ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ

0
9
loading...

ಗೋಕಾಕ ಡಿ, 26 ;- ತಾಲೂಕಿನ ಕಮಲದಿನ್ನಿ, ವಡೇರಹಟ್ಟಿ, ಶಿವಾಪೂರ (ಹ), ಗುಜನಟ್ಟಿ ಹಾಗೂ ಧರ್ಮಟ್ಟಿ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಕರೆಯಲಾಗಿದೆ.  ಸಂಪೂರ್ಣ ವಿವರವುಳ್ಳ ಮಾಹಿತಿಯನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಗೋಕಾಕ, ಆಯಾ ಗ್ರಾಮಗಳ ಗ್ರಾಮ ಪಂಚಾಯತ್ ಕಚೇರಿ, ಪ್ರಾಥಮಿಕ ಶಾಲಾ ನೋಟಿಸ್ ಬೋರ್ಡಗಳ ಮೇಲೆ ಅಂಟಿಸಲಾಗುವುದು.  ಆಸಕ್ತಿವುಳ್ಳ 18 ರಿಂದ 44 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಸ್ವ-ಹಸ್ತಾಕ್ಷರದಲ್ಲಿ ಬರೆದ ಅರ್ಜಿಯನ್ನು ಭರ್ತಿ ಮಾಡಿ ಜನೇವರಿ 12 ರೊಳಗಾಗಿ ಅವಶ್ಯ ದಾಖಲೆಗಳೊಂದಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಗೋಕಾಕ ಇವರಲ್ಲಿ ಸಲ್ಲಿಸಲು ತಿಳಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯ ಲಕ್ಷ್ಮೀ ಗುಡಿ ರಸ್ತೆ ಗೋಕಾಕ, ಕಚೇರಿ ಸಮಯದಲ್ಲಿ ಇಲ್ಲಿಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.

 

loading...

LEAVE A REPLY

Please enter your comment!
Please enter your name here