ಎನ್ಸಿಎಫ್-2005, ಆರ್ಟಿಇ-2009, ಸಿಸಿಇ ತರಬೇತಿ ಕಾರ್ಯಾಗಾರ

0
452
loading...

ಜಿಲ್ಲಾ ಪಂಚಾಯತ ಬಾಗಲಕೋಟ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿಯವರ ಆಶ್ರಯದಲ್ಲಿ ಎನ್ಸಿಎಫ್-2005, ಆರ್ಟಿಇ-2009, ಸಿಸಿಇ ತರಬೇತಿ ಕಾರ್ಯಾಗಾರವು ರಬಕವಿಯ ಶ್ರೀಚನ್ನ ವೀರೇಶ್ವರ ಪ್ರಾಥಮಿಕ ಪ್ರೌಢಶಾಲಾ ಸಭಾಭವನದಲ್ಲಿ ಐದು ದಿನಗಳವರೆಗೆ ಯಶಸ್ವಿಯಾಗಿ ನಡೆಯಿತು. ತರಬೇತಿಯ ಮೊದಲನೇ ದಿನ ನೋಂದಣಿ, ತಂಡಗಳ ರಚನೆ, ಕ್ಷೇತ್ರನಯಮಗಳು, ವೇಳಾಪತ್ರಿಕೆಯನ್ನು ನಡಲಾಯಿತು. ಸನವಾಸ ತರಬೇತಿಯಾದ್ದರಿಂದ ಎಲ್ಲಶಿಕ್ಷಕ ಶಿಕ್ಷಕಿಯರು ಕಡ್ಡಾಯವಾಗಿ ತರಬೇತಿಯಲ್ಲಿ ಐದು ದಿನಗಳವರೆಗೆ ಇರಲೇಬೇಕು. ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕೆಂದು ಆರಂಭದಲ್ಲಿ ತರಬೇತಿ ನೊಡಲ್ ಅಧಿಕಾರಿಗಳು, ಕ್ಷೇತ್ರಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆರ್.ಎಮ್. ಸಂಪಗಾಂವಿ ಹಾಗೂ ಸಂಪನ್ಮೂಲವ್ಯಕ್ತಿಗಳು ಸೂಚನೆ ನೀಡಿದರು. ಪ್ರತಿದಿನ ಬೆಳಿಗ್ಗೆ ಉತ್ತಮ ಉಪಹಾರ, ಮಧ್ಯಾನ್ಹ ಮತ್ತು ರಾತ್ರಿ ರುಚಿಕಟ್ಟಾದ ಊಟ, ಬೆಳಿಗ್ಗೆ, ಸಂಜೆ ಚಹಾ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ರಾಷ್ಟ್ತ್ರೀಯ ಪಠ್ಯಕ್ರಮ ಚೌಕಟ್ಟು.

ಪಾಸ್ತಾವಿಕ ಅಂಶಗಳು: 1)ಪಠ್ಯಕ್ರಮ ಕರಡನ್ನು ರಾಜ್ಯ ಮತ್ತು ಜಿಲ್ಲೆಗಳ ಮಟ್ಟದಲ್ಲಿ ಸುಮಾರು 30 ಕಾರ್ಯಾಗಾರಗಳನ್ನು ಕೈಗೊಂಡು ಚರ್ಚಿಸಿ ತನ್ನ ದೃಷ್ಡಿಕೋನಗಳನ್ನು ಸಲ್ಲಿಸಿದೆ. 2) ರಾಷ್ಡ್ತ್ರೀಯ ಚಳುವಳಿ, ಸಂವಿಧಾನಾತ್ಮಕ ಹೊಣೆಗಾರಿಕೆ, ಮೌಲ್ಯಗಳು, ರಾಷ್ಟ್ತ್ರೀಯ ಭಾವೈಕ್ಯತೆ, ರಾಷ್ಟ್ತ್ರೀಯ ಪರಂಪರೆ, ಸಮಾನತೆ, ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಲಿಂಗ ಸಮಾನತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಅಂತರಗಳ ನಿರ್ಮೂಲನೆ ಈ 10 ಮೂಲ ತತ್ವಗಳನ್ನು ಅಳವಡಿಸಿ ಪಠ್ಯ ಪುಸ್ತಕ ಪರೀಶೀಲನೆ ಮಾಡಲಾಗಿದೆ. 3)  ಕಲಿಕೆಯು ಮಗುವಿಗೆ ಸಂತೋಷ ತರುವ ತತ್ವದ ಮೇಲೆ ಪಠ್ಯ ಪುಸ್ತಕ ಪರಿಷ್ಕ್ತ್ರತಗೊಂಡಿದೆ.  4) ಯುವಜನಾಂಗದ ಬದಲಾವಣೆ ವೇಗಕ್ಕೆ ಪಠ್ಯಕ್ರಮ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಎನ್ ಸಿ ಎಪ್ ಮಾರ್ಗದರ್ಶಿ ತತ್ವಗಳು: 2005

ರಾಷ್ಟ್ತ್ರೀಯ ಪಠ್ಯಕ್ರಮ ಚೌಕಟ್ಟು ಕೆಲವು ತತ್ವಗಳನ್ನು ಒಳಗೊಂಡಿದೆ.

1) ಜ್ಞಾನವು ಶಾಲೆಯ ಹೊರಗಿನ ಜೀವನಕ್ಕೆ ಸಂಬಂಧಿಸಿದೆ. ಉದಾ; ಗಿಳಿಪಾಠ

2) ಬಾಯಿಪಾಠ ಮಾಡುವುದನ್ನು ಕಡಿಮೆ ಮಾಡಿ ಕಲಿಕಾಪ್ರಕ್ರಿಯೆಯನ್ನು ಬೇರೆಯಾಗಿ ಪರಿಗಣಿಸಿದೆ. 3) ಪಠ್ಯಕ್ರಮವು ಪಠ್ಯಪುಸ್ತಕಗಳನ್ನು ಮೀರಿ ನಿಲ್ಲುವಂತೆ ಶ್ರೀಮಂತಗೊಳಿಸುವುದು. 4) ಪರೀಕ್ಷೆಗಳನ್ನು ಹೆಚ್ಚು ನಮ್ಯ (ಕಡಿಮೆ) ಮಾಡುವುದು, ತರಗತಿಯ ಆಗುಹೋಗುಗಳೊಂದಿಗೆ ಸಮ್ಮಿಳಿತಗೊಳಿಸುವುದು. 5) ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆಯಲ್ಲಿ ಪರಸ್ಪರ ಸ್ಪರ್ಧೆ ಹಾಗೂ ಪ್ರೀತಿಗಳುಳ್ಳ ಕಾಳಜಿಗಳನ್ನು ಬೆಳೆಸುವುದು ಉದಾ: ತಾಳ್ಮೆಯಿಂದ ಕೇಳುವುದು, ಇನ್ನೊಬ್ಬರ ವಿಚಾರ ಗೌರವಿಸುವುದು.

ಕೆ ಸಿ ಎಪ್ = ಕರ್ನಾಟಕಾ ಪಠ್ಯಕ್ರಮ ಚೌಕಟ್ಟು

ರಾಜ್ಯ ಪಟ್ಯಕ್ರಮ ಮಾರ್ಗದರ್ಶಿ ತತ್ವಗಳ ಮುಖ್ಯಾಂಶಗಳು

                1) ಕಲಿಯುವವರು ಮತ್ತು ಅವರ ಅಗತ್ಯಗಳು 2) ಮಕ್ಕಳ ಮೌಲ್ಯ ಮಾಪನ 3) ಕಲಿಕೆಯ ಶಿಸ್ತು 4) ಪಠ್ಯಕ್ರಮದ ನಿರ್ವಹಣೆ  5) ಓದ್ಯೌಗಿಕ ಶಿಕ್ಷಣ 6) ಶಿಕ್ಷಣದ ಗುಣಮಟ್ಟ 7) ಶಿಕ್ಷಕ -ಶಿಕ್ಷಣ

 ಪಠ್ಯವಸ್ತು ರಚನೆಗೆ ಮಾರ್ಗದರ್ಶನಗಳು:

1) ನಿರ್ದಿಷ್ಟ ವಿಷಯ ಶಿಕ್ಷಣದ ಗುರಿಗಳು ಮತ್ತು ಮುಖ್ಯ ಉಧ್ದೇಶಗಳನ್ನು ಎದ್ದು ಕಾಣುವಂತೆ, ಮೇಲ್ಪಂಕ್ತಿಯಲ್ಲಿ ವಿಶೇಷ ಕಾಳಜಿ ವಹಿಸಿ ಪಠ್ಯವಸ್ತುವಿನಲ್ಲಿ ಅಳವಡಿಸಬೇಕು. 2) ಕಲಿಕೆಯ ನೀರೀಕ್ಷೆಗಳನ್ನು  ತರಗತಿಯ ಹಂತಕ್ಕೆ ತಕ್ಕ ಹಾಗೆ ನಿರ್ದರಿಸಬೇಕು. ಪಠ್ಯ ವಸ್ತು ಪರಿವಿಡಿಗಳನ್ನು ನಿರ್ದಿಷ್ಟವಾದ ಮತ್ತು ಉಪವಿಭಾಗಗಳಾಗಿ ವಿಂಗಡಿಸಿ ಒದಗಿಸಬೇಕು. 3) ಪ್ರತಿ ಭಾಗ ಉಪಭಾಗವನ್ನು ನಿರ್ವಹಿಸಲು ಎಷ್ಟು ಗಂಟೆಗಳು ಅವಶ್ಯ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಇದರಿಂದ ಆಯಾ ಪಾಠಕ್ಕಿರುವ ನೀರೀಕ್ಷೆಗಳು ಮತ್ತು ಆಳ, ಪಠ್ಯಪುಸ್ತಕ ಲೇಖಕರು ಮತ್ತು ಶಾಲಾ ಶಿಕ್ಷಕರಿಗೆ ಮನವರಿ ಕೆಯಾಗುತ್ತದೆ.

ಎನ್ ಸಿ ಎಪ್ 2005 ಪಠ್ಯಕ್ರಮದ ಸಾಮಾನ್ಯ ಅಂಶಗಳು

1)ಭಾರತೀಯ ಸಂವಿದಾನದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಎತ್ತಹಿಡಿಯ ಲಾಗಿದೆ. 2) ಪಠ್ಯ ಕ್ರಮದ ಹೊರ ಇಳಿಕೆ. 3)ಎಲ್ಲರಿಗೂ ಗುನಮಟ್ಟದ ಶಿಕ್ಷಣ. 4) ಶಾಲೆಯ ಹೊರಗಿನ ವಾತಾವರನಕ್ಕೆ ಮತ್ತು ಬದುಕಿಗೆ ಮಗುವಿನ ಜ್ಞಾನದ ಸಂಯೋಜನೆ ಮಾಡುವುದು. 5) ಕಂಠಪಾಠ ವಿಧಾನದಿಂದ ಕಲಿಕೆಯನ್ನು ಬೇರ್ಪಡಿಸುವದು.

2ನೇ ದಿನ ತರಬೇತಿ ಯಲ್ಲಿ ಸಾಮೂಹಿಕ ಓಂಕಾರಪಠಣ, ಗುರುಸ್ತ್ತ್ರೌತ್ರ, ಶಾಂತಿ ಮಂತ್ರಪಠಿಸಿದ ಬಳಿಕ ಶ್ರೀ ಕೆ.ಸಿ. ಕೋತಂಬರಿಯ ವರಿಂದ ಪ್ರಾರ್ಥನೆ ನಡೆಯಿತು. ಚಿಂತನ, ವರದಿ, ಚಾರ್ಟ್ಸ್ ನಕಲು ಪಡೆಯುವುದು.

ನೋಡಲ್ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಶಿಕ್ಷಕರು, ತರಬೇತಿದಾರರು ಪಾಲ್ಗೊಂಡಿದ್ದರು.

ಆರ್ ಟಿ ಇ ಶಿಕ್ಷಣ ಹಕ್ಕು ಕಾಯ್ದೆ

1) ಆರ್ಟಿಇ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತವೆಂದು ತಿಳಿಯುತ್ತದೆ. 2) ಶಿಕ್ಷಣದ ಹಕ್ಕು ಕಾಯ್ದೆ 2009 ಪ್ರಾಥಮಿಕ ಶಿಕ್ಷಣ ಇತಿಹಾಸದಲ್ಲಿ ಒಂದು ಮಹತ್ವದ ಹೆಜ್ಜೆಯೆಂದು ತಿಳಿಸುತ್ತದೆ. 3) 6ರಿಂದ14 ವಯೋಮಾನದ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ ಕೊಡಬೇಕು. 4)ಮುಖ್ಯಶಿಕ್ಷಕರು/ಸಹಶಿಕ್ಷಕರು/ಶಾಲೆ/ಸಮುದಾಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪಣತೊಡಬೇಕು.

5) ಸರ್ವರೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸಬೇಕು.

ಮಾನವ ಸಂಪನ್ಮೂಲ ಅಧ್ಯಯನ ಒಂದು ರಾಷ್ಟ್ತ್ರದ ದೃಷ್ಟಿಯಿಂದ ಮಾನವ ಸಂಪನ್ಮೂಲಗಳೆಂದರೆ ಕಾರ್ಯನಿರತ ಜನರಲ್ಲಿ ಕಂಡು ಬರುವ ಜ್ಞಾನ, ನೈಪುಣ್ಯತೆ, ಕಾರ್ಯಸಾಮರ್ಥ್ಯ, ಮೇಧಾಶಕ್ತಿ, ಪ್ರವೃತ್ತಿಗಳ ಸಮೂಹವಾಗಿದೆ.

ದೇಶದ ಅಭಿವೃದ್ದಿ ಹೇಗೆ?

ಒಂದು ಸುಸಂಘಟಿತ ಮಾನವ ಸಂಪನ್ಮೂಲ ದೃಷ್ಟಿ ಸಮಾಜದಲ್ಲಿ ವ್ಯಕ್ತಿಗಳ ಜ್ಞಾನ, ಕಾಯ್ದಕ್ಷತೆ, ವೃತ್ತಿನೈಪುಣ್ಯತೆ, ಸಮಾಜಿಕ ಹೊಂದಾಣಿಕೆ ಮುಂತಾದ ಸಕಾರಾತ್ಮಕ ಬಲವನ್ನು ಮೂಡಿಸಬಲ್ಲದ್ದರಾಗಿದ್ದರಿಂದ ಮೂಲಭೂತವಾಗಿ ಶಿಕ್ಷಣದಿಂದ ಮಾತ್ರ ಇಂತಹ ವ್ಯಕ್ತಿತ್ವದ ನಿರ್ಮಾಣ ಸಾಧ್ಯ.

ಆರ್ಟಿಇ-2009 ಪಾರಿಭಾಷಿಕ ಪದಗಳು

1) ಸಮೂಚಿತ ಸರಕಾರ (ಕೇಂದ್ರ ಅಥವಾ ರಾಜ್ಯ ಸರಕಾರ) 2) ಮಗು : 6ರಿಂದ 14ವರ್ಷದೊಳಗಿನ ಮಕ್ಕಳು 3) ಶಾಲೆ : 1 ರಿಂದ 8ನೇ ತರಗತಿ ನಡೆಸುವ ಸ್ಥಳೀಯ ಸರಕಾರದಿಂದ ಮಾನ್ಯತೆ ಪಡೆದ ಕೇಂದ್ರ 4) ಸ್ಥಳೀಯ ಸರಕಾರ : ಜಿಲ್ಲಾ ಪಂಚಾಯತ/ತಾ.ಪಂ/ಗ್ರಾ.ಪಂ.ಪುರಸಭೆ/ಪ.ಪಂ.5) ಕ್ಯಾಪಿಟೇಷನ್ ಶುಲ್ಕ : ಶಾಲೆಯು ಅಧಿಸೂಚಿಸಿದ ಶುಲ್ಕವಲ್ಲದ ಯಾವುದೇ ರೀತಿಯ ದೇಣಿಗೆ ಅಥವಾ ಕಾಣಿಕೆ 6)ಪ್ರಾಥಮಿಕ ಶಿಕ್ಷಣ, ದುರ್ಬಲ ವರ್ಗಕ್ಕೆ ಸೇರಿದ ಮಗು, ಅಧಿಸೂಚನೆ, ತಂದೆ-ತಾಯಿ, ಪೋಷಕರು, ಶೋಧನಾ ಕಾರ್ಯ ವಿಧಾನ, ನಿರ್ಧಿಷ್ಟ ಪ್ರ ವರ್ಗದ ಶಾಲೆಗಳು, ಪರಂತು ಸರಕಾರಿ ಶಾಲೆಗಳು, ಅನುದಾನಿತ ಶಾಲೆ, ಖಾಸಗಿ ಅನುದಾನ ರಹಿತ ಶಾಲೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಅನುಕೂಲರಸ್ಥರಲ್ಲದ ಗುಂಪಿಗೆ ಸೇರಿದ ಮಗು, ಶಾಲೆಯ ವ್ಯಸ್ಥಾಪನಾ ಸಮಿತಿ

ಆರ್ಟಿಇ ಪ್ರಕಾರ ಶಿಕ್ಷಕರ ಕರ್ತವ್ಯಗಳು :

1)ಸೇವೆಯಲ್ಲಿ ಕ್ರಮಬದ್ಧತೆ ಮತ್ತು ಸಮಯಪಾಲನೆ 2) ನಿಗದಿಪಡಿಸಿದ ಅವಧಿಯಲ್ಲಿ ಪಠ್ಯ ಬೋಧನೆ 3) ಮಗುವಿನ ಅಗತ್ಯ ಅರಿತು ಬೋಧನೆ 4) ತಂದೆ-ತಾಯಿಯೊಂದಿಗೆ ಸುಮಧುರ ವರ್ತನೆ 5)                ಮಗುವಿನ ನಿಂದನೆ ಮಾಡದಿರುವದು. 3ನೇ ದಿನ ಶಿಕ್ಷಕರು ಗುಣಮಟ್ಟದ ಶಿಕ್ಷಣ ಕೊಡಬೇಕು. ಪ್ರತಿ ಹಂತದ ಶಿಕ್ಷಕ ಮಗುವಿನ ಶಿಕ್ಷಣ ದೃಡಿಢಪಡಿಸಬೇಕು.

ವೃತ್ತಪರ ಶಿಕ್ಷಕರಾಗಲು ಮನಸ್ಸು ಮಾಡಬೇಕು. ರಾಷ್ಟ್ತ್ರೀಯ ಪಠ್ಯಕ್ರಮ ಚೌಕಟ್ಟು-2005 ಕಲಿಸುವ ವಿಧಾನ ಹೇಳುತ್ತದೆ. ಎನ್ಸಿಎಫ್-2005 ಶಿಕ್ಷಕರಿಗೆ ಅತ್ಯುಪಯುಕ್ತ ಮಾರ್ಗದರ್ಶಿಯಾಗಿದೆ. ಇದನ್ನು ಓದಿದರೆ ಹೊಸ ವಿಚಾರಗಳು ಬರುತ್ತವೆಂದು ಎರೆಡು ಗಂಟೆಗಳ ಕಾಲ ನಿರರ್ಗಳವಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ.ಸಿ. ಗಂಗಾಧರ ಪಾಠವನ್ನು ನೀಡಿದರು. 4ನೇ ದಿನ ನಿಂದನೆ ಮತ್ತು ದಂಡನೆ ಕುರಿತು ಉಪನ್ಯಾಸ ನಡೆಯಿತು. ಲೈಂಗಿಕ ನಂದನೆ ಸೇರಿದಂತೆ ಒಂದಿಲ್ಲೊಂದು ನಿಂದನೆಗೆ ಮಗು ಒಳಗಾಗಿರುತ್ತದೆ. ಮಾನಸಿಕ ಕಿರುಕುಳದಿಂದ ಮಕ್ಕಳು ನೊಂದುಕೊಳ್ಳುತ್ತಾರೆ.  ದಂಡನೆಗಳ ಕುರಿತಾಗಿ ವಿವರಿಸಲಾಯಿತು.

1) ಮಗುವಿನ ನಿಂದನೆ ಪ್ರಕರಣಕ್ಕೆ ಶಿಕ್ಷಕರಿಗೆ ಸೇವಾನಿಯಮದ ಮೇರೆಗೆ ಶಿಸ್ತು ಕ್ರಮ. 2)ಟಿ.ಸಿ. ವಿಳಂಬ ಮಾಡಿದರೆ ನಿಯಮದ ಮ,ಏರೆಗೆ ಶಿಸ್ತುಕ್ರಮ.,

ಸಿಸಿಇ ನಿರಂತರ ವ್ಯಾಪಕ ಮೌಲ್ಯಮಾಪನ :

ಮೌಲ್ಯವೆಂದರೆ ಬೆಲೆ, ಮಾಪನ ಎಂದರೆ ಅಳತೆ. ಮಗುವಿನ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಮೌಲ್ಯಮಾಪನವು ನಿರಂತರ ಹಾಗೂ ವ್ಯಾಪಕವಾಗಿ ಅಳೆಯುವ ಸಾಧನೆಯೇ ಶೈಕ್ಷಣಿಕ ಮೌಲ್ಯಮಾಪನ. 5ನೇ ದಿನ ತರಬೇತಿಯಲ್ಲಿ ಸಾಮೂಹಿಕ ಓಂಕಾರಪಠಣ, ಗುರುಸ್ತ್ತ್ರೌತ್ರ, ಶಾಂತಿಮಂತ್ರಪಠಿಸಿದ ಬಳಿಕ ಶ್ರೀ ಕೆ.ಸಿ. ಕೋತಂಬರಿಯವರಿಂದ ಪ್ರಾರ್ಥನೆ ನಡೆಯಿತು. ಚಿಂತನ, ವರದಿ, ಚಾರ್ಟ್ಸ್ನಕಲು ನಂತರ ಭಾರತದ ಪ್ರಥಮ ಪ್ರಧಾನಮಂತ್ರಿಗಳಾದ ಪಂಡಿತ ಜವಾಹರಲಾಲ ನೆಹರು, ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.

ಹಿರಿಯಶಿಕ್ಷಕರಾದ ಶ್ರೀ ಎಚ್.ಡಿ. ಬಾಲಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮ.ಕೃ. ಮೇಗಾಡಿ, ಶ್ರೀ ಆರ್.ಎಸ್. ರೋಣದ, ಶ್ರೀಮತಿ ಎಲ್.ಎಸ್. ಅರುಣಾಕ್ಷಿ ಮಾತನಾಡಿದರು.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಗಳು: 1)ರೂಪನಾತ್ಮಕ ಮೌಲ್ಯಮಾಪನ 2) ಸಂಕಲನಾತ್ಮಕ ಮೌಲ್ಯಮಾಪನ.

ಈ ಮೌಲ್ಯಮಾಪನಗಳ ಉದ್ದೇಶಗಳ ಕುರಿತು ಚರ್ಚಿಸಲಾಯಿತು. ಸಾಧನ ಹಾಗೂ ತಂತ್ರಗಳು : ಮಕ್ಕಳ ಪ್ರಗತಿ ತಿಳಿಯಲು ಹಮ್ಮಿಕೊಳ್ಳಬಹುದಾದ ಮುಖ್ಯ ಮೌಲ್ಯಮಾಪನಗಳು 1) ಇಡೀ ಗುಂಪಿಗೆ ನಡೆಸಬಹುದಾದ ಚಟುವಟಿಕೆಗಳು 2) ಗಮನಿಸುವದು 3)ಸಂದರ್ಶನ 4) ದಾಖಲಾತಿ ಪರೀಶೀಲನೆ ಈ ಐದು ದಿನಗಳ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಯೋಗಾಸನ, ವ್ಯಾಯಾಮ ನಡೆಯುತ್ತಿತ್ತು. ಯೋಗದ ಕುರಿತು ಶ್ರೀ ಬಿ.ಬಿ. ಕುದರಿಮನಿ, ಶ್ರೀಆರ್.ಎಮ್.ಸಂಪಗಾಂವಿ, ಶ್ರೀ ಸಿ.ಬಿ. ತೆಗ್ಗಿ ಪ್ರಮುಖಾಂಶಗಳನ್ನು ವಿವರಿಸಿ ಬರೆಸುತ್ತಿದ್ದರು.

ಸಂಜೆ ಶಿಕ್ಷಕ/ಕಿಯರಿಂದ ಮನರಂಜನಾ ಕಾರ್ಯಕ್ರಮಗಳು ನಗೆಗಡಲ್ಲಿ ತೇಲಿಸುತ್ತಿದ್ದವು. ಭಾವಗೀತೆ, ಭಕ್ತಿಗೀತೆ, ಜನಪದಗೀತೆಗಳು, ಚುಟುಕುಗಳು, ಹಾಸ್ಯಚಟಾಕಿಗಳು ಕೇಳುಗರ ಮನತಣಿಸುತ್ತಿದ್ದವು. ಒಟ್ಟಾರೆ, ಐದು ದಿನಗಳ ತರಬೇತಿ ಬೇಸರವಾಗದಂತೆ, ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಯಶಸ್ವಿಯಾಗಿ ನಡೆಯಿತು.

 

 

loading...

LEAVE A REPLY

Please enter your comment!
Please enter your name here