ಕೃಷಿ ಬಂಡವಾಳ ಸಮಾವೇಶಕ್ಕೆ ಜೆಡಿಎಸ್ ವಿರೋಧ

0
12
loading...

ಬೆಳಗಾವಿ 2- ಶನಿವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಬಂಡವಾಳ ಸಮಾವೇಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಈ ಕುರಿತು ಮನವಿ ಸಲ್ಲಿಸಿತು.

ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಮಟಗಾರ, ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನ್ನವರ, ಗ್ರಾಮೀಣ ಅಧ್ಯಕ್ಷ ಶಿವಪುತ್ರಪ್ಪಾ ಕರಡಿಗುದ್ದಿ, ನಾಗಯ್ಯಾ ಪೂಜೇರಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರಕಾರ ನಡೆಸುತ್ತಿರುವ ಕೃಷಿ ಸಮಾವೇಶದಿಂದ ರಾಜ್ಯ ಕೃಷಿ ಕ್ಷೇತ್ರಕ್ಕೆ 51.727 ಕೋಟಿ ರೂ.ಬಂಡವಾಳ ಹೂಡಿಕೆಯಾಗಿ ಲಕ್ಷಾಂತರ ಜನರಿಗೆ ಉದ್ಯೌಗವಕಾಶ ಲಭ್ಯವಾಗಲಿದೆ ಎಂದು ಸುಳ್ಳು ಭರವಸೆ ನೀಡಲಾಗಿದೆ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುವ ಅಲ್ಲಿ ಕೈಗಾರಿಕೆ ಸ್ಥಾಪಿಸುವ ಕುತಂತ್ರ ಸರಕಾರದ್ದಾಗಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಇದೊಂದು ರಿಯಲ್ ಎಸ್ಟೇಟ್ ದಂಧೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಜಾಗತಿಕ ಕೃಷಿ, ವಾಣಿಜ್ಯ ಹಾಗೂ ಆಹಾರ ಸಂಸ್ಕರಣೆ ಶೃಂಗ ಸಭೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಮಾವೇಶ ರಾಜ್ಯದ ರೈತರನ್ನು ವಂಚಿಸಿ ಅವರನ್ನು ಬೀದಿಗೆ ತರುವ ಸಭೆಯಾಗಿದೆ ಎಂದು ಆರೋಪಿಸಲಾಯಿತಲ್ಲದೆ ಈ ಸಮಾವೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಲಾಯಿತು.

ಕೃಷಿ ಸಚಿವ ಉಮೇಶ ಕತ್ತಿಯವರುಪ್ರತಿ ಟನ್ ಕಬ್ಬಿಗೆ 2 ಸಾವಿರ ರೂ.ಹಣ ಕೊಡುವುದಾಗಿ ಘೋಷಣೆ ಮಾಡಬೇಕು. ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಕೃಷಿ ಸಲಕರಣೆಗಳ ಹೆಸರಿನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ. ಇದರ ತನಿಖೆ ಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮದನ ಕುಲಕರ್ಣಿ, ಸುಧೀರ ಚೌಗುಲೆ, ಶಿವಾ ನಂದ ರಾಚನ್ನವರ, ರಾಮಣ್ಣಾ ಅಂಕಲಗಿ, ಎಸ್.ಎನ್.ಪಾಟೀಲ, ಮುಸ್ತಾಕ ಮಿರ್ಜಾ, ಆಸೀಪ ಬುರಾನವಾಲೆ, ಸುಮನ ಸೊನವನೆ, ಪ್ರೇಮಾ ಭಂಡಾರಿ, ಪ್ರೇಮಾ ಕುಂದರಗಿ, ಅನ್ನಪೂರ್ಣಾ ನಿರ್ವಾಣಿ, ಮಂಜುಳಾ ದೇವಿ ಮೊದಲಾದವರು ಪಾಲ್ಗೊಂಡಿದ್ದರು…

loading...

LEAVE A REPLY

Please enter your comment!
Please enter your name here