ಬಸ್ ನಿಲ್ದಾಣ ಅವ್ಯವಸ್ಥೆ ಆಗರ : ಪ್ರಯಾಣಿಕರ ಗೋಳು

0
32
loading...

ಚನ್ನಮ್ಮ ಕಿತ್ತೂರ 1- ಇಲ್ಲಿಯ ರಾಷ್ಟ್ತ್ರೀಯ ಹೆದ್ದಾರಿ ಬದಿ ಇರುವ ಕರ್ನಾಟಕ ರಸ್ತೆ ಸಾರಿಗೆ ಬಸ್ ನಿಲ್ದಾಣವು ಮೂಲಭೂತ ಸೌಲಭ್ಯ ವಿಲ್ಲದೇ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ.

ಬಸ್ ನಿಲಾಣದ ಒಳ ಆವರಣವು ಡಾಂಬರೀ ಕರಣವಿಲ್ಲದ್ದ  ರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸು ತ್ತಿದ್ದಾರಲ್ಲದೇ ಮಣ್ಣಿನ ಹೂಡಿಯ ಧೂಳಿನ ಸ್ನಾನ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರ ಬಟ್ಟೆಗಳ ಪರಿಸ್ಥಿತಿಯಂತೂ ಹೇಳ ತೀರದು.

ಬಸ್ ನಿಲ್ಲಾಣದಲ್ಲಿ ಪ್ರಾಟ್ ಫಾರ್ಮಗಳಿಗೆ ನಾಮಫಲಕವಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. ಅಲ್ಲದೇ ವೇಳಾಪಟ್ಟಿಯಂತೀ ಇಲ್ಲವೇ ಇಲ್ಲ. ಉದರಿಂದ ಯಾವ ಪ್ಲಾಟ್ ಫಾರ್ಮದಿಂದ ಯಾವ ಬಸ್ ಹೊರಡುತ್ತದೆ ಮತ್ತು ಯಾವ ವೇಳೆಗೆ ಬರುತ್ತದೆ ಎಂಬುದು ತಿಳಿಯದಾಗಿದೆ.

ಬಸ್ ನಿಲ್ದಾಣದಲ್ಲಿ ಲ್ಯಾಂಡ್ ಫೋನ್ ವ್ಯವಸ್ಥೆ ಇರುವದುಲ್ಲ. ಒಳ ಆವರಣದಲ್ಲಿಯ  ಬೋರ್ವೆಲ್ ಪೈಪ್ಗೆ ಬಸ್ ಹಾಯ್ದದ್ದರಿಂದ ಅದು ಮಣಿದು ನೀರು ಬಂದಾಗಿದೆ.

ರಾತ್ರಿ 9 ಘಂಟೆಯ ನಂತರ ಬಸ್ ನಿಲ್ದಾಣದ ಒಳಗೆ ಬಸ್ಸುಗಳು ಬರುತ್ತಿಲ್ಲ. ಹೊರಗಿನಿಂದ ಹೊರಗೆ  ಕೆಲವೊಂದು ವೇಳೆ ರಾಷ್ಟ್ತ್ರೀಯ ಹೆದ್ದಾರಿ ಮೇಲೆ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ.

ಮೂತ್ರಾಲಯ ಹಾಗೂ ಶೌಚಾಲಯಗಳು ಸ್ವಚ್ಛತೆ ಇಲ್ಲದೇ ಕೊಳೆತು ಹೊಸಲಸು ನಾರುತ್ತಿವೆ. ಮಲ ವಿಸರ್ಜನೆಗೆ ಹೋಗದಂತಾಗಿದೆ. ಹೊಸಲು ವಾಸನೆ ಆವರಣದಲ್ಲಿ ಬೀಸುತ್ತಿದೆ.

ಮುಂಜಾನೆ ಹಾಗೂ ಸಾಯಂಕಾಲ ಶಾಲಾ-ಕಾಲೇಜ ವಿದ್ಯಾರ್ಥಿಗಳ ಶಾಲೆ ಮುಗಿದ ನಂತರ ವಿದ್ಯಾರ್ಥಿಗಳ ಜಗಳ ಹಾಗೂ ಗಲಾಟೆ ಬಹಳೇ ಆಗಿತ್ತಿದೆ. ಅಲ್ಲದೇ ಉಳಿದ ಸಮುದಾಯದಲ್ಲಿ ಬಹಳ ಜನಸಂದಣಿ ಹೆಚ್ಚಾಗಿದ್ದರಿಂದ ಭದ್ರತಾ ಸಿಬ್ಬಂದಿ ಅವಶ್ಯಕತೆ ಉಂಟಾಗಿದೆ. ಸಧ್ಯ ದಿನಾಲೂ ಕೇಕೇಳಿ ಪ್ರಯಾಣಿಕರಿಗೆ ತೀರಾ ತೊಂದರೆಯಾಗಿದೆ. ಎಂದು ಟವರು ತಿಳಿಸಿದ್ದಾರೆ. ಅಲ್ಲದೇ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ತಲೆ ನೋವಾಗಿದೆ.

ಬಸ್  ನಿಲ್ದಾಣ ನಾಮಕರಣ: ಸಧ್ಯ ಚನ್ನಮ್ಮ ಕಿತ್ತೂರ ಬಸ್ ನಿಲ್ದಾಣ ಎಂದು ನಾಮಫಲಕವಿದ್ದು ಅದನ್ನು ರಾಣಿ ಕಿತ್ತೂರ ಚನ್ನಮ್ಮ ಬಸ್ ನಿಲ್ದಾಣ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದ್ದಾರೆ.

ಬಸ್ ನಿಲ್ಲಾಣದಲ್ಲಿದ್ದ ಹಳೇ ಕಟ್ಟಡವನ್ನು ಕೆಡವಿದ್ದು, ಈ ಸ್ಥಳವು ಖುಲ್ಲಾ ಇದ್ದು ಇದು ಖಾಸಗಿ ವಾಹನಗಳ ನಿಲುಗಡೆ ತಾಣವಾಗಿದೆ. ಇಲ್ಲಿ ಹಲವಾರು ವಾಹನಗಳನ್ನು ನಿಲ್ಲಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಕಸದ ತೊಟ್ಟಿಗಳಿಲ್ಲದೇ ಪ್ರಯಾಣಿಕರು ಹೆಒಲಸನ್ನು ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಚಲ್ಲುತ್ತಿದ್ದು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳದಂತಾಗಿದೆ.

ಅಸಮರ್ಪಕ ಬಸ್ ಸೌಲಭ್ಯ: ಕಿತ್ತೂರ ಅಳ್ನಾವರಕ್ಕೆ ಸಮರ್ಪಕ ಬಸ್ ಸೌಲಭ್ಯವಿಲ್ಲದೇ ಪ್ರಯಾಣಿಕರು ತೊಂದರೆಪಡುತ್ತಿದ್ದಾರೆ. ಮಧ್ಯಾಹ್ನ 3-30 ಗಂಟೆ ನಂತರ ಅಳ್ನಾವರ ಕಡಗೆ ಹೋಗುವ ಬಸ್ ಸೌಕರ್ಯವಿಲ್ಲ. ಕಾರಣ ಪ್ರಯಾಣಿಕರು ದಿನವಿಡಿ ಬಸ್ ಕಾಯುವಂತಾಗಿದೆ.

ವಿಶೇಷವಾಗಿ ಬಸ್ ನಿಲ್ದಾಣ ಉದ್ಘಾಟನೆಗೊಳ್ಳದೇ ಕಾರ್ಯಾರಂಭಗೊಂಡಿದೆ. ಬಸ್ ನಿಲ್ದಾಣ ಕಾರ್ಯಾರಂಭವಾಗಿ ಎರಡು ತಿಂಗಳು ಕಳೆದು ಸಿಬ್ಬಂದಿ ಇಂದು ನಾಳೆ ಉದ್ಘಾಟನೆಗೊಳ್ಳಿದೆ ಎಂದು ಹಾರಿಕೆ  ಮಾತುಗಳನ್ನಾಡುತ್ತಿದ್ದಾರೆ.

ಕಾರಣ ಸಂಬಂಧಪಟ್ಟ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಇತ್ತ ಗಮನ ಹರಿಸಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗ ಬೇಕೆಂದು ಸ್ಥಳೀಯ ಪ್ರಮುಖರು, ಯುವ ವೇದಿಕೆಗಳು ಆಗ್ರಹಿಸಿವೆ. ಒಂದು ವೇಳೆ ವಿಳಂಬಗೊಂಡಲ್ಲಿ ಪ್ರತಿಭಟನೆ ಅನಿವಾರ್ಯವೆಂದೂ ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here