ಪಾನ್ಶಾಪ್ನಲ್ಲಿ ಕಳ್ಳತನ

0
32
loading...

ಗೋಕಾಕ ;- ಕಳೆದ ಐದಾರು ತಿಂಗಳ ಹಿಂದೆ ನಗರದ ಕುರುಬರ ಫೂಲ ಹತ್ತಿರವಿರುವ ಪಾನ್ ಶಾಪ್ ಕಳುವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಸೋಮವಾರದಂದು ಗೋಕಾಕ ಶಹರ ಠಾಣೆ ಪೊಲೀಸ್ರು ಬಂಧಿಸಿದ್ದಾರೆ.

ನಗರದ ಕುರುಬರ ಫೂಲ ಹತ್ತಿರವಿರುವ ಪಾನ್ ಶಾಪ್ ಕಳುವಾದ ಹಿನ್ನೆಲೆಯಲ್ಲಿ ಶಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪರಶುರಾಮ ಕಾಂಬಳೆ ಹಾಗೂ ಅಪ್ಪಾಸಾಹೇಬ ಜಮಾದಾರ ಎಂಬುವರೇ ಕಳುವು ಮಾಡಿದ್ದನ್ನು ಖಚಿತಪಡಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಪಾನ್ ಶಾಪ್ನಲ್ಲಿರುವ ಸುಮಾರು 20 ಸಾವಿರ ರೂ, ಬೆಲೆ ಬಾಳುವ ಸಗರೇಟ್, ಮಾಣಿಕಚಂದ್, ಸ್ಟಾರ್ ಗುಟಕಾ, ಹಾಗೂ ಇನ್ನೀತರ ಪದಾರ್ಥಗಳನ್ನು ಕಳುವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬಗ್ಗೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

loading...

LEAVE A REPLY

Please enter your comment!
Please enter your name here