ಗುಡಿಸಲಿಗೆ ಬೆಂಕಿ ಅಪಾರ ಹಾನಿ

0
25
loading...

ಘಟಪ್ರಭಾ: ದಿ.26ರಂದು ರಾತ್ರಿ ವೇಳೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಸುಟ್ಟು ಅಪಾರ ಹಾನಿಯುಂಟಾದ  ಘಟನೆ ಇಲ್ಲಿಗೆ ಸಮೀಪದ ಪಾಮಲದಿನ್ನಿ,ಜಾಗನೂರ ಗ್ರಾಮದ ಹೊರವಲದ ಆರೇರ ತೋಟದ ಹತ್ತಿರ ಜರುಗಿದೆ.

ಗ್ರಾಮದ ನಿವಾಸಿ ರೇಣುಕಾ ಕುಸ್ತಿಗಾರ ಎಂಬುವರೆಗೆ ಸೇರಿದ  ಗುಡಿಸಲು ಎಂದು ಗೋತ್ತಾಗಿದೆ. ನಿನ್ನೆ ರಾತ್ರಿ ಮಲಗಿದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಇಬ್ಬರು ಮಕ್ಕಳು ಎಚ್ಚರಗೊಂಡು ಹೊರಬಂದು ಅಕ್ಕ ಪಕ್ಕದ ಜನರು ಸೇರಿಸಿ ಬೆಂಕಿ ನಿಂದಿಸಲು ಹರಸಾಹಸ ಪಟ್ಟಿದ್ದಾರೆ. ಗುಡಿಸಲಿನಲ್ಲಿದ್ದ ಮನೆ ಬಳಕೆ ವಸ್ತುಗಳು,ಇನ್ನಿತರ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿವೆ.ಯಾವುದೇ ಪ್ರಾಣ ಹಾನಿಯಾಗಿಲ್ಲ ಅಲ್ಲದೇ  ಇದರಿಂದ ಮಾಲಿಕರಿಗೆ ಲಕ್ಷಾಂತರ ರೂ. ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ…

loading...

LEAVE A REPLY

Please enter your comment!
Please enter your name here