ಅಕ್ಷರ ದಾಸೋಹ ಸಿಬ್ಬಂದಿಗೆ ತಿಳುವಳಿಕೆ ಕಾರ್ಯಾಗಾರ

0
15
loading...

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ 2 :  ಸ್ಥಳೀಯ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಟಾನದ ಆಶ್ರಯದಲ್ಲಿ ನಡೆಯುತ್ತಿರುವ ಅಕ್ಷರ ದಾಸೋಹ ಯೋಜನೆಯ ಸಿಬ್ಬಂದಿಗೆ ತಿಳುವಳಿಕೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಗಜಾನನ ಮನ್ನಿಕೇರಿ ಮಾತನಾಡಿ ಬಿಸಿಯೋಟದ ಸಿಬ್ಬಂದಿಗೆ ಹಾಗೂ ಮಕ್ಕಳಿಗೆ ಸಮಯ ಪ್ರಜ್ಞೆ, ಸ್ವಚ್ಛತೆ ಹಾಗೂ ಆರೋಗ್ಯ ಮುಖ್ಯ. ಯೋಜನೆಯಲ್ಲಿ ಸ್ವಲ್ಪ ವ್ಯತ್ಯಾಸ ಅಥವಾ ಲೋಪ ದೋಷಗಳಾದರೆ ಪ್ರತಿಷ್ಟಾನದ ಪ್ರತಿಷ್ಟೆಗೆ ಧಕ್ಕೆ ಉಂಟಾಗುತ್ತದೆ ಈ ನಿಟ್ಟಿನಲ್ಲಿ ಸಿಬ್ಬಂದಿಯವರು ಹೆಚ್ಚಿನ ಮುತುವರ್ಜಿ ವಹಿಸುವದರೊಂದಿಗೆ ಮಾತೃ ಹೃದಯದಿಂದ ಕಾರ್ಯ ನಿರ್ವಹಿಸಲು  ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಅಧ್ಯಕ್ಷತೆ ವಹಿಸಿದ ತಹಶೀಲದಾರ ಎ.ಐ.ಅಕ್ಕಿವಾಟೆ, ಯೋಜನೆಯ ಸಹಾಯಕ ನಿರ್ದೇಶಕ ರಾಜೇಂದ್ರ ತೇರದಾಳ ಮಾತನಾಡಿದರು. ಇದೇ ಸಂದಂರ್ಭದಲ್ಲಿ ಯೊಜನೆಯ ಸಿಬ್ಬಂದಿ ವರ್ಗದವರಿಗೆ ಪ್ರತಿಷ್ಟಾನದ ವತಿಯಿಂದ ಕಾಣಿಕೆ ನೀಡಿ ಗೌರವಿಸಲಾಯಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

loading...

LEAVE A REPLY

Please enter your comment!
Please enter your name here