ನಿನೋಮ್ಮೆ ಬಂದು ನೋಡ ಹುಬ್ಬಳ್ಳಿ-ಧಾರವಾಡ

0
26
loading...

ಹುಬ್ಬಳ್ಳಿ ಡಿ. 23.   ಶಿ ನಿನೋಮ್ಮೆ ಬಂದು ನೋಡ ನಮ್ಮ ಹುಬ್ಬಳ್ಳಿ-ಧಾರವಾಡವ ” ಎಂಬ ಸುಂದರ ಗೀತೆಯನ್ನು ಸ್ವತಃ ತಾವೇ ಹಾಡಿ ಕೋಲನ್ನು ಹಾಕುತ್ತಾ  ಪುಟಾಣಿ ಮಕ್ಕಳು  ನೀಡಿದ ಕೋಲಾಟ  ನೃತ್ಯ ಪ್ರೇಕ್ಷಕರ ಮನ ಗೆದ್ದಿತು.   ಧಾರವಾಡ ಉತ್ಸವದ ಅಂಗವಾಗಿ ನಡೆದ ಇಂದಿರಾ ಗಾಜಿನ ಮನೆಯಲ್ಲಿ  ಇಂದು ನಡೆದ ಮಕ್ಕಳ ಸಾಂಸ್ಕ್ಕತಿಕ ಕಾರ್ಯಕ್ರಮ ನೆರೆದ  ಶೋತೃಗಳು ಮನ ತುಂಬಿತು. ಯಾವುದೇ ಸಿಡಿ,ಕ್ಯಾಸಟ್ನ್ನು ಉಪಯೋಗಿಸದೇ ,ಸಾಯಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ನಡೆಸಿಕೊಟ್ಟ   ಕೋಲಾಟ ನೃತ್ಯವನ್ನು ಪ್ರದರ್ಶಿಸಿದರು.

ಕರಾವಳಿಯ ಕಂಪು ನಮ್ಮ ಹುಬ್ಬಳ್ಳಿವರೆಗೂ ಹಬ್ಬಿತ್ತು. ಎಂಬುದು ಇನ್ನೊಂದು ವಿಶೇಷ. ದಕ್ಷಿಣ ಕನ್ನಡದ ಕರಾವಳಿ ಕೇಸರಿ ಅಬ್ಬಕ್ಕನ ವೀರ ಸಾಹಸದ ಕಥೆಯ ಕಿರುನಾಟಕ ಧಾರವಾಡದ ಬಿ.ಜೆ.ಎಸ್.ಪ್ರೌಢಶಾಲೆಯ ಮಕ್ಕಳಿಂದ ಪ್ರದರ್ಶನಗೊಂಡಿತು. ಬ್ರಿಟಿಷರ ವಿರುದ್ಧ ಹೋರಾಡಿದ ಅಬ್ಬಕ್ಕನ ನಾಟಕವನ್ನು ಶಿಕ್ಷಕಿ ಜಯಂತಿ.ಜೆ. ಅವರು ನಿರ್ದೇಶಿಸಿದ್ದಾರೆ. ಅಬ್ಬಕ್ಕನ ಪಾತ್ರಕ್ಕ್ನೆ ಚೈತ್ರಾ ಕಾಮಣ್ಣನವರು ಜೀವ ತುಂಬಿದರು.   ಶ್ರಾವಣ, ಕಾರ್ತಿಕ ಮಾಸದಲ್ಲಿ ವೀರಭದ್ರನ  ಮುಂದೆ ನೃತ್ಯ ಮಾಡುವ ಜಾನಪದ ವೀರಗಾಸೆಯನ್ನು ಹುಬ್ಬಳ್ಲಿ ಸಿ.ಸಿ.ಪಾಟೀಲ್ ಮತ್ತು ತಂಡ, ರುದ್ರ ರಮಣೀಯವಾಗಿ ಪ್ರದರ್ಶಿಸಿದರು, ವೀರಭದ್ರನ ಜನನ, ಶಿವ ದ್ರಾಕ್ಷಾಯಣಿಯ ವಿವಾಹ, ಮುತೈದೆತನದ ಐದು ಮುತ್ತುಗಳ ಅರ್ಥಗಳನ್ನು ಸೊಗಸಾಗಿ ಹಾಡಿದರು. ಕೆಲಗೇರಿಯ ಚನ್ನಪ್ಪಾ ಮಾಳಗಿ ಅವರು ಜಾನಪದ ಭಜನೆ ಪ್ರಸ್ತುತ ಪಡಿಸಿದರು.  ಮಯೂರ ನೃತ್ಯ ಶಾಲೆಯ ಮತ್ತು ಸುಜಾತಾ ನೃತ್ಯಾಶಾಲೆಯ ಗುರು-ಶಿಷ್ಯರು ಶಂಭೋಶಂಕರ ಎಂಬ ಶಂಕರನ್ನು ಆರಾಧಿಸಿ ಪ್ರದರ್ಶಿಸಿದ ಭರತನಾಟ್ಯ ವೀಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿತು.

ಇಂದಿರಾ ಗಾಜಿನಮನೆಯಲ್ಲಿ ನಡೆದ  ಸಾಂಸ್ಕ್ಕತಿಕ ಕಾರ್ಯಕ್ರಮ  ತುಂಬಾ ಅರ್ಥಪೂರ್ಣವಾಗಿತ್ತು. ಚಳಿ ಮಧ್ಯವು ಪ್ರೇಕ್ಷಕರು ಮಕ್ಕಳ ಕಾರ್ಯಕ್ರಮದ ಸವಿ ಸವಿದರು.

ಸಿದ್ಧರೂಢ ಮಠದಲ್ಲಿ ಸಹ ಪ್ರಥಮ ದಿನದ ಸಾಂಸ್ಕ್ಕತಿ ಕಾರ್ಯಕ್ರಮಗಳು ಜನಮನ ರಂಜಿಸಿದವು.  ಶ್ರೀಮತಿ ರೇಣುಕಾ ನಾಕೋಡ ಅವರ ಸುಗಮ ಸಂಗೀತ  ಸಂಗೀತದ ರಸ ಸ್ವಾದ ಉಣಬಡಿಸಿದರೆ ಫೈಯಾಜ್ ಖಾಣ್ ಅವರ ಸಾರಂಗಿ ವಾದದನದ ನಾದ ತರಂಗಗಳು ಶೋತೃಗಳ ಮನ ತುಂಬಿತು. ಧಾರವಾಡ ರಂಗ ಪರಿಸರ ತಂಡದಿಂದ  ಸೊನ್ನಲಗಿ ಸಿದ್ದರಾಮ  ನಾಟಕ ಪ್ರದರ್ಶನಗೊಂಡಿತು.

 

loading...

LEAVE A REPLY

Please enter your comment!
Please enter your name here