ಶೂರ್ಪಾಲಿ ದೇವಸ್ಥಾನ ರಕ್ಷಣೆಗೆ ಸರಕಾರ ಬದ್ಧ

0
17
loading...

ಬಾಗಲಕೋಟೆ, 21-ಜಮಖಂಡಿ ತಾಲೂಕಿನಶೂರ್ಪಾಲಿಯಲ್ಲಿನ ಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಮುಳುಗಡೆಯಿಂದ ಸಂರಕ್ಷಿಸುವ ಮೂಲಕ ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ದಿಗೊಳಿಸಲು ಸರಕಾರ ಭರವಸೆ ನೀಡಿದೆ ಎಂದು ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು. ಜಿಪಂ ಸಭಾಭವನದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರ ಅವರು ಶೂರ್ಪಾಲಿ ಅಭಿವೃದ್ದಿಗೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು. ವಿಜಾಪೂರ-ಬಾಗಲಕೋಟ ಅವಳಿ ಜಿಲ್ಲೆಯಲ್ಲಿ ನನೆಗುದ್ದಿಗೆ ಬಿದ್ದಿರುವ ನೀರವಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುವಂತೆ ಅಧಿವೇಶವದಲ್ಲಿ ಒತ್ತಾಯಿಸಲಾಗಿದೆ.

ನಿಗದಿತ ಅವಧಿಯಲ್ಲಿ ಅವುಗಳನ್ನು ಜಾರಿಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರು ಭವರವಸೆ ನೀಡಿದ್ದಾರೆ ಜತೆಗೆ ಚಿಕ್ಕಲಕಿ ಏತ ನರಾವರಿ, ಸಾವಳಗಿ, ಬಬಲೇಶ್ವರ ಏತ ನೀರಾವರಿ ಯೋಜನೆಗೆ 3 ಟಿಎಂಸಿ ನರು ಹಂಚಿಕೆ ಆಗಬೇಕು. ಇದರಿಂದ 38 ಸಾವಿರ ಎಕರೆ ನರಾವರಿ ವ್ಯಾಪ್ತಿಗೆ ಒಳಪಡಿಸಲಿದೆ. ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

 

loading...

LEAVE A REPLY

Please enter your comment!
Please enter your name here