ಹಳ್ಳ ಹಿಡಿದ ಬೆಳಗಾವಿ ನಗರ ಅಭಿವೃದ್ದಿ ಯೋಜನೆಗಳು

0
17
loading...

*ಇಚ್ಛಾಶಕ್ತಿ ಪ್ರದರ್ಶಿಸದ ಜನಪ್ರತಿನಿಧಿಗಳು, *ಬದ್ಧತೆ ಇಲ್ಲದ ಅಧಿಕಾರಿಗಳು

ವರದಿ : ಮೆಹಬೂಬ ಮಕಾನದಾರ

ಗಡಿಭಾಗದ ಬೆಳಗಾವಿ ನಗರ ಗಟ್ಟಿಯಾದರೆ ರಾಜ್ಯದ ಗಡಿ ಗಟ್ಟಿಯಾಗುತ್ತದೆ ಎಂಬ ಸದುದ್ದೇಶದಿಂದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪನವರುಗಳು ಬೆಳಗಾವಿ ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿ ಅಧಿಕಾರದಿಂದ ನಿರ್ಗಮಿಸಿದರೂ ಇನ್ನೂವರೆಗೆ ಹಲವಾರು ಯೋಜನೆ ಗಳ ಕಾಮಗಾರಿ ಗಳು ಪ್ರಾರಂಭವಾಗಿಲ್ಲ. ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಜನ 8ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹಲವಾರು ಜನಪರ

ಯೋಜನೆಗಳು ಇನ್ನೂವರೆಗೆ ನೆನೆಗುದಿಗೆ ಬಿದ್ದಿವೆ. ಇವುಗಳಲ್ಲಿ ಪ್ರಮುಖವಾಗಿ

ಬೆಳಗಾವಿ ಒಳಚರಂಡಿ ಅಭಿವೃದ್ದಿ ಯೋಜನೆಯಂತೂ ಸಂಪೂರ್ಣವಾಗಿ ಹಳ್ಳ

ಹಿಡಿದಂತೆ ಕಾಣುತ್ತಿದೆ. ಒಳಚರಂಡಿ ಅಭಿವೃದ್ದಿಗೆ ರಾಜ್ಯಸರಕಾರ 130 ಕೋಟಿ ರೂ.ಗಳನ್ನು ಮಂಜೂರು

ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಣೆ ಮಾಡಿ

ಬರೋಬ್ಬರಿ 2 ವರ್ಷಗಳು ಗತಿಸಿವೆ. ಈ 130 ಕೋಟಿ ಬಂತವೋ ಇಲ್ಲವೋ ಎನ್ನುವುದನ್ನು ಬೆಳಗಾವಿ

ನಗರದ ಜನಪ್ರತಿನಿಧಿಗಳು ಇನ್ನೂವರೆಗೆ ತುಟಿ ಬಿಚ್ಚುತ್ತಿಲ್ಲ.

ಒಳಚರಂಡಿ ಯೋಜನೆ ಬೆಳಗಾವಿಯನ್ನು ಎರಡನೇಯ ರಾಜಧಾನಿಯನ್ನಾಗಿ ಘೋಷಿಸುವ

ಪ್ರಸ್ತಾವನೆ ಐಟಿಬಿಟಿ ಪಾರ್ಕ್, ಹಿಡಕಲ್ ಜಲಾಶಯದ ಪ್ರದೇಶದಲ್ಲಿ ಬೃಂದಾವನ ಮಾದರಿಯ

ಉದ್ಯಾನವನ ನಿರ್ಮಾಣ, ಅಂತರಾಷ್ಟ್ತ್ರೀಯ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣ, ಟೆಕ್ಸ್ಟಾಯಿಲ್ ಪಾರ್ಕ್

ಹಾಗೂ ರೈಲ್ವೆ ಮೆಲ್ಸೇತುವೆಗಳ ನಿರ್ಮಾಣ, ಕಾಂದಾ ಮಾರ್ಕೆಟ್ ಅಭಿವೃದ್ದಿ ಕಾಮಗಾರಿ, ಗ್ಲಾಸ್ಹೌಸ್

ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಸರಕಾರ ಘೋಷಣೆ ಮಾಡಿದ್ದರೂ ಸಹ

ಇವುಗಳು ಇನ್ನೂವರೆಗೆ ಅನುಷ್ಠಾನಗೊಂಡಿಲ್ಲ. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಮೂವರು ಮಂತ್ರಿಗಳು

ಶಾಸಕರು ತಲೆ ಕೆಡಿಸಿಕೊಳ್ಳದೇ ಇರುವುದರಿಂದ ಸರಕಾರದ ಗಮನ ಸೆಳೆಯುವವರು ಯ್ಯಾರು ಎಂಬ

ಪ್ರಶ್ನೆ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಶ್ವಕನ್ನಡ ಸಮ್ಮೇಳನದಲ್ಲಿ

ಬೆಳಗಾವಿಯಲ್ಲಿ ಗ್ಲಾಸ್ ಹೌಸ್ ನಿರ್ಮಾಣಕ್ಕೆ 25 ಕೋಟಿ ರೂ.ಮಂಜೂರು ಮಾಡುವುದಾಗಿ ಘೋಷಣೆ

ಮಾಡಿದ್ದರು. ಈ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವಂತೆ ಸ್ಥಳೀಯ ನಾಯಕರಿಗೆ

ಕಟ್ಟುನಿಟ್ಟಿನ ಸೂಚನೆಯನ್ನು ಸಹ ನೀಡಿದ್ದರು. ಆದರೆ ಈ ಕಾಮಗಾರಿ ಘೋಷಣೆಯಾಗಿ ವರ್ಷ

ಕಳೆಯುತ್ತಾ ಬಂದರೂ ಇನ್ನೂವರೆಗೆ ಚಾಲನೆ ಪಡೆದುಕೊಂಡಿಲ್ಲ.

ಶಾಸಕ ಅಭಯ ಪಾಟೀಲರಂತೂ ಬೆಳಗಾವಿ ಅಭಿವೃದ್ದಿಗೆ ಸಂಬಂಧಿಸಿದಂತೆ ಹಲವಾರು

ಪ್ರಯೋಗಗಳನ್ನು ಮಾಡಿದ್ದಾರೆ.ಐಐಟಿ ಘಟಕ ಬೆಳಗಾವಿಯಲ್ಲಿ ಸ್ಥಾಪಿಸುವಂತೆ ರಾಜ್ಯದ 128 ಶಾಸಕರ

ಸಹಿ ಸಂಗ್ರಹಣೆ ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದಿವೆ. ಈ ಘಟಕವೂ

ಇನ್ನೂವರೆಗೆ ಬೆಳಗಾವಿಗೆ ಬಂದಿಲ್ಲ. ಈ ಬಗ್ಗೆ ಶಾಸಕ ಅಭಯ ಪಾಟೀಲರೂ ಪ್ರಯತ್ನಿಸುತ್ತಿಲ್ಲ.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಬಂಗೀ ಚಾಳ ಬಡಾವಣೆಯನ್ನು ಮಾದರಿ

ಬಡಾವಣೆಯನ್ನಾಗಿಸುವ ಅಭಯ ಪಾಟೀಲರ ಕನಸು ಇನ್ನೂವರೆಗೆ ನನಸಾಗಿಲ್ಲ. ಬೆಳಗಾವಿ ನಗರದ

ಸರ್ವಾಂಗೀಣ ಅಭಿವೃದ್ದಿಗಾಗಿ ಬೆಳಗಾವಿಯಲ್ಲಿ ಮಹಾತ್ಮಾಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಪ್ರಥಮ

ಕಾಂಗ್ರೆಸ್ ಅಧಿವೇಶನ ನಡೆದ ಸವಿನೆನಪಿಗಾಗಿ ಬೆಳಗಾವಿಯನ್ನು ಅಭಿವೃದ್ದಿಪಡಿಸಲು ಕೇಂದ್ರ

ಸರಕಾರದಿಂದ 5 ಸಾವಿರ ಕೋಟಿ ರೂ.ಅನುದಾನ ಪಡೆಯುವ ಪ್ರಸ್ತಾವನೆಯೂ ಸಹ ದೆಹಲಿಯಲ್ಲಿ

ಧೂಳು ತಿನ್ನುತ್ತಿದೆ.

loading...

LEAVE A REPLY

Please enter your comment!
Please enter your name here