ನಾಗರಿಕರ ಪರ ನಿಲುವು

0
8
loading...

ರಾಜ್ಯದ ಜನರಿಗೆ ಕಾಲ ಮಿತಿಯಲ್ಲಿ ವಿವಿಧ ಸೇವೆಗಳನ್ನು ಒದಗಿಸುವ ಕನಾರ್ಟಕ ನಾಗರಿಕರಿಗೆ ಸೇವೆಗಳ ಖಾತ್ರಿ ಮಸೂದೆ -2011 ನ್ನು ರಾಜ್ಯ ವಿಧಾನ ಸಭೆಯಲ್ಲಿ ಪಕ್ಷಾತೀತವಾಗಿ ಸರ್ವಾನುಮತದಿಂದ ಅಂಗೀಕರಿಸಿದ ವಿಷಯ ರಾಜ್ಯ ಸರಕಾರದ ನಾಗರಿಕರ ಪರ ನಿಲುವಾಗಿದೆ.

ಇದೊಂದು ನಾಗರಿಕರ ಆಗಬೇಕಾದ ಕೆಲಸ ಕಾರ್ಯಗಳಿಗೆ ಕಾಲಮಿತಿ ನಿಗದಿಪಡಿಸಿದ  ಮಸೂದೆಯಾಗಿದೆ. ಇಲ್ಲಿಯವರೆಗೆ ನಾಗರಿಕ ಒಂದು ಜನನ ಪತ್ರ ಇಲ್ಲವೇ ಮರಣ ಪತ್ರ ಪಡೆಯಬೇಕಾದರೆ ತಿಂಗಳ ಕಾಲ ಕಚೇರಿಗೆ ಅಲೆದು ಸುಸ್ತಾಗಬೇಕಿತ್ತು. ಇದು ಒಂದು ಚಿಕ್ಕ ವಿಷಯ ಇನ್ನು ಲೈಸನ್ಸ, ನೋಂದಣಿ ಇತ್ಯಾದಿ ಕೆಲಸಗಳಿಗೆ ತಿಂಗಳಾನುಗಟ್ಟಲೆ ಅಲೆದಾಡಿ ನಿಟ್ಟಿಸಿರು ಬಿಡಬೇಕಾಗಿತ್ತು. ಅಲ್ಲದೆ ಒಟ್ಟಾರೆ ಇಲಾಖೆಗಳ ಸಾರ್ವಜನಿಕ ಸೇವೆಗೆ ಸ್ಪಂದಿಸದ ಸರಕಾರಿ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳ ಆಲಸ್ಯತನದ ಮತ್ತು ಭ್ರಷ್ಟಾಚಾರದ ವ್ಯವಸ್ಥೆಗೆ ಈ ಮಸೂದೆ ಹೊಸ ಕಾಯಕಲ್ಪ ನೀಡಿದೆ.

ಏಳು ದಿನದಲ್ಲಿ ಜನನ, ಮರಣ, ಪ್ರಮಾಣಪತ್ರ ನೀಡಬೇಕು. ಏಳು ದಿನದಲ್ಲಿ ನೀರು ಸರಬರಾಜು, ಒಳಚರಂಡಿ ಸಂಪರ್ಕ ಹಾಗೂ ವಾಹನ ಕಲಿಕಾ ಲೈಸೆನ್ಸ, ಪಡಿತರ ಚೀಟಿ ನೀಡಬೇಕು. ಮೂವತ್ತು ದಿನಗಳಲ್ಲಿ ಚಾಲನಾ ಲೈಸೆನ್ಸ ಕೊಡಬೇಕು ಮುಂತಾದ ನಾಗರಿಕ ಸೇವೆಗಳ ಕಟ್ಟು ಪಾಡುಗಳು ಅಂಗೀಕರಿಸಿದ ಮಸೂದೆಯಲ್ಲಿವೆ.  ಹನ್ನೊಂದು ಇಲಾಖೆಗಳ 152 ಸೇವೆಗಳನ್ನು ಕಾಲಮಿತಿಯಲ್ಲಿ ಜನರಿಗೆ ಒದಗಿಸುವ ಕುರಿತು ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಡಳಿತ ಯಂತ್ರವನ್ನು ಚುರುಕುಗೊಳಿಸಿದ  ಮಸೂದೆ ಮಂಡಿಸಿರುವ  ಕಾನೂನು ಸಚಿವ ಸುರೇಶ ಕುಮಾರ ಅವರನ್ನು ರಾಜ್ಯದ ಜನ ಅಭಿನಂದಿಸಲೇಬೇಕು.

ನಿರ್ಧಿಷ್ಟ ಅವಧಿಯಲ್ಲಿ ಸೇವೆ ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಇವರಿಗೆ ದಂಡ ವಿಧಿಸುವ ಅಧಕಾರವನ್ನು ಮಸೂದೆಯಲ್ಲಿ ಅಳವಡಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡದ ಅಧಿಕಾರಿಗಳಿಗೆ ಕನಿಷ್ಠ 20 ರೂ. ಗಳಿಂದ ಆರಂಭಗೊಳ್ಳುವ ದಂಡ 400ರೂ.ಗಳ ವರೆಗೆ ದಂಡ ನಿಗದಿ ಪಡಿಸಲಾಗಿದೆ. ಅವರ ಸೇವಾ ದಾಖಲೆಗಳಲ್ಲಿ ಈ ಕುರಿತು  ಉಲ್ಲೇಖಿಸಲಾಗುತ್ತದೆ.  ಜೊತೆಗೆ ಉತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ಪ್ರೌತ್ಸಾಹಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಾನೂನು ಸಚಿವ ಸುರೇಶ ಕುಮಾರ ಈ ಮಸೂದೆ ಕುರಿತು ಉತ್ತಮ ಅಧ್ಯಯನ ನಡೆಸಿದ್ದು ಕಂಡು ಬರುತ್ತದೆ. ಮಧ್ಯಪ್ರದೇಶ, ಬಿಹಾರ, ಪಂಜಾಬ ಸೇರಿದಂತೆ ಕೆಲ ರಾಜ್ಯಗಳ ಮಸೂದೆಯನ್ನು ಅಧ್ಯಯನ ಮಾಡಿ ಇದಕ್ಕೊಂದು ಹೊಸ ಕಾಯಕಲ್ಪ ನೀಡಲಾಗಿದೆ.  ಈಗ ಸಾರ್ವಜನಿಕರು ಈ ಮಸೂದೆಯ ಲಾಭ ಪಡೆಯಬೇಕು. ಅಧಿಕಾರಿಗಳು ಆ ರೀತಿ  ವರ್ತಿಸಿ ನಿಗದಿತ ಅವಧಿಯಲ್ಲಿ ನಾಗರಿಕ ಸೇವೆ  ನೀಡಲು ಮುಂದಾಗಬೇಕು.

 

 

loading...

LEAVE A REPLY

Please enter your comment!
Please enter your name here