ಶ್ರೀಕ್ಷೇತ್ರ ಗೊಡಚಿ ವೀರಭದ್ರೇಶ್ವರ ಪುಣ್ಯ ಕ್ಷೇತ್ರ

0
73
loading...


ಉತ್ತರಕರ್ನಾಟಕದಲ್ಲಿ ಹಲವಾರು ಪ್ರಮುಖ ಜಾತ್ರೆಗಳು ನಡೆಯುತ್ತಿವೆ ಅವುಗಳಲ್ಲಿ  ಉತ್ತರ ಕರ್ನಾಟಕದ ಧರ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಗೋಡಚಿಯ ವೀರಭದ್ರೇಶ್ವರ ಜಾತ್ರೆಯು ಡಿಸೆಂಬರ 10 ರಿಂದ 5 ದಿನಗಳ ಕಾಲ ನಡೆಯಲಿದೆ. ಗೋಡಚಿ ಕ್ಷೇತ್ರವು ಕರ್ನಾಟಕದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಕ್ಷೇತ್ರದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಅದು ನಮ್ಮ ಅರಿವಿಗೆ ಬರುತ್ತದೆ. ಅದಕ್ಕಾಗಿ ಜಾತ್ರೆಯ ವಿಷಯಕ್ಕಿಂತ ಮೊದಲು ಗೋಡಚಿ ಕ್ಷೇತ್ರದ ಬಗ್ಗೆ ತಿಳಿಸದೆ ಹೋದರೆ ಪ್ರಮಾದವಾಗುತ್ತದೆ.

ಶಿಕರವೀರಷಿರ ನಾಡು :

ಗೋಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿ ಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೋಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುದರಿಂದ ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ.

ಕೋಲ್ಹಾಪೂರ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಈ ಕ್ಷೇತ್ರದಲ್ಲಿ ಕಲ್ಯಾಣದ ಕ್ರಾಂತಿಯು ನಿರಂತರವಾಗಿ ನಡೆದ ಶರಣರು ಉಳವಿ ಕ್ಷೇತರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜ್ಜಳನ ಸೈನ್ಯ ಶರಣರನ್ನು ಪುನಃ ಬೆನ್ನಟ್ಟಿದ ಸಮಯದಲ್ಲಿ ಶರಣರು ಕತ್ತಿಹಿಡಿದು ಹೋರಾಟ ಮಾಡಿ ಬಿಜ್ಜಳನ ಸೈನ್ಯವನ್ನು ಎದುರಿಸಿದ ಸ್ಥಳ ಈ ಕ್ಷೇತ್ರದಲ್ಲಿ ಶರಣರಿಗೆ ವಿಜಯಲಭಿಸಿದ್ದರಿಂದ ಇದನ್ನು ಶಿಕರವೀರಷಿರ ನಾಡೆಂದು ಕರೆಯಲಾಗುತ್ತಿದೆ ಎಂಬುದು ತಿಳಿದು ಬರುತ್ತಿದೆ.

  ಗೋಡಚಿ ಎಂದು ಹೆಸರು ಬರಲು ಕಾರಣ : ಇಂದು ಹಲವಾರು ಗ್ರಾಮಗಳಿಗೆ ವಿವಿಧ ಹೆಸರಿನಿಂದ ಕರೆಯಲ್ಪಡುತ್ತಿವೆ ಕೆಲವೊಂದು ಗ್ರಾಮಕ್ಕೆ ಆ ಗ್ರಾಮದ ಹೆಸರಿನ ಹಿಂದೆ ಇತಿಹಾಸ ಇರುವಂತೆ ಈ ಗೋಡಚಿ ಕ್ಷೇತ್ರಕ್ಕೆ ಹೆಸರು ಬರಲು ಕೂಡಾ ಇತಿಹಾಸವಿದೆ.  ಗೋಡಚಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀವೀರಭದ್ರನ ದೇವಸ್ತಾನವು ಅಂದು ಗಿಡಕಂಟೆಗಳಿಂದ ತುಂಬಿಕೊಂಡಿತ್ತು ಅದರಲ್ಲಿಯೂ ವಿಶೇಷವಾಗಿ ಕೊಡಚಿಕಂಟೆಗಳಿಂದ ತುಂಬಿಕೊಂಡಿತ್ತು ಅದಕ್ಕೆ ಇದು ಮೊದಲು ಕೊಡಚಿಕ್ಷೇತ್ರವೆಂದಾಯಿತು. ಕೊಡಚಿಯೇ ಇಂದು ರೂಡಿಯಲ್ಲಿ ಲಿಕಳಿಕಾರ ಮಾಯವಾಗಿ ಲಿಗಳಿಕಾರ ಆಗಮನದಿಂದಾಗಿ ಗೋಡಚಿ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕೊಡಚಿಕಂಟೆಯಲ್ಲಿ ನೆಲೆಸಿದ್ದ ವೀರಭದ್ರನನ್ನು ಕೊಡಚಪ್ಪ ಎಂದು ಕರೆಯುತ್ತಿದ್ದ ಜನ ಇಂದು ಗೋಡಚಪ್ಪನೆಂದು ಕರೆಯುತ್ತಿದ್ದಾರೆ.

ಗೊಡಚಿಯ ಶ್ರೀ ವೀರಭದ್ರನ ಕ್ಷೇತ್ರವು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವರ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ಅಲ್ಲದೆ ಬಹುಜನರಿಗೆ ವೀರಭದ್ರನು ಮನೆದೇವರು, ಕುಲದೇವರು ಅಲ್ಲದೆ ಆರಾಧ್ಯ ದೇವರಾಗಿ ವೀರಭದ್ರನಿದ್ದಾನೆ.  ಉತ್ತರಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಇಲ್ಲಿ ದರ್ಶನಕ್ಕೆ ಬಂದು ಹೋಗುತ್ತಾರೆ.

ಗೋಡಚಿ ಕ್ಷೇತ್ರದ ಪರಿಚಯ : ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ದ್ವಾರವು  ಪೂರ್ವದಿಕ್ಕಿಗಿದ್ದು ಇದರ ಮುಂಭಾಗದಲ್ಲಿ ಹಳ್ಳವೊಂದು ಹರಿದಿದೆ. ವೀರಭದ್ರನ ದೇವಸ್ಥಾನದ ಮುಂದೆ ವಿಶಾಲವಾದ ಮೈದಾನವಿದೆ ಈ ಮೈದಾನಕ್ಕೆ ಲಿರಣಬಾಜಿಳಿ ಪ್ರದೇಶವೆಂದು ಹಳ್ಳಕ್ಕೆ ಲಿಹಿರೇಹಳ್ಳಳಿವೆಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಶರಣರು ಯುದ್ಧ ಸಮಯದಲ್ಲಿ ವಿಜಯಶಾಲಿಗಳಗಿದ್ದರಿಂದ ಈ ಹಳ್ಳದಲ್ಲಿ ವಿಜಯಿಯಾದ ಶರಣರ ಪಾದದೂಳಿಯಿಂದ ಹರಿದು ಬಂದ ಜಲ ಪವಿತ್ರ ಪಾದೋದಕದ ಮಹಿಮೆಯನ್ನು ಹೊಂದಿದೆ ಎಂಬುದು ಭಕ್ತರ ನಂಬಿಕೆ. ಕಾರಣ ಈ ಕ್ಷೇತ್ರಕ್ಕೆ ಬಂದ ಭಕ್ತರೆಲ್ಲ ಈ ಜಲದಲ್ಲಿ ಮಿಂದ ಬಳಿಕವೆ ವೀರಭದ್ರನ ದರ್ಶನಕ್ಕೆ ಹೋಗುವದು ಸಂಪ್ರದಾಯ ಇಂದಿಗೂ ಇದೆ. ಆದರೆ ದುರ್ದೈವದಿಂದಾಗಿ ಹೀರೆಹಳ್ಳ ಎಲ್ಲ ಸಮಯದಲ್ಲಿ ನೀರು ಇರುವದಿಲ್ಲ ಇದನ್ನು ಅರಿತು ದೇವಸ್ಥಾನದ ಆಡಳಿತ ಮಂಡಳಿಯವರು ಕ್ಷೇತ್ರದಲ್ಲಿ ಸ್ನಾನಗೃಹ ಹಾಗೂ ಕುಡಿಯುವ ನೀರಿಗಾಗಿ ಉತ್ತಮ ವ್ಯವಸ್ತೆ ಮಾಡಿಸಿದ್ದಾರೆ.

ವೀರಭದ್ರನ ದೇವಸ್ಥಾನದ ಹಿಂದೆ ಮಡಿವಾಳ ಮಾಚಿದೇವ(ಮುದೀವೀರಣ್ಣ)ನ ದೇವಸ್ಥಾನ, ಎಡಗಡೆ ಭದ್ರಕಾಳಿ ದೇವಸ್ಥಾನ ಇರುವದರಿಂದ ಕ್ಷೇತ್ರಕ್ಕೆ ಮತ್ತಷ್ಟು ಮೆರಗು ಬಂದಿದೆ.

 ಕಟ್ಟಡದ ಮಾದರಿ : ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವು ದ್ರಾವಿಡ ಮಾದರಿಯನ್ನು ಹೋಲುತ್ತಿದ್ದು ಚಾಲುಕ್ಯರ ಮಾದರಿಯ ಶಿಲ್ಪವನ್ನು ಕಾಣಬಹುದಾಗಿದೆ ಅಲ್ಲದೆ ದೇವಸ್ಥಾನಕ್ಕೆ ಆಕರ್ಷಕ ಕಳಸವನ್ನು ಮಾಡಲಾಗಿದೆ. ಅಲ್ಲದೆ ದೇವಸ್ಥಾನದ ಒಳಾಂಗಣದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿರುವ ಎತ್ತರವಾದ ದೀಪಸ್ತಂಭವನ್ನು ನೋಡಬಹುದು ಇದೆಲ್ಲವನ್ನು ಗಮನಿಸಿದಾಗ ಈ ಕಟ್ಟಡ 17ನೇ ಶತಮಾನದಲ್ಲಿ ಕಟ್ಟಿದ ದೇವಸ್ಥಾನವೆಂದು ಪ್ರಾಚ್ಯವಸ್ತು ಸಂಶೋಧಕರ ಅಭಿಪ್ರಾಯವಾಗಿದೆ.

ಕಳೆದ ಹಲವು ವರ್ಷಗಳಿಂದ ಶ್ರೀ ವೀರಭದ್ರಶ್ವರ ದೇವಸ್ಥಾನದ ಟ್ರಸ್ಟ ಕಮೀಟಿಯವರು ಕ್ಷೇತ್ರದ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕೊಟಡಿಗಳನ್ನು ,ಸ್ನಾನಗೃಹ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿದ್ದಲ್ಲದೆ ನಿರಂತರ ಅನ್ನದಾಸೋಹವನ್ನು ಸಹಿತ ಏರ್ಪಡಿಸಿದ್ದಾರೆ. ಇನ್ನು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸುಲಭವಾಗಿ ದೇವಸ್ಥಾನದ ಮಾರ್ಗ ತಿಳಿಯಲು ಅನುಕೂಲವಾಗಲಿ ಎಂದು   ಕ್ಷೇತ್ರಕ್ಕೆ ಬರುವ ಪ್ರಮುಖ 9 ರಸ್ತೆಗಳಾದ ರಾಮದುರ್ಗ, ಸುನ್ನಾಳ, ಕೆ.ಚಂದರಗಿ, ಕಟಕೋಳ, ಮುನವಳ್ಳಿ, ನರಸಾಪೂರ ಹಾಗೂ ಸಾಲಹಳ್ಳಿ ಗ್ರಾಮಗಳ ಹತ್ತಿರ ಬೃಹತ್ ದ್ವಾರಭಾಗಿಲುಗಳನ್ನು ನಿರ್ಮಿಸಿ ದ್ವಾರ ಭಾಗಿಲುಗಳ ಮೇಲೆ ಗೋಡಚಿ ವೀರಭದ್ರ ಹಾಗೂ ಭದ್ರಕಾಳಿ ವಿಗ್ರಹಗಳನ್ನು ನಿರ್ಮಿಸಿ ಪ್ರಯಾಣಿಕರಿಗೆ ದರ್ಶನ ಮಾಡಿಸುವದು ವಿಶೇಷವಾಗಿದೆ.

ವೀರಭದ್ರ ದೇವರು : ಗೋಡಚಿ ಕ್ಷೇತ್ರದ ಕ್ಷೇತ್ರಾಧಿಪತಿಯಾದ ವೀರಭದ್ರನವಾರವು ಮಂಗಳವಾರವಾಗಿದ್ದು ಅಲ್ಲದೆ ಚನ್ನಬಸವಣ್ಣನವರು ಮಂಗಳವಾರ ಉಳವಿಗೆ ಪ್ರಯಾಣ ಬೆಳೆಸಿದ್ದರಿಂದ ಪ್ರತಿ ಮಂಗಳವಾರ ಕ್ಷೇತ್ರದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿದೆ.  ಕಲ್ಯಾಣದ ಕ್ರಾಂತಿಯಿಂದಾಗಿ ಆತ್ಮರಕ್ಷಣೆಗೆಂದು ಹೊರಟ 12 ಸಾವಿರ ಗಣಗಳು ಚನ್ನಬಸವಣ್ಣನವರ ನೇತೃತ್ವದಲ್ಲಿ ಇಲ್ಲಿ ಕೆಲಕಾಲ ಉಳಿದು ನಂತರ ಉಳವಿಗೆ ಪ್ರಯಾಣ ಬೆಳೆಸಿದ್ದರು ಎಂದು ಇತಿಹಾಸವಿದೆ.

ಶಿವಶರಣರ ಯುದ್ಧ ಚಿನ್ಹೆ ವೀರಭದ್ರನಾಗಿದ್ದರಿಂದ ಅವನ ಅನುಗೃಹ ಪಡೆಯಲು ಇಲ್ಲಿಗೆ ಶರಣರು ಬಂದಿದ್ದರೆಂದುನ ಹೇಳಲಾಗುತ್ತಿದೆ ಭಕ್ತರು ಇಗಲು ಸಹ ವೀರಭದ್ರನ ಕೈಯಲ್ಲಿ ಕತ್ತಿ ಇರುವದನ್ನು ಕಾಣಬಹುದಾಗಿದೆ.

ಜಾತ್ರೆಯ ವೈಶಿಷ್ಟ್ಯ :

ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಸೇರುವ ಗೋಡಚಿಯ ವೀರಭದ್ರೇಶ್ವರ ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ. ಈ ಜಾತ್ರೆಯಲ್ಲಿ ಮಾರುವಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಜಾತ್ರೆಯಲ್ಲಿಯೂ ಈ ಹಣ್ಣುಗಳು ಮಾರಾಟವಾಗುವದಿಲ್ಲ ಎಂದು ಸ್ವತಃ ವ್ಯಾಪಾರಸ್ಥರು ಹೇಳುತ್ತಾರೆ. ಹಣ್ಣುಗಳಲ್ಲದೆ ಅಷ್ಟೆ ದೊಡ್ಡ ಪ್ರಮಾನದಲ್ಲಿ ವಿಭೂತಿ, ರುದ್ರಾಕ್ಷಿ ಹಾಗೂ ಕುಂಕುಮದ ಮಾರಾಟ ಕೂಡಾ ಆಗುತ್ತದೆ.

ನೀವೆನಾದರು ಜಾತ್ರೆಳೊಗೆ ಪ್ರವೇಶ ಮಾಡಿದರೆ ಟೆಂಗಿನಕಾಯಿ, ಬಾಳೆ ಹಣ್ಣು, ಬಳೂಲ ಹಣ್ಣು, ಬಾರೆಹಣ್ಣುಗಳ ಮತ್ತು ಬಳೆಗಳ ಅಂಗಡಿ, ವಿವಿಧ ತರಹದ ಬಝಾರಗಳು ಸಾಲು ಸಾಲಾಗಿರುವದನ್ನು ನೊಡಿದರೆ ನೋಡುಗರ ಕಣ್ಣು ಕುಕ್ಕುತ್ತವೆ.

ಜಾತ್ರಾ ಸಮಯ : ಸತತ 5 ದಿನಗಳ ಕಾಲ ನಡೆಯುವ ವೀರಭದ್ರೇಶ್ವರ ಜಾತ್ರೆಯು ಪ್ರತಿ ವರ್ಷ ಕ್ಯಾಲೇಂಡರದ ಕೊನೆಯ ತಿಂಗಳು ಅಂದರೆ ಡಿಸೆಂಬರ ತಿಂಗಳಲ್ಲಿ ಬರುವ ಹೊಸ್ತಲ ಹುಣ್ಣಿಮೆಯ ದಿನ ರಥೋತ್ಸವ ಜರುಗುವದು ಡಿಸೆಂಬರ ತಿಂಗಳಲ್ಲಿ ಮೈಕೊರೆಯುವ ಚಳಿಯಿದ್ದರು ಸಹಿತ ಅಸಂಖ್ಯಾತ ಭಕ್ತಾಧಿಗಳು ಜಾತ್ರೆಯಲ್ಲಿ ಪಾಲ್ಗೊಂಡು ವೀರಭದ್ರ ಭದ್ರಕಾಳಿಯ  ಕೃಪೆಗೆ ಪಾತ್ರರಾಗುತ್ತಾರೆ. ಕ್ಷೇತ್ರದ ಸುತ್ತಲಿನ ಗ್ರಾಮದ ಭಕ್ತರು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಆಗಮಿಸಿದರೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಾಪೂರ, ನರಗುಂದ, ಜಮಖಂಡಿ, ಸವದತ್ತಿ ಮುಂತಾದ ಸ್ಥಳಗಳಿಂದ ವಿಶೇಷ ಜಾತ್ರಾ ವಾಹನದ ವ್ಯವಸ್ಥೆ ಮಾಡಿರುವ ಬಸ್ಗಳಲ್ಲಿ ಬಂದು ವೀರಭದ್ರನ ದರ್ಶನ ಪಡೆದು ಪಾವನರಾಗುತ್ತಾರೆ. ಇನ್ನೇಕ ತಡ ನವು ಕೂಡಾ ಗೋಡಚಿ ವೀರಭದ್ರೇಶ್ವರ ಜಾತ್ರೆಗೆ ಸಿದ್ಧರಾಗಿ ಬನ್ನ ದರ್ಶನ ಪಡೆದು ಪುನತರಾಗೋಣ.

 

 

 

 

loading...

LEAVE A REPLY

Please enter your comment!
Please enter your name here