಟೇ ಜನರಿಗೆ ನೀಡುವ ಕಾರ್ಯ ಮಾಡಿದ್ದರು.

– ಸುದ್ದಿ

ನಾನು ಉಳಿದ ಮುಖ್ಯಮಂತ್ರಿಯಂತಲ್ಲ ನಾನೇ ಭೇರೆ ನನ್ನ ರೀತಿಯೇ ಬೇರೆ ಎಂದು ಸದಾನಂದ ಗೌಡರು ತೋರಿಸಿಕೊಟ್ಟಿದ್ದಾರೆ.

ಅಡ್ವಾಣಿ ಸಮಾವೇಶದಲ್ಲಿ ಯಡಿಯೂರಪ್ಪ ಬಣದ ಯಾವುದೇ ಸಚಿವರು ಬಂದರಲಿಲ್ಲ. ಹೀಗಾಗಿ ಭಾಜಪದ ಒಡಕು ಬಹಿರಂಗಗೊಂಡಂತೆ ಆಗಿದೆ.

-ಸುದ್ದಿ

ನಮ್ಮ ನಾಯಕ ಜೈಲಿನಲ್ಲಿ ಇರುವಾಗ ನಾವು ಬರುವುದಾದರೂ ಹೇಗೆ ಎಂದು ಭಾವುಸಿಕೊಂಡು ಅವರು ಗಥರ ಹಾಜರು ಆಗಿರಬಹುದು.

ಗಣ್ಯರಿಗೆ ಸೌಲಭ್ಯಗಳನ್ನು  ಕೈಲಿನಲ್ಲಿ ನೀಡುತ್ತಿಲ್ಲ ಎಂಬ ಕಾರಣದಿಂದ  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದ ಮುಖ್ಯ ಆಧೀಕ್ಷಕರು  ಎಚ್. ಟಿ. ಲಕ್ಷ್ಮೀ ನಾರಾಯಣ ಅವರ ವರ್ಗಾವಣೆಗೆ ಸಿದ್ದತೆ ನಡೆದಿದೆ.

– ಸುದ್ದಿ

ಅಧಿಕಾರ ದುರುಪಯೋಗದ ಹಗ್ಗ ತಿನ್ನುವ ಚಾಳಿಯನ್ನು ಬಿಡದ ಸಚಿವರು ತಾವು ಡೊಂಕು ಬಾಲದ ನಾಯಕರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಯಡಿಯೂರಪ್ಪನವರಿಗೆ ಟಾಂಗ್ ನೀಡಿ ಅಡ್ವಾಣಿಯವರು ಸದಾನಂದ ಗೌಡರ ಬಗ್ಗೆಮೆಚ್ಚುಗೆ  ವ್ಯಕ್ತ ಪಡಿಸಿದ್ದಾರೆ.

-ಸುದ್ದಿ ಜೈಲಿನಲ್ಲಿರುವ ಯಡಿಯೂರಪ್ಪನವರಿಂದ ತಾವು ಮೈಲು ದೂರ ಇರುವುದಾಗಿ ಅಡ್ವಾಣಿ ತೋರಿಸಿಕೊಟ್ಟಿದ್ದಾರೆ.

ಜೈಲಿನಲ್ಲಿ   ಸರಿಯಾಗಿ 5 ಗಂಟೆಗೆ ಟಿ.ವಿ. ಮುಂದೆ ಕುಳಿತ  ಯಡಿಯೂರಪ್ಪ ಅಡ್ವಾಣಿ ಸಮಾರಂಭವನ್ನು ಟಿ.ವಿ.ಯಲ್ಲಿ ನೋಡಿದ್ದಾರೆ.

-ಸುದ್ದಿ

ಸಮೀಪ ನೋಡುವ ಭಾಗ್ಯ  ಇಲ್ಲದಿದ್ದರೂ ಟಿವಿಯಲ್ಲಿ ನೋಡುವ ಭಾಗ್ಯವಾದರೂ ಇರಲಿ ಎಂದು ಯಡಿಯೂರಪ್ಪ ಹೀಗೆ ಮಾಡಿರಬಹುದು.

ಯಡಿಯೂರಪ್ಪ ಬಣದಂತೆ ಬಳ್ಳಾರಿ ರೆಡ್ಡಿ ದೊರೆಗಳ ಬಣದವರು ಸಹ ಅಡ್ವಾಣಿ ಸಮಾವೇಶದಿಂದ ದೂರವೇ ಉಳಿದಿದ್ದರು.

-ಸುದ್ದಿ

ದೊರೆಯೇ ಇಲ್ಲದಾಗ ನಮ್ಮದೇನು ಕೆಲಸ ಎಂದು ಭಾವಿಸಿಕೊಂಡು ರೆಡ್ಡಿ ಬಣದವರು ದೂರವೇ ಉಳಿದಿರಬಹುದು.

ಇದು ರಥಯಾತ್ರೆ ಅಲ್ಲ. ಅಢ್ವಾಣಿಯವರ ತೀರ್ಥಯಾತ್ರೆ ಎಂದು  ಕಾಂಗ್ರೆಸ್ಸ ನಾಯಕ ಬಿ.ಕೆ.ಹರಿಪ್ರಸಾದ  ಅವರು ಲೆವಡಿ ಮಾಡಿದ್ದರೆ.

-ಸುದ್ದಿ

84 ವರ್ಷವಾಗಿರುವುದರಿಂದ ಅವರು ಮಾಡುತ್ತಿರುವ ರಥಯಾತ್ರೆ ಹರಿಪ್ರಸಾದ ಕಣ್ಣಿಗೆ ತೀರ್ಥಯಾತ್ರೆಯಂತೆ ಕಂಡಿರಬಹುದು.

ಅಡ್ವಾನಿ ವಿರುದ್ಧ  ಪ್ರತಿಭಟನೆ ನಡೆಸಿದ ನಮ್ಮನ್ನು ಪೋಲಿಸರು ಬಂಧಿಸಿ ಲಂಚ ನೀಡಿದ ಮೇಲೆ ಬಿಟ್ಟರು ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಆಕ್ರೌಶ ವ್ಯಕ್ತ ಪಡಿಸಿದ್ದಾರೆ.

-ಸುದ್ದಿ

ಕಾಂಗ್ರೆಸ್ದವರಿಂದಲೇ ಲಂಚ ಪಡೆದಿರುವುದನ್ನು ನೋಡಿದರೆ ಪತ್ತಾರ ಅಕ್ಕನ ಬಂಗಾರವನ್ನೇ ಕದ್ದ  ಎಂಬ ಮಾತು ನೆನಪಿಗೆ ಬರುತ್ತದೆ.

 

loading...

LEAVE A REPLY

Please enter your comment!
Please enter your name here