ಬೇಡಿಕೆಗಳಿಗೆ ಆಗ್ರಹಿಸಿ ಬೈಕ್ರ್ಯಾಲಿ

0
15
loading...

ಖಾನಾಪೂರ,30(ಕ.ವಾ)- ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ತಾಲೂಕಿನ ಬೀಡಿ ಗ್ರಾಮದಲ್ಲಿ ದಿ. 30 ರಂದು ಬೈಕ್ ರ್ಯಾಲಿ ನಡೆಯಲಿದೆ. ಅಂದು ಬೆಳಿಗ್ಗೆ ಬೀಡಿ ಗ್ರಾಮದ ಬಸ್, ನಿಲ್ದಾಣದಿಂದ ಪ್ರಮುಖ ರಸ್ತೆಗಳ ಮೂಲಕ ಉಪ ತಹಶೀಲ್ದಾರ ಕಚೇರಿಗೆ ತೆರಳಿ ಬೀಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಪ್ರಮುಖ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಗುವುದು. ಎಂದು ಕರವೇ ತಾಲೂಕಾ ಕಾರ್ಯದರ್ಶಿ ಲಿಯಾಕತಲಿ ತಾಶೇವಾಲೆ ತಿಳಿಸಿದ್ದಾರೆ.

ಬೀಡಿ-ಕಿತ್ತೂರ ರಸ್ತೆ ಸುಧಾರಣೆ ಬೀಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಮತ್ತು ಸಿಬ್ಬಂದಿಯ ನೇಮಕ ಬೀಡಿ ಮುಗಳಿಹಾಳ ಗಂದಿಗವಾಡ ಗುಂಡೇನಟ್ಟಿ ಹಂದೂರ ಕಕ್ಕೇರಿ ರಾಮಾಪೂರ ಮುಂತಾದ ಗ್ರಾಮಗಳ ಸಂಪರ್ಕ ರಸ್ತೆ ಸುಧಾರಣೆ ವೃದ್ದಾಪ್ಯ ಸಂಧ್ಯಾ ಸುರಕ್ಷಾ ಅಂಗವಿಕಲ ವೇತನ ಯೋಜನೆಗಳ ವೇತನ ವಿತರಣೆಯಲ್ಲಿ ಅನುಸರಿಸಲಾಗುತ್ತಿರುವ ವಿಳಂಬ ನೀತಿ ಬೀಡಿಯಲ್ಲಿ ರಾಷ್ಟ್ತ್ರೀಕೃತ ಬ್ಯಾಂಕ್ ಸ್ಥಾಪನೆ ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಈ ಬೈಕ್ ರ್ಯಾಲಿ ಆಯೋಜಿಸಿದ್ದು ಈ ರ್ಯಾಲಿಯಲ್ಲಿ ತಾಲ್ಲೂಕಿನ ಕರವೇ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳು, ರೈತರು ಭಾಗವಹಿಸಬೇಕೆಂದು ಪ್ರಕಟನೆಯಲ್ಲಿ ಕೋರಲಾಗಿದೆ.

loading...

LEAVE A REPLY

Please enter your comment!
Please enter your name here