8.86 ಕೋಟಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

0
15
loading...

ಬಾಗಲಕೋಟ ,29-   ಬಾಗಲಕೋಟ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಅವರು ಚಾಲನೆ ನಡಿದರು.

ಸೋಮವಾರ ಬೆಳಿಗ್ಗೆ ಎ.ಪಿ.ಎಂ.ಸಿ ಬಳಿ ಎ.ಪಿ.ಎಂ.ಸಿ ಕ್ರಾಸ್ ಬಳಿಯಿಂದ ಅನುಷಾ ಪೆಟ್ರೌಲ್ ಬಂಕ್ವರೆಗಿನ 70 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸುವ ಮೂಲಕ ಚಾಲನೆ ನಡಿದರು. ಹಿಂದೂ ಹಾಗೂ ಮುಸ್ಲೀಂ ಸಮಾಜದ ಸ್ಮಶಾನಗಳಿಗೆ ಕಾಂಪೌಂಡ ಗೋಡೆ ನರ್ಮಾಣ, ನವನಗರದಲ್ಲಿ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಅಳವಡಿಸುವುದು, ವಿವಿಧ ರಸ್ತೆಗಳಿಗೆ ಬೀದಿ ದೀಪ ಅಳವಡಿಕೆ ಮತ್ತು ರಸ್ತೆ ಸುಧಾರಣೆ, ಡಾಂಬರೀಕರಣ ಮುಂತಾದ 8.86 ಕೋಟಿ ವೆಚ್ಚದ 19 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಭೂಮಿ ಪೂಜೆ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ವಾಲಿ, ಸದಸ್ಯರಾದ ಕೇಶವ ಭಜಂತ್ರಿ, ಜಕಾತಿ ಕಾರ್ಯನರ್ವಾಹಕ ಇಂಜಿನಯರ್ ಡಿ.ಎಲ್.ಮರೋಳ. ಇಂಜೀನಯರ ಎಸ್.ಸಿ.ಆಡಿನ್, ಎ.ಟಿ. ಚೌದರಿ, ಮತ್ತಿತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿ ವೀರಣ್ಣ ಚರಂತಿಮಠ ಅವರು ಸರ್ಕಾರದಿಂದ 50 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಈಗ ಸುಮಾರು 9 ಕೋಟಿ ಕಾಮಗಾರಿ ಕೈಗೊಳ್ಳಲಾಗಿದ್ದು, ಹಂತಹಂತವಾಗಿ ಉಳಿದ 41 ಕೋಟಿ ರೂಪಾಯಿ ಮೊತ್ತದಕಾಮಗಾರಿ ಕೈಗೊಳ್ಳಲಾಗುವುದು. ಎ.ಪಿ.ಎಂ.ಸಿ. ಬಳಿಯಿಂದ ನರ್ಮಿಸುವ ಡಬಲ್ ರಸ್ತೆ ರಾಷ್ಟ್ತ್ರೀಯ ಹೆದ್ದಾರಿ ಗುಣಮಟ್ಟದ್ದಾಗಿರುತ್ತದೆ ಎಂದು ತಿಳಿಸಿದರು.

 

loading...

LEAVE A REPLY

Please enter your comment!
Please enter your name here